ನಿಮ್ಮ ಓಟು

ನಿಮ್ಮ ಓಟು
ನಾಯಕತ್ವ ಇರೋರಿಗೆ 
ಹಾಕಿ ಬನ್ನಿ
ಬರೀ ಕುರ್ಚಿಗಾಗಿ
ಒದ್ದಾಡೋ ನಾಲಯಕರಿಗೆ
ಕ್ಯಾಕರಿದು ಉಗಿದುಬನ್ನಿ

ನಿಮ್ಮ ಓಟು
ಸರಿಯಾದ ನಾಯಕನಿಗೆ
ಹಾಕಿ ಬನ್ನಿ
ಸಾವಿರದ  ನೋಟು
ನಿಮ್ಮ ಕೈಲಿ ಕೊಡೋರು ಇದ್ದರೆ
ಆ ದುಡ್ಡು ನಿನ್ನ ಅಪ್ಪನದೇ ಅನ್ನಿ ?

ನಿಮ್ಮ ಓಟು
ನಾಲಯಕನಿಗೆ ಹಾಕಿ ಬನ್ನಿ
ಮತ್ತೆ ದಿನಾಲು ಹೆಕ್ಕಿ ತಿನ್ನಿ
ನಿಮ್ಮ ಓಟು
ನಿಮಗಾಗಿ ಹಾಕಿಬನ್ನಿ
ಫಲಿತಾಂಶ ಬಂದಮೇಲೆ ನನ್ನದೇ ಪಕ್ಷವೆನ್ನಿ ,

ನಿಮ್ಮ ಓಟು
ಸುಭದ್ರ ದೇಶಕ್ಕಾಗಿ
ಹಾಕಿಬನ್ನಿ,
ನಿಮ್ಮ ನಾಯಕ
ಜಯಗಳಿಸಲೆಂದು
ನಿಮ್ಮವರ ಓಟು ಹಾಕಿಸಿ ಬನ್ನಿ ......!
              -ಮಾಧವ ಅಂಜಾರು

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ