ಮನೆಯ ಮುಂದೆ
ಮನೆಯ ಮುಂದೆ
ನಿಂತಿತ್ತು ಎರಡು ಕಾರು
ದಣಿವಾಗಿ ಕಂಡೆ ಅವರ ಸೂರು
ಸಿಗಲಿಲ್ಲ ಒಂದು ಲೋಟ ನೀರು ....!
ಮನೆಯ ಮುಂದೆ
ಬೆಳೆದಿತ್ತು ಹೂವ ತೋಟ
ಕೇಳಿದೆ ಹೂವ ಹೆಸರು
ಏದುಸಿರು ಬಿಟ್ಟರು ಜೋರು ...!
ಮನೆಯ ಮುಂದೆ
ಕಾಯೋಕೆ ಎರಡು ನಾಯಿ
ಮನೆಯಂಗಳಕೆ ಕಾಲಿಟ್ಟರು
ಮನೆಯೊಡೆಯ ತೆರೆಯಲಿಲ್ಲ ಬಾಯಿ ..!
ವರುಷ ಕಳೆಯಿತು ಸುಮಾರು
ಕಾಣಲಿಲ್ಲ ,ಕಾರು
ಇರಲಿಲ್ಲ ಹೂವ ತೋಟ
ಮನೇಲಿ ಕಾಣಸಿಗಲಿಲ್ಲ ಯಾರೂ ..!
-ಮಾಧವ ಅಂಜಾರು
ನಿಂತಿತ್ತು ಎರಡು ಕಾರು
ದಣಿವಾಗಿ ಕಂಡೆ ಅವರ ಸೂರು
ಸಿಗಲಿಲ್ಲ ಒಂದು ಲೋಟ ನೀರು ....!
ಮನೆಯ ಮುಂದೆ
ಬೆಳೆದಿತ್ತು ಹೂವ ತೋಟ
ಕೇಳಿದೆ ಹೂವ ಹೆಸರು
ಏದುಸಿರು ಬಿಟ್ಟರು ಜೋರು ...!
ಮನೆಯ ಮುಂದೆ
ಕಾಯೋಕೆ ಎರಡು ನಾಯಿ
ಮನೆಯಂಗಳಕೆ ಕಾಲಿಟ್ಟರು
ಮನೆಯೊಡೆಯ ತೆರೆಯಲಿಲ್ಲ ಬಾಯಿ ..!
ವರುಷ ಕಳೆಯಿತು ಸುಮಾರು
ಕಾಣಲಿಲ್ಲ ,ಕಾರು
ಇರಲಿಲ್ಲ ಹೂವ ತೋಟ
ಮನೇಲಿ ಕಾಣಸಿಗಲಿಲ್ಲ ಯಾರೂ ..!
-ಮಾಧವ ಅಂಜಾರು
Comments
Post a Comment