(ಲೇಖನ -73)ದೈವ ಶಕ್ತಿಯನ್ನು ನಂಬಿ ನಡೆಸಿದ ಕುವೈಟ್ ಬ್ಯಾಡ್ಮಿಂಟನ್ ಪಂದ್ಯ

(ಲೇಖನ -ದೈವ ಶಕ್ತಿಯನ್ನು ನಂಬಿ ನಡೆಸಿದ  ಕುವೈಟ್ ಬ್ಯಾಡ್ಮಿಂಟನ್ ಪಂದ್ಯ,  ಆ ಒಂದು ತಿಂಗಳು ಹೇಗೆ ಹೋಯಿತು ಎಂಬುದೇ ಗೊತ್ತಾಗಲಿಲ್ಲ, ಸಾಧಾರಣವಾಗಿ  ನನ್ನ ಕೆಲಸ ಮುಗಿಸಿ  ಮನೆಗೆ  ಆಗಮಿಸುವ ನಾನು, ಎಂದಿನಂತೆ  ತನ್ನ ಮಕ್ಕಳೊಂದಿಗೆ ಕಟ್ಟಡದ ಕೆಳಗೆ  ಆಟವಾಡಲು  ಹೋಗುತ್ತಿದ್ದೆ, ಸಮಯ ಸಿಕ್ಕಾಗ  ಲೇಖನಗಳನ್ನು ಬರೆಯುತ್ತಲು ಇದ್ದೆ, ನಾವು ವಾಸ ಮಾಡುತ್ತಿರುವ ಕಟ್ಟಡದಲ್ಲಿ  ನನ್ನ ಕಣ್ಣೆದುರಿಗೆ  ಬ್ಯಾಡ್ಮಿಂಟನ್ ಆಡುವ ಆಟದ ಬ್ಯಾಟನ್ನು ಎತ್ತಿಕೊಂಡು ಬರುತ್ತಿದ್ದ, ಮುಖ ಪರಿಚಯ ಇರುವ ಅವರಲ್ಲಿ, ಎಲ್ಲಿ ಆಟವಾಡಲು ಹೋಗುತ್ತಿದ್ದೀರಿ ಎಂದು ಕೇಳಿ ಬಿಟ್ಟೆ, ಹೋ ಇಲ್ಲಿ ಹತ್ತಿರದ ಶಾಲೆಯಲ್ಲಿ ನಾನು ನಾಲ್ಕು ಜನ ಸೇರಿ ಆಟವಾಡುತ್ತೇವೆ ಅಂದುಬಿಟ್ಟರೆ, ಹೌದಾ ಇಲ್ಲಿ ಬ್ಯಾಡ್ಮಿಂಟನ್ ಕೂಡ ಆಡುತ್ತಾರೆಯೇ, ಎಂದು ಕೇಳಿದ್ದಕ್ಕೆ, ಹೌದು ಅಂದುಬಿಟ್ಟರು. ಅದೇ ಕ್ಷಣದಲ್ಲಿ  ನಾನು ಎದುರು ನೋಡುತ್ತಿದ್ದ ಚಿಕ್ಕ ಮತ್ತು ಮೊದಲ ಪ್ರಯತ್ನದ  ಪಂದ್ಯವನ್ನು  ಯಾಕೆ ಮಾಡಿಸಬಾರದು ಎಂಬ  ಯೋಚನೆಯೊಂದಿಗೆ ಮಾರನೆಯ ದಿನ ನಾವು ಒಂದು ಟೂರ್ನಮೆಂಟ್ ಮಾಡಿದರೆ ಹೇಗೆ ಅಂದುಬಿಟ್ಟೆ, ಅವರ ಉತ್ತರ ಮಾಡಬಹುದಲ್ಲವೇ, ಹೌದು ಅನ್ನುವಷ್ಟರಲ್ಲಿಯೇ, ಅದೇ ಕ್ಷಣದಿಂದ ಕಾರ್ಯಪ್ರವೃತ್ತನಾದ ಎನಗೆ ಎಲ್ಲಿ ಆರಂಭ ಮಾಡಬೇಕೆಂಬುದೇ  ತಿಳಿದಿರಲಿಲ್ಲ, ಆದರೆ ನನ್ನ ಕೆಲವು ಗೆಳೆಯರೊಂದಿಗೆ  ವಿಚಾರ ಮಾಡಿದಾಗ, ಹಲವು ಸಲಹೆಗಳನ್ನು ಕೊಟ್ಟುಬಿಟ್ಟರೆ, ಕೆಲವರು, "ನಿಕ್ಕು ದಾಯಗ ಮಾರಾಯ  ಅವುಮಾತ " ಪೊಕ್ಕಡೆ ನಿನ್ನ ಬೇಲೆ ಮಲ್ತುದು ಕುಲ್ಲೆರೆ ಆಪುಜಿಯಾ? ಎಂದು ಹೇಳಿಬಿಟ್ಟರು!



          ಆದರೆ, ಪಂದ್ಯ ಮಾಡಲೇಬೇಕೆಂಬ ಹಠ  ನನ್ನೊಳಗೆ ಸೇರಿ ಬಿಟ್ಟಿತ್ತು, ತಂದೆ ತಾಯಿ ಮತ್ತು ಗುರು ಹಿರಿಯರ ಆಶೀರ್ವಾದ ದೈವ ದೇವರುಗಳೊಂದಿಗೆ ಬೇಡಿ ಕಾಲಿಟ್ಟ,  ನಮ್ಮ ಚಿಕ್ಕ ತಂಡ, ನನ್ನ ಬೆನ್ನೆಲುಬಾಗಿ ಧೈರ್ಯವನ್ನು ನೀಡಿದ ಆಪ್ತ ಮಿತ್ರರು, ತನ್ನ ಬೇಡಿಕೆಗೆ, ಉತ್ತಮ ರೀತಿಯಲ್ಲಿ ಸ್ಪಂದಿಸಿ  ಧನ ಸಹಾಯ ಮಾಡಿದ ಪ್ರತಿಯೊಬ್ಬರೂ!  ಸ್ವಚ್ಛ ಮನಸ್ಸಿನಿಂದ  ನಿಸ್ವಾರ್ಥ  ಸೇವೆ ಮಾಡಿರುವಂತಹ ಮುಗ್ದ ಮನಸುಗಳು, ನಮ್ಮ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ನಾನೊಂದು ಓಡಾಟ ಮಾಡಿದ  ಜೀವವೇ ಹೊರತು, ಯಾವುದೇ ಕಾರ್ಯಕ್ರಮವನ್ನು ಮಾಡಬೇಕಾಗಿರುವ ಸಂದರ್ಭದಲ್ಲಿ, ಹಣದ  ಉಪಯೋಗ ಇದ್ದೇ ಇರುತ್ತದೆ, ನನ್ನ ಪ್ರಯತ್ನಕ್ಕಾಗಿ ನಿಮ್ಮ ಬೆಂಬಲನೀಡುವಿರಾ ಎಂದು ಕೇಳಿದ ನನಗೆ,  ತನ್ನ ಮನಸಾರೆ ಸಹಾಯ ಮಾಡಿ   ನನ್ನ ದೇವರಾಗಿ ಬಿಟ್ಟರು.

      ಸುಮಾರು ನೂರು ಗುಂಪುಗಳ ಪಂದ್ಯಕ್ಕೆ ಎದುರು ನೋಡುತ್ತಿದ್ದ ನಮಗೆ  ಕೊನೆಯ ಕ್ಷಣದವರೆಗೂ  ಎದೆಬಡಿತವನ್ನು  ಹೆಚ್ಚಿಸುತಿತ್ತು, ನಿನ್ನ ನಾಳೆ ಪಂದ್ಯ, ಜನ ಇರುತ್ತಾರೆಯೂ ಇಲ್ಲವೆಂಬ  ಭಯದಿಂದ ಹಲವು ಗಣ್ಯ ವ್ಯಕ್ತಿಗಳನ್ನು ಕರೆಯಲು  ಹಿಂದೆಟು ಹಾಕಿಬಿಟ್ಟೆ, ಆ ಕಡೆ ಸೋಲನ್ನು ಒಪ್ಪಿಕೊಳ್ಳಲು ತಯಾರಾಗಿದ್ದ ನಮ್ಮ ತಂಡ, ದಿನ ಬೆಳಗಾಗುತ್ತಿದ್ದಂತೆ ಅದೇನೋ ಧೈರ್ಯ, ಉತ್ಸಾಹ, ಎಲ್ಲವೂ ಒಗ್ಗೂಡಿ, ನಿರೀಕ್ಷೆಗಿಂತ ಅಲ್ಪ ಕಡಿಮೆ ಗುಂಪಿನ ಪಂದ್ಯದೊಂದಿಗೆ ಮುಕ್ತಾಯವಾಯಿತು.

       ಅದೇನೇ ಇರಲಿ, ಕೇವಲ ನಾಲ್ಕು ದಿನಗಳ ತಿರುಗಾಟದಲ್ಲಿ, ಒಂದು ತಿಂಗಳ ಹೋರಾಟದಲ್ಲಿ  ಬಣ್ಣ ಬಣ್ಣದ ವ್ಯಕ್ತಿತ್ವ ಅನುಭವ, ಪ್ರೀತಿ ಪ್ರೋತ್ಸಾಹದ, ವ್ಯಕ್ತಿಗಳ ಆಶೀರ್ವಾದ, ಆ ಕ್ಷಣಗಳು ನಮ್ಮನ್ನು ಇನ್ನಷ್ಟು ಗಟ್ಟಿಯಾಗಿಸಿತು. ಅಂತೂ, ನಿಷ್ಕಲ್ಮಶ ಮನಸ್ಸು ನಿಂದ ಮಾಡುವ ಯಾವುದೇ ಒಳಿತಿನ ಕೆಲಸ ಯಶಸ್ಸನ್ನು ತಂದುಕೊಡುತ್ತದೆ ಅನ್ನೋದಕ್ಕೆ ಪಂದ್ಯಾಟ ಸಾಕ್ಷಿಯಾಯಿತು.

   ದೇಶ, ಭಾಷೆ, ಜಾತಿ, ಧರ್ಮ, ವರ್ಣ ಭೇದಗಳಿಲ್ಲದೆ ಮನುಷ್ಯತ್ವದ ನೆಲೆಯಲ್ಲಿ ಬದುಕುತ್ತಿರುವ ಅದೆಷ್ಟೋ ಜನರು ನಮಗೆ ಇನ್ನಷ್ಟು ಧೈರ್ಯ ಆಶೀರ್ವಾದ ನೀಡಿದರು. 

        ಸಹಾಯ ಆಶೀರ್ವಾದ ಮಾಡಿದ ಪ್ರತಿಯೊಬ್ಬರಿಗೂ ನಮ್ಮೆಲ್ಲರ ನಮನಗಳು  ನಿಮಗೆಲ್ಲರಿಗೂ ಶ್ರೀ ದೇವರು ರಕ್ಷಿಸಲಿ 🙏🌹

            ✍️ಮಾಧವ. ಕೆ. ಅಂಜಾರು.

                     




















Comments

Post a Comment

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ