(ಲೇಖನ -69)ಸ್ನೇಹದಲ್ಲಿ ನ ವಿಶ್ವಾಸ, ಸಂಬಂಧದಲ್ಲಿನ ವಿಶ್ವಾಸ, ಪ್ರೀತಿಯಲ್ಲಿನ ವಿಶ್ವಾಸ ಉಳಿಸಿಕೊಳ್ಳುವ ಯೋಗ್ಯತೆ ಕೆಲವರಿಗೆ ಮಾತ್ರ ಇರುತ್ತದೆ, ವಿಶ್ವಾಸಘಾತ ವಾಗಲು ಅವಕಾಶವನ್ನು ಮಾಡಿಕೊಡಬಾರದು

✍️Madhav. K. Anjar 

( ಲೇಖನ 69 ) ರಾತ್ರಿ 9:30 ಸಮಯ,  ಇವತ್ತು ಎನಗೆ ಹೆಚ್ಚು ಮಾತನಾಡಲು ಸಮಯವಿಲ್ಲ,  ಥಟ್ಟನೆ  ಇವತ್ತಿನ ಲೇಖನ ಬರೆಯಲು ಒಂದು ವಿಷಯ ಕೊಡಿ ಎಂದು ನನ್ನ ಅತ್ಯಂತ ಪ್ರೀಯ ಗೆಳೆಯನೊಬ್ಬನಿಗೆ ಕರೆ ಮಾಡಿದಾಗ,  ವಂಚನೆ, ವಿಶ್ವಾಸಘಾತದ ಬಗ್ಗೆ  ಬರೆದುಬಿಡಿ ಎಂದುಬಿಟ್ಟರು!  ಓಹ್,  ವಿಶ್ವಾಸಘಾತವೆ ..... ಇಂದಿನ ಪ್ರಪಂಚದಲ್ಲಿ, ವಿಶ್ವಾಸ ಘಾತುಕರ ಸಂಖ್ಯೆ ಬಹಳಷ್ಟಿದೆ, ಮುತ್ತಿನಂಥಹ ಮನುಷ್ಯರನ್ನು ಹುಡುಕಲು ಹರಸಾಹಸ ಪಡಬೇಕಾಗುತ್ತದೆ, ನಾವೆಷ್ಟು  ಎಚ್ಚರಿಕೆಯಿಂದಿದ್ದರೂ, ವಿದ್ಯಾವಂತರಾಗಿದ್ದರೂ, ಬುದ್ಧಿವಂತರಾಗಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ವಂಚನೆಗೆ ಒಳಗಾಗುತ್ತೇವೆ ಅಲ್ಲವೇ?  ವಂಚಕರ ತಂಡ , ವಿಶ್ವಾಸ ಘಾತುಕರ ತಂಡ ಯಾವುದೇ ಮುಲಾಜಿಲ್ಲದೆ  ತನ್ನ ಕಾಯಕದಲ್ಲಿ ತಲ್ಲೀನರಾಗಿರುತ್ತಾರೆ. ಅವರಿಗೆ, ಗೌರವ, ನಾಚಿಕೆ, ಮಾನ ಮರ್ಯಾದೆ, ಸಮಾಜದ ಬಗ್ಗೆ ಯಾವುದೇ ಹೆದರಿಕೆ ಗಳಿಲ್ಲದೆ ಧೈರ್ಯವಾಗಿ ನಡೆಸುವ ಕಾಯಕ. ನಿಮ್ಮ ಜೀವನದಲ್ಲಿ ಅದೆಷ್ಟೋ ಸಂದರ್ಭಗಳನ್ನು ಅನುಭವಿಸಿರಬಹುದು,  ವ್ಯಕ್ತಿಯ ವಿಶ್ವಾಸ ಮಾಡುವುದಕ್ಕೂ,  ವಿಶ್ವಾಸ ಗಳಿಸುವುದಕ್ಕೂ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತೇವೆ, ಆದರೆ ಗಳಿಸಿದ ವಿಶ್ವಾಸವನ್ನು  ಉಳಿಸಿಕೊಳ್ಳುವವರು ಬಹಳಷ್ಟು ಕಡಿಮೆ,  ಸರಾಸರಿ ಸ್ನೇಹ, ಪ್ರೀತಿ, ವಿಶ್ವಾಸ, ಬಾಂಧವ್ಯವನ್ನು  ಗಟ್ಟಿಗೊಳಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತೇವೆ. ಬಹಳಷ್ಟು ಗಟ್ಟಿಯಾಗಿರುವ ಸ್ನೇಹ ಮುರಿದು ಹೋಗಲು ಅಥವಾ ವಿಶ್ವಾಸ ಘಾತುಕನಾಗಲು  ನಿರಂತರ ಮಾಡುವ ನವರಂಗಿ ನಾಟಕವೇ ಕಾರಣವಾಗುತ್ತದೆ. ಕೆಲವರಿಗೆ ವಿಶ್ವಾಸ ಗಳಿಸಿಕೊಂಡು  ಉದ್ದೇಶಪೂರ್ವಕವಾಗಿ ವಂಚನೆ ಮಾಡುವ ಅಭ್ಯಾಸವಿರುತ್ತದೆ. ವಂಚನೆ ಮಾಡಿದ ಮೇಲೆ ಹಲವಾರು ಕಟ್ಟುಕತೆಗಳನ್ನು ಸೃಷ್ಟಿಸಿ  ತಾನು ಮಾಡಿದ ತಪ್ಪನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುತ್ತಾನೆ. ವಿಶ್ವಾಸಘಾತುಕನು ತನ್ನ ಜೀವನ ಪರ್ಯಂತ  ಮಾಡಿದ ತಪ್ಪು ಹೊರಬರದಂತೆ  ನೋಡಿಕೊಳ್ಳುತ್ತಾ  ಸದಾ ಪುಕ್ಕಲ ನಾಗಿ  ಬದುಕುತ್ತಿರುತ್ತಾನೆ.



               ಸ್ನೇಹದಲ್ಲಿ ನ ವಿಶ್ವಾಸ, ಸಂಬಂಧದಲ್ಲಿನ ವಿಶ್ವಾಸ, ಪ್ರೀತಿಯಲ್ಲಿನ ವಿಶ್ವಾಸ  ಉಳಿಸಿಕೊಳ್ಳುವ ಯೋಗ್ಯತೆ ಕೆಲವರಿಗೆ ಮಾತ್ರ ಇರುತ್ತದೆ, ವಿಶ್ವಾಸಘಾತ ವಾಗಲು  ಅವಕಾಶವನ್ನು  ಮಾಡಿಕೊಡಬಾರದು,  ವಿಶ್ವಾಸಘಾತುಕ ಕೆಲಸ ಮಾಡಲು ಹೋಗಲು ಬಾರದು, ಇದರಿಂದ ತೊಂದರೆಯಂತೂ  ವಿಶ್ವಾಸಘಾತುಕ ನಿಗೆ ಹೊರತು, ವಿಶ್ವಾಸುವವನಿಗೆ ಅಲ್ಲ.  ಒಬ್ಬ ವ್ಯಕ್ತಿ ನಿಮ್ಮನ್ನು ಸಂಪೂರ್ಣವಾಗಿ ನಂಬಿದ್ದಾನೆ ಎಂದರೇ ಅದು ಅವನಲ್ಲಿರುವ  ಸದ್ಗುಣವೇ ಹೊರತು, ಅವನ  ದೌರ್ಬಲ್ಯವಲ್ಲ. ಒಬ್ಬನ ನಂಬಿಕೆಯನ್ನು  ದೌರ್ಬಲ್ಯವೆಂದು ಪರಿಗಣಿಸಿದಾಗ, ಅಥವಾ ಅವನ ಪ್ರಾಮಾಣಿಕತೆಗೆ  ಸರಿಸಾಟಿ ನಾನಲ್ಲವೆಂಬ ಚಿಂತನೆಗೆ ಬಿದ್ದಾಗ, ತನ್ನ ಸ್ನೇಹಿತ, ಬಂಧು-ಬಳಗ ಎನ್ನದೆ, ಹೊಟ್ಟೆ ಕಿಚ್ಚಿಗೆ ಒಳಗಾಗಿ, ತನಗಿಂತ  ಮುಂದೆ ಅವನು ಹೋಗಬಾರದೆಂದು ಭಾವಿಸುತ್ತಾ ದುರ್ಬುದ್ಧಿಯನ್ನು ಹೊರಗೆ ಹಾಕಲು ಶ್ರಮಿಸುತ್ತಾನೆ.

                ಈ ಮೇಲಿನ ಜನರನ್ನು ಇಂತಹ ಸಂದರ್ಭಗಳಲ್ಲಿ ಕಾಣಬಹುದು, ಅವನೊಬ್ಬ ಬಹಳ ಒಳ್ಳೆಯ ವ್ಯಕ್ತಿಯೆಂದು ನಂಬಿಕೆಯಿಂದ ತನ್ನ ಮನದಲ್ಲಿನ ಮಾತುಗಳನ್ನು ಎಲ್ಲವನ್ನೂ ಹೇಳಿಬಿಡುತ್ತಾನೆ, ಆದರೆ ವಿಶ್ವಾಸಘಾತುಕನೊಬ್ಬ ಒಂದು ವಿಷಯಕ್ಕೆ ಹನ್ನೊಂದು ಸೇರಿಸಿ ಎಲ್ಲಾ ವಿಷಯವನ್ನು ಸಿಕ್ಕ ಸಿಕ್ಕವರಲ್ಲಿ ಊದುತ್ತಾನೆ, ಅಣ್ಣನ ಸಮಾನನೆಂದು ನಂಬಿ ಒಬ್ಬಂಟಿ ಹೆಣ್ಣೊಂದನ್ನು ಜಾಗ್ರತರಾಗಿ ನೋಡಿಕೊಳ್ಳಳೆಂದರೆ ಆ ಹೆಣ್ಣಿನ ಮೇಲೆ ಕಣ್ಣು ಹಾಕುವ ಕಾಮುಕನಾಗುತ್ತಾನೆ. ಮನೆಯಲ್ಲಿ ಯಾರೂ ಇಲ್ಲ ಮಡದಿಯೊಬ್ಬಳೇ, ತಮ್ಮನ ಸಮಾನ ನೀವು ಎಂದು ನಂಬಿದವನ ಸಂಸಾರಕ್ಕೆ ಹುಳಿಹಿಂಡುವ ಕೆಲಸಕ್ಕೆ ಕೈ ಹಾಕುವ ಸಂಧರ್ಭ. ಹೀಗೆಯೇ ಅನೇಕ ತರದ ನಂಬಲಸಾಧ್ಯ ವಿಷಯಗಳನ್ನು ಅಲ್ಲಲ್ಲಿ ಕೇಳುತ್ತ ಇರುತ್ತೀರಿ. ಇಲ್ಲಿ ತಪ್ಪುಗಳು ಎರಡೂ ಕಡೆಯಿಂದಲೂ ಆಗುವ ಸಾಧ್ಯತೆಗಳು ಇರುತ್ತದೆ. ಅಂತಹ ಸಂಧರ್ಭದಲ್ಲಿ ಬುದ್ದಿವಂತಿಕೆಯಿಂದ ತಪ್ಪಿಸಿಕೊಂಡು ಹೊರಗೆ ಬಂದವರೇ ಜಾಣರು.

         ಕೆಲವು ಜನರು ಸಂಧರ್ಭಕ್ಕೆ ತಕ್ಕಂತೆ ಬದಲಾಗುತ್ತಾರೆ, ಸಂಧರ್ಭಕ್ಕೆ ತಕ್ಕಂತೆ ಉಪಯೋಗಿಸುತ್ತಾರೆ, ಬಾಯಿಗೆ ತಕ್ಕಂತೆ ಮಾತನ್ನಡುತ್ತಾರೆ, ಇದ್ದಾಗ ಹೋಗಳುತ್ತಾರೆ, ಬಿದ್ದಾಗ ತೆಗಳುತ್ತಾರೆ. ಇರುವಾಗ ದೂರುತ್ತಾರೆ, ಸತ್ತಾಗ ಮೊಸಳೆ ಕಣ್ಣೀರು ಹಾಕುತ್ತಾರೆ. ಬದುಕುವುದಿದ್ದರೆ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಬದುಕು, ಯಾರೋ ಮಾಡುವ ಆಡಂಬರಕ್ಕೆ ಬಲಿಪಶುವಾಗಬೇಡ, ಬಸವನಂತೆ ಎಲ್ಲದಕ್ಕೂ ತಲೆಯಾಡಿಸಲು ಬೇಡ.

        ಸ್ವಚ್ಛ ಮನಸಿನಿಂದ, ಸತ್ಯವಂತನಾಗಿ, ಬದುಕಿನ ಯಾವುದೇ ಕ್ಷಣಕ್ಕೂ ತಲೆಬಾಗಿ ಹೆದರಬೇಡ, ದೇವನೊಬ್ಬನಿದ್ದಾನೆ ಇದ್ದರೂ ಇರದಿದ್ದರೂ ದೇವರ ನಂಬಿಕೆ ಬಿಡಬೇಡ.

The passion of India (R) ನಿಮ್ಮ ಬದುಕಿನಲ್ಲಿ ವಿಶ್ವಾಸ ಘಾತುಕರ ಸ್ನೇಹಕ್ಕೆ ಬಲಿಯಾಗದೆ ನಿಮ್ಮ ಬದುಕು ಸುಂದರವಾಗಿರಲಿ ಎಂಬ ಹಾರೈಕೆಯೊಂದಿಗೆ

ಶುಭಾಶಯಗಳು.

             

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.