ನಮ್ಮ ದೇಶದಲ್ಲಿ

ನಮ್ಮ ದೇಶದಲ್ಲಿ
ಪ್ರಾಮಾಣಿಕತೆಗೆ
ಬೆಲೆ ಕೊಡುವವರು
ಬಹಳ ವಿರಳ ...!

ತಮ್ಮ ಸ್ವಾರ್ಥಕ್ಕಾಗಿ
ಸರಕಾರಿ ಉದ್ಯೋಗದ
ದುರುಪಯೋಗ
ಹಣ ಸಂಪಾದನೆಗೆ
ಲಂಚಾವತಾರದ ಯೋಗ ,

ಎಷ್ಟು ಕೆಳಮಟ್ಟದಲ್ಲಿ
ಅವರ ಬದುಕೆಂದರೆ
ನ್ಯಾಯ ಕೊಡಿಸಬೇಕಾದವರು
ಅನ್ಯಾಯ ಮಾಡುವರು
ರಕ್ಷಕನಾಗಿ ಇರಬೇಕಾದವರು
ಭಕ್ಷಕನಾಗಿ ಬದುಕುವರು,

ಧಿಕ್ಕಾರವಿರಲಿ
ಅಪ್ರಾಮಾಣಿಕರಿಗೆ
ನರಕ ಯಾತನೆ ಸಿಗಲಿ
ವಂಚನೆ ಮಾಡುವವರಿಗೆ,
ಬೆಲೆ ಸಿಗಲಿ ಪ್ರಾಮಾಣಿಕರಿಗೆ ,
                    -ಮಾಧವ ಅಂಜಾರು





Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ