(ಲೇಖನ -63) ಅನಾಥ ಆಶ್ರಮಕ್ಕೆ ಹೆಚ್ಚಿನವರು ಬಡವರ ಮಕ್ಕಳು ಸೇರುತಿದ್ದರೆ, ವೃದ್ದಾಶ್ರಮಕ್ಕೆ ಶ್ರೀಮಂತ ಮಕ್ಕಳ ಪೋಷಕರೇ ಸೇರಿಕೊಳ್ಳುತ್ತಾರೆ!
(ಲೇಖನ -63) ಅನಾಥ ಆಶ್ರಮಕ್ಕೆ ಹೆಚ್ಚಿನವರು ಬಡವರ ಮಕ್ಕಳು ಸೇರುತಿದ್ದರೆ, ವೃದ್ದಾಶ್ರಮಕ್ಕೆ ಶ್ರೀಮಂತ ಮಕ್ಕಳ ಪೋಷಕರೇ ಸೇರಿಕೊಳ್ಳುತ್ತಾರೆ! ಹಾಗಾದರೆ ಸ್ವಚ್ಛ ಮನಸಿಲ್ಲದೆ ಸಿಕ್ಕಿರುವ ಸಿರಿವಂತಿಕೆ ಕೊನೆಗಾಲಕ್ಕೆ ಸಿರಿವಂತ ಪೋಷಕರಿಗೆ ಶಾಪವೇ? ತುಂಬಾ ಬಡತನ ಉಳ್ಳವರು ಹೇಗಾದರು ಮಾಡಿ ಬದುಕಬೇಕೆಂಬ ಛಲ ಹಿಡಿದರೆ ಸಿರಿವಂತರ ಮಕ್ಕಳು ಐಷಾರಮದ ಗುಂಗಲ್ಲಿ ತೆಲುತ್ತಾ ಬದುಕುತಿರುತ್ತಾರೆ. ಇಲ್ಲಿ, ಯಾರ ತಪ್ಪುಗಳು ಎಂದು ಹೇಳಲು ಸಾಧ್ಯವಿಲ್ಲ ಆದರೆ ಕಷ್ಟದಿಂದ ಬದುಕಿ ಬಂದವನು ಕೊನೆಗಾಲದವರೆಗೂ ಧೈರ್ಯವಾಗಿ ಬದುಕುತ್ತಾನೆ, ಹೆಚ್ಚಿನ ಕಷ್ಟಗಳನ್ನು ನಮ್ಮ ಭಾಗ್ಯವೆಂದು ತಿಳಿದು ಬದುಕುತ್ತಾನೆ. ಏನೇ ಬರಲಿ ಗೋವಿಂದನ ದಯೆ ಇರಲಿ, ನಾಳೆ ಬೆಳಗಾದರೆ ಉಣ್ಣಲು ಎರಡು ಅನ್ನವ ಕೊಡುವ ದೇವ ಎಂಬ ಭರವಸೆಯಲಿ ನಿದ್ರಿಸುತ್ತಾನೆ.
ತಂದೆ ತಾಯಿಯರು ಮಕ್ಕಳಿಗಾಗಿ ತನ್ನ ಸರ್ವಸ್ವ ತ್ಯಾಗ ಮಾಡಿ, ಓದು ಬರಹ, ಬಟ್ಟೆ ಬರೆಯನ್ನು, ಬೇಕಾದ ತಿಂಡಿ ತಿನಸುಗಳನ್ನು ಯಾವುದೇ ಸಮಸ್ಯೆಗಳಿಲ್ಲದೆ ತಂದು ಕೊಡುತ್ತಾರೆ, ಮಕ್ಕಳನ್ನು ಉನ್ನತ ಶಿಕ್ಷಣ ಕೊಟ್ಟು ದೊಡ್ಡ ಕೆಲಸವನ್ನು ದೇಶ ವಿದೇಶದಲ್ಲಿ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿ, ತನ್ನ ಜೀವಿತದ ಹೆಚ್ಚಿನ ಸಮಯಗಳನ್ನು ಗೆಳೆಯರು, ತಿರುಗಾಟ, ಮಾದಕ ವ್ಯಸನ, ಮತ್ತು ಇನ್ನಿತರ ಚಟುವಟಿಗಳಿಗೆ ತೊಡಗಿಸಿಕೊಂಡು, ನಾನೊಬ್ಬ ಸಿರಿವಂತನೆಂಬ ಅಹಂಕಾರದಿಂದ ತನ್ನ ಮದ್ಯವಯಸ್ಸನ್ನು ಕಳೆಯುತ್ತಿರುವಾಗ, ಅವರನ್ನು ಸಾಕಿ ಸಲಹಿದ ಪೋಷಕರನ್ನು ಕಂಡಾಗ ತಾತ್ಸಾರ ಮತ್ತು ವಯಸ್ಸಾದ ತಂದೆ ತಾಯಿಯರು ಹೊರೆಯೆಂದು ಭಾವಿಸಿ, ಹಣದ ಕಂತೆಯನ್ನು ಮುಂದಿಟ್ಟು ಬಹಳ ಉತ್ತಮವಾದ ಅನಾಥ ಆಶ್ರಮಕ್ಕೆ ಗೊತ್ತಿಲ್ಲದೇ ಸೇರಿಸಿಬಿಡುತ್ತಾರೆ. ಅದೆಷ್ಟು ವ್ಯವಸ್ಥಿತವಾಗಿ ಎಂದರೆ, ಅಲ್ಲಿ ನಡೆಯಲು ಆಗದೆ, ಕುಳಿತುಕೊಳ್ಳಲು ಆಗದೆ, ತಿನ್ನಲೂ ಆಗದೆ ಇರುವ ಸ್ಥಿತಿಯಲ್ಲಿ, ಹೆಂಡತಿಯ ಮಾತಿಗೆ ಬಿದ್ದು ಅಥವಾ, ತನ್ನ ಅಹಂಕಾರದ ಮನೋಭಾವನೆಯಿಂದ ಹೆತ್ತು, ಸಾಕಿ ಸಲಹಿದ ಪೋಷಕರು ಕೊನೆಗಾಲವನ್ನು ವೃದ್ದಾಶ್ರಮದಲ್ಲಿ ಕಣ್ಣೀರು ಹಾಕುತ್ತ ಕೊನೆಯುಸಿರೆಳೆಯುವ ಪ್ರಸಂಗಗಳು ಅದೆಷ್ಟು ಅಲ್ಲವೇ?
ಕೆಲವರಿಗೆ ಪೋಷಕರು ಹೊರೆಯಾದರೆ, ಕೆಲವರಿಗೆ ಪೋಷಕರೇ ಇಲ್ಲದೇ ಬದುಕುವ ದೌರ್ಭಾಗ್ಯ , ಕಣ್ಣೀರುವ ತಕನ ಕಣ್ಣಿನ ಬೆಲೆ ತಿಳಿಯದು, ಜೀವದ ಪ್ರತೀ ಅಂಗ ಕಳೆದುಕೊಳ್ಳುವವರೆಗೂ ಅದರ ನಿಜ ಬೆಲೆ ತಿಳಿಯದು. ಬಂದು ಬಳಗ, ಅಣ್ಣ, ತಮ್ಮ ಅಕ್ಕ, ತಂಗಿ ಎಲ್ಲವನ್ನೂ ಪಡೆದುಕೊಂಡು ಉತ್ತಮ ರೀತಿಯಲ್ಲಿ ಬದುಕಿದವರು ಭಾಗ್ಯವಂತರು, ಸಂಸಾರದಲ್ಲಿ ಎಲ್ಲರೂ ಸಮಾನ ಚಿಂತನೆ ಹೊಂದುತ್ತ ಒಗ್ಗೂಡಿ ಬಾಳಿದವರು ಭಾಗ್ಯವಂತರು. ಅದರಲ್ಲಿ ಯಾರಾದರು ಒಬ್ಬ ಅವಿವೇಕಿ ಹುಟ್ಟಿ ಬೆಂಕಿ ಇಡಲು ಆರಂಭಿಸಿದರೆ ಎಲ್ಲರೂ ಹಾಳಾಗಳು ಕಾರಣವಾಗುತ್ತದೆ. ಇಂದಿನ ಕಾಲದಲ್ಲಿ ಎಲ್ಲರಿಗೂ ಬೇರೆ ಬೇರೆ ಮನೆ ಬೇಕು, ಹೊಸ ಹೊಸ ಕಾರು ಬೇಕು, ತಿನ್ನಲು ಹೋಟೆಲು ಊಟವೇ ಬೇಕು. ಆದರೆ ವಯಸ್ಸಾದ ತಂದೆ ತಾಯಿ ಯಾರಿಗೂ ಬೇಡ ಅನ್ನುವ ಸ್ಥಿತಿಗೆ ತಲುಪುತ್ತಿದೆ. Hey you know i studied in oxford university, my childrens in amerika landon, ನಮ್ಮದು ನ್ಯೂಕ್ಲಿಯರ್ ಫ್ಯಾಮಿಲಿ, ನಮಗೇನೂ ತೊಂದರೆ ಇಲ್ಲ, ಬೇಕಾದಷ್ಟು ಹಣವಿದೆ, ದೊಡ್ಡ ಬಂಗ್ಲೆ ಇದೆ, ಅಂತ ಹೇಳಿಕೊಳ್ಳುವವರು, ಕೊನೆಗಾಲಕ್ಕೆ ನಾನು ನನ್ನ ನಾಲ್ಕು ಮಕ್ಕಳನ್ನು ಚೆನ್ನಾಗಿ ಓದಿಸಿ, ಡಾಕ್ಟರ್, ಇಂಜಿನಿಯರ್, ಪೈಲೆಟ್ ಮಾಡಿಸಿದ್ದಕ್ಕೆ ನನಗೆ ಇವತ್ತು ಒಂಟಿಜೀವನ ಅದುಕೂಡ ಅನಾ.... ಥ ಆಶ್ರಮದಲ್ಲಿ, ಯಾಕಾಗಿ ನಾನು ಅಷ್ಟು ಕಷ್ಟ ಪಡಬೇಕಾಯಿತು ನನ್ನ ಮಕ್ಕಳಿಗೆ? ಯಾಕಾಗಿ ನಾನು ಅವರಿವರ ಹಣವನ್ನು ದೋಚಿ ಬಂಗಲೆ ಕಟ್ಟಿಕೊಂಡೆ, ನಾನು ಸರಿ ಇರುವಾಗಲೇ ನಾಲ್ಕು ಜನರಿಗೆ ತೊಂದರೆ ಕೊಡದೆ ಬದುಕುತಿದ್ದರೆ ನನಗೆ ಈ ಸ್ಥಿತಿ ಬರುತ್ತಾ ಇರಲಿಲ್ಲ, ಎಂದು ಬಿಕ್ಕಿ ಬಿಕ್ಕಿ ಅಳುವ ಸ್ಥಿತಿ ಯಾವ ಸಿರಿವಂತರಿಗೂ ಬಾರದಿರಲಿ,
ತಾನು ಸರಿ ಇರುವಾಗ, ಹಣಕ್ಕಾಗಿ ವೃತ್ತಿಯಲ್ಲಿ ಮೋಸ ಮಾಡಿ ಹಣ ಮಾಡಿಕೊಳ್ಳಬೇಡ, ವೈದ್ಯನಾದರೂ, ಇಂಜಿನಿಯರ್ ಆದರೂ, ವಕೀಲನಾದರೂ, ಬಹಳ ದೊಡ್ಡ ಕಂಪನಿ ಮಾಲೀಕನಾದರೂ ದುರಾಸೆಗೆ ಬಿದ್ದು ಮೋಸ ವಂಚನೆ ಮಾಡಿ ಸಿರಿವಂತನಾಗಬೇಡ, ಮೋಸ ಮಾಡಿದ್ದಲ್ಲಿ ಇಂದಲ್ಲ ನಾಳೆಯಾದರೂ ಕರ್ಮದ ಫಲ ಖಂಡಿತವಾಗಿಯೂ ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸಲೇಬೇಕಾಗುತ್ತದೆ.
The Passion Of india ನಿಮಗೆಲ್ಲರಿಗೂ ಉತ್ತಮ ಮಕ್ಕಳು, ತಂದೆ ತಾಯಿಯರು ಬಂದು ಬಳಗ ಕೊನೆಯವೆರೆಗೂ ನಿಮ್ಮೊಂದಿಗಿರಲೆಂದು ಹಾರೈಸುತ್ತ
✍️Madhav.K. Anjar
Comments
Post a Comment