ಭಕ್ತಿಯನು ಹುಂಡಿಗೆ ಹಣಹಾಕಿ

ಭಕ್ತಿಯನು ಹುಂಡಿಗೆ ಹಣಹಾಕಿ
ವ್ಯಕ್ತಪಡಿಸಬೇಕಾಗಿಲ್ಲ ..!
ನಿಮ್ಮ ಬೇಡಿಕೆ ಈಡೇರಿಸಲು
ಪ್ರತೀ ಧರ್ಮದವರು
ನಿಮ್ಮ ದೇವರಿಗೆ
ಲಂಚ ಕೊಡಬೇಕಾಗಿಲ್ಲ... !

ನಿಮ್ಮ ಯುಕ್ತಿಯನು -
ಬಡವರ ಮೇಲೆ ತೋರಿಸಬೇಕಾಗಿಲ್ಲ ..!
ಅತೀ ಶಕ್ತಿಯನು
ಕೈಲಾಗದವರ ಮೇಲೆ
ತೋರಿಸೋದು ಸಲ್ಲ
ಅದು , ಜೀವನವೇ ಅಲ್ಲ ..!

ಕೊಡುವವನೇ ದೇವರು ..
ಬೇಡುವವನೇ ಭಕ್ತ ... !
ಕೊಡುವವನು ನೀನಾಗು
ಬೇಡುವವನೂ  ನೀನಾಗು
ಆದರೆ,ಭಕ್ತ ಕೊಟ್ಟ ಕಾಣಿಕೆ
ಹುಂಡಿ ತುಂಬೋದೇ ಇಲ್ಲ ...!
    -ಮಾಧವ ಅಂಜಾರು




Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ