ತಂದೆಯಾದವನ ಆಸೆ,

ತಂದೆಯಾದವನ ಆಸೆ,
ಮಗ ದೊಡ್ಡವನಾಗಿ
ನಮ್ಮನ್ನು ಸಾಕಲಿ
ನಡೆಯಲಾಗದಿದ್ದರೆ
ಕೈ ಹಿಡಿದು ನಡೆಸಲಿ ,

ವಿದ್ಯಾವಂತನಾಗಿ
ಕೀರ್ತಿಯನು ಗಳಿಸಲಿ
ಧೈರ್ಯದಲಿ  ಮುನ್ನಡೆಯೊ
ಸಜ್ಜನನಾಗಿ ಬಾಳಲಿ
ಮುಪ್ಪಿನ ಸಮಯದಲಿ
ತುತ್ತು ಅನ್ನ ಉಣಿಸಲಿ

ದೃಷ್ಟಿ ಹೀನವಾಗಿ
ಪರದಾಟ ಮಾಡಿದರೆ
ಪ್ರೀತಿಯಲಿ ಮಾತಾಡಲಿ
ಕೋಲು ಹಿಡಿದು ನಡೆಯುವಾಗ
ಹೆಗಲ ಕೊಟ್ಟು ನಡೆಸಲಿ
ಪ್ರಾಣ ಪಕ್ಷಿ ಹಾರಿ ಹೋದರೆ
ಕಣ್ಣೀರ ಸುರಿಸದಿರಲಿ ,,,, !
                -ಮಾಧವ ಅಂಜಾರು





Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ