ಹೆಸರುಗಳಿಸೋ ಭರದಲ್ಲಿ


ಹೆಸರುಗಳಿಸೋ ಭರದಲ್ಲಿ
ಜವಾಬ್ದಾರಿ ಮರೆಯಬೇಡಿ
ಉಪಕಾರ ಮಾಡೋ ನೆಪದಲ್ಲಿ
ಉಪದ್ರವನ್ನ ಮಾಡಲೇಬೇಡಿ,

ದಾನ ಧರ್ಮ ಮಾಡೋದಿದ್ದರೆ
ನಯವಿನಯತೆ ರೂಡಿಸಿಕೊಳ್ಳಿ
ಧನವಂತರಾದ ಮಾತ್ರಕೆ
ನಿಮ್ಮ ಕೆಟ್ಟಗುಣವನ್ನು ತೋರಿಸಬೇಡಿ,

ಉಸಿರಿದ್ದರೆ ಹೆಸರು
ಗುಣವಿರದಿದ್ದರೂ ಹೆಸರೇ
ಹಣವಿದ್ದರೆ ಮತ್ತೂ ಹೆಸರೇ
ಇದೆಲ್ಲದರ ನಡುವೆ ನಿಲ್ಲದಿರಲಿ ಉಸಿರೇ...
-ಮಾಧವ ಅಂಜಾರು

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ