ಲೇಖನ -80)- ಕ್ಷಮೆ ಇರಲಿ - ಕ್ಷಮಿಸಿ ಬಿಡು ನನ್ನನು , ಈ ಹಿಂದೆ ನಾನು ಮಾಡಿರುವ ಪ್ರತಿ ತಪ್ಪಿಗೆ ಕ್ಷಮೆಯಿರಲಿ.
( ಲೇಖನ -80)- ಕ್ಷಮೆ ಇರಲಿ - ಕ್ಷಮಿಸಿ ಬಿಡು ನನ್ನನು , ಈ ಹಿಂದೆ ನಾನು ಮಾಡಿರುವ ಪ್ರತಿ ತಪ್ಪಿಗೆ ಕ್ಷಮೆಯಿರಲಿ. ನಾನು ನಿನ್ನ ಹೀಯಾಳಿಸಿರಬಹುದು, ನಾನು ನಿನನ್ನು ಬೈದಿರಬಹುದು, ನಾನು ನಿನ್ನನ್ನು ಹೊಡೆದಿರಬಹುದು, ನಾನು ನಿನಗೆ ಸಂತೋಷ ಕೊಡದಿರಬಹುದು, ಗೊತ್ತಿಲ್ಲದೆ ಮಾಡಿದ ಪ್ರತಿಯೊಂದು ತಪ್ಪಿಗೆ ನಿನ್ನಲ್ಲಿ ಕ್ಷಮೆ ಕೇಳುವೆ, ಎನ್ನ ಗುರುವೇ, ಎನ್ನ ತಂದೆ ತಾಯಿ, ಬಂದು ಬಳಗ, ಸಂಬಂಧಿಗಳೇ, ಮತ್ತು ನನ್ನ ಹೆಂಡತಿ ಮಕ್ಕಳೇ. ಸಹ ಕೆಲಸಾಗರರೇ, ಎನ್ನ ಶ್ರಮಕ್ಕೆ ಬೆಲೆ ಕೊಡುವ ನೀವುಗಳೇ ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿಬಿಡಿ. ಈ ಪ್ರಪಂಚದಲ್ಲಿ ಬದುಕಿರುವ ಪ್ರತೀ ಜೀವಿಗಳೇ, ನನ್ನನು ಕ್ಷಮಿಸು. ಮಾನವನಾದ ಎನಗೆ ದ್ವೇಷ, ಮೋಹ, ಮದ ಮತ್ಸರ, ನಗು, ಗೌರವ, ಸೌಜನ್ಯ, ಮರ್ಯಾದೆ, ಸಹಾಯ, ಪ್ರೀತಿ, ಪ್ರೇಮ ಎಲ್ಲವನ್ನು ಕಲಿಸಿದ್ದಾರೆ, ನನ್ನ ಇತಿಮಿತಿಯನ್ನು ದಾಟಿ ವ್ಯವಹರಿಸಿದ್ದರೆ ದಯವಿಟ್ಟು ಕ್ಷಮಿಸಿಬಿಡು. ನನ್ನ ವಯಸ್ಸು ಇದ್ದರೆ ಇರಬಹುದು 60 70 80, ಅದಕ್ಕಿಂತಲೂ ಮುಂಚೆ ನಾನು ಇಹಲೋಕ ತ್ಯಜಿಸಬಹುದು, ಭವಿಷ್ಯವನ್ನು ಅರಿಯದ ನಾನು ಈವರೆಗೆ ಇರುವುದೇ ನಿಮ್ಮೆಲ್ಲರ ಆಶೀರ್ವಾದದಿಂದ, ದೇವರು ನೀಡಿರುವ ಆಯುಷ್ಯದಿಂದ, ಮತ್ತು ಆರೋಗ್ಯದಿಂದ. ನನ್ನ ಬದುಕಿನಲ್ಲಿ ಆಸೆ ಆಕಾಂಕ್ಷೆಗಳು ಜೀವಂತವಾಗಿದೆ, ಆಸೆ ಆಕಾಂಕ್ಷೆಗಳಿಗೆ ನಿಮ್ಮನ್ನು ಬಲಿಪಶು ಮಾಡಲು ನನ್ನ ನನ್ನ ಮನಸು ಒಪ್ಪದು, ...