ಕಳ್ಳನಾಗಲು

ಕಳ್ಳನಾಗಲು 
ಪ್ರಯತ್ನಿಸಿದೆ
ಕಳ್ಳನ ಒಳಗುಟ್ಟು ತಿಳಿಯಲು

ಸುಳ್ಳನಾಗಲು 
ಪ್ರಯತ್ನಿಸಿದೆ
ಸುಳ್ಳನ ಸುಳಿ ಮಾತು ತಿಳಿಯಲು

ಅಲ್ಪ ಸಮಯಕೆ
ಕಳ್ಳನಾದರೂ , ಸುಳ್ಳನಾದರೂ
ತಿಳಿಯಲೇ ಇಲ್ಲ ಅವರ ತಿರುಳು ,

ಅರ್ಥವಾಯಿತು ಕೊನೆಗೆ
ಕಳ್ಳ , ಸುಳ್ಳನ- ಕಲೆ
ಅವರ ಹುಟ್ಟುಗುಣದ ಕಲೆ .
             -ಮಾಧವ ಅಂಜಾರು


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ