ಅಲ್ಲಿ ಅಧಿಕಾರ ಉಳಿಸಿಕೊಳ್ಳಲು

ಅಲ್ಲಿ ಅಧಿಕಾರ ಉಳಿಸಿಕೊಳ್ಳಲು
ರೆಸಾರ್ಟುಗಳಿಗೆ ಓಡಾಟ
ಇಲ್ಲಿ ಸರಕಾರಿ ಕಛೆರಿಗೆ
ಜನರರೆಲ್ಲರ ಓಡಾಟ
ಕೆಲಸವೇ ಆಗದೇ
ದಿನವೆಲ್ಲಾ ಪರದಾಟ

ಅಲ್ಲಿ ಅಧಿಕಾರ ಗಳಿಸಿಕೊಳ್ಳಲು
ಮಂತ್ರಿಗಳ ತಿಕ್ಕಾಟ
ಇಲ್ಲಿ ಜನಸಾಮಾನ್ಯರಿಗೆ
ಸಿಗುತ್ತಿಲ್ಲ ಒಂದು ಹೊತ್ತಿನೂಟ
ಕೆಲಸವೇ ಸಿಗದೇ
ದಿನಪೂರ್ತಿ ಕಷ್ಟ ನಷ್ಟ

ಅಲ್ಲಿ ಅಧಿಕಾರ ಪಡೆದುಕೊಂಡು
ನಡೆಯುತ್ತಿದೆ ರಂಪಾಟ
ಇಲ್ಲಿ ವೋಟು ಕೊಟ್ಟವನಿಗೊಂದು ಪಾಠ
ಮಂತ್ರಿಗಳ ಕೈಲಿ ದೊಡ್ಡ ಪೇಟ
ಮತದಾರನ ಕೈಗೆ ಕೊಟ್ಟರು ಗೂಟ
- ಮಾಧವ ಅಂಜಾರು

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ