ದೇಶ ಬಿಟ್ಟು ವಿದೇಶ
ದೇಶ ಬಿಟ್ಟು ವಿದೇಶ
ಕಾಲಿಟ್ಟ ದಿನವೇ ವಿಷ
ಕನಸು ಹೊತ್ತು ಪ್ರವೇಶ
ನನಸಾಗಲಿಲ್ಲ ಈಶ..
ಮೋಸದ ಬಲೆಗೆ ತುತ್ತಾದೆ
ದುಷ್ಟರ ಆಟಕೆ ಬಲಿಯಾದೆ
ಕಷ್ಟದ ದಿನಕೆ ಗುರಿಯಾದೆ
ದೇಶವ ನೆನೆದು ಕೈಮುಗಿದೆ,
ಅನ್ನವ ಅರಸಿ ಬಂದವನಿಗೆ
ಕೈ ಕೊಳ ತೊಡಿಸುವರೆಂದಾಗ
ನನ್ನ ಮನೆಮಂದಿಯರೆನಿಸಿ
ಕಣ್ಣೀರ ಹರಿಸಿ ಸ್ಥಿರವಾದೆ..
ಶಪಿಸುವೆ ನಾನು ಬಲವಾಗಿ
ನನ್ನ ಖುಷಿಯನ್ನು
ನಶಿಸಿದ ದುಷ್ಟರಿಗೆ
ದೇವರೇ ಶಿಕ್ಷಿಸು ಸರಿಯಾಗಿ
ನಮ್ಮನು ರಕ್ಷಿಸು ಸುಳಿಯಿಂದ
ತಾಯ್ನಾಡಿಗೆ ಮರಳಿಸು
ನಾ ನಿನ್ನ ಕಂದ
ನನ್ನ ಕೂಗನು ಕೇಳುವೆಯ
ಮರಳಿ ತಾಯ್ನಾಡಿಗೆ ಸೇರಿಸು
ನಮ್ಮೆಲ್ಲರನು ಉಳಿಸು
-ಮಾಧವ ಅಂಜಾರು
Comments
Post a Comment