(ಲೇಖನ-71) ನನ್ನ ನಂಬಿ ಊರು ಸುತ್ತಿದ ಮಾತು ಬರದ ಮಾರ್ಜಾಲ, ಮನುಷ್ಯರಿಗಿಂತ ಪ್ರಾಣಿಗಳು ಎಷ್ಟು ವಾಸಿ

ನನ್ನ ನಂಬಿ ಊರು ಸುತ್ತಿದ ಮಾತು ಬರದ ಮಾರ್ಜಾಲ, ಮನುಷ್ಯರಿಗಿಂತ ಪ್ರಾಣಿಗಳು ಎಷ್ಟು ವಾಸಿ


, ನಂಬಿಕೆ ವಿಶ್ವಾಸ ಎನ್ನುವುದು ಪ್ರಾಣಿಗಳಲ್ಲಿರುವಷ್ಟು  ಮನುಷ್ಯ ಜೀವಿಯಲ್ಲಿ ಇರುವುದಿಲ್ಲ. ಅದೊಂದು ದಿನ, ನಮ್ಮ ಪಿಕಪ್ವಾಹನದ ಹಿಂದುಗಡೆ ಖಾಲಿ  ರಟ್ಟಿನ ಪೆಟ್ಟಿಗೆ ಒಳಗೆ ಗಾಢ ನಿದ್ರೆಯಲ್ಲಿದ್ದ ಮಾರ್ಜಾಲ, ನಾನು ಗಮನಿಸದೆ  ವಾಹನವನ್ನು ಸುಮಾರು ಒಂದುವರೆ ಕಿಲೋಮೀಟರ್ ದೂರ ಇಂಧನ ತುಂಬಿಸಲು ನಿಲ್ಲಿಸಿದಾಗ  ಒಮ್ಮೆಲೇ  ಹಿಂದುಗಡೆಯಿಂದ ಮೇಲ್ಚಾವಣಿಯ ಮೇಲೇರಿ ಕಾರಿನ ಬಾನೆಟ್ ಎದುರುಗಡೆ  ಬಂದು ನಿಂತಿತು, ಆ ದಿನ ನನ್ನ ಮಗು ಕಿವಿಯೊಳಗೆ  ಯಾವುದೋ ವಸ್ತುವನ್ನು ಹಾಕಿದ ಪರಿಣಾಮ  ಆಸ್ಪತ್ರೆಗೆ  ಅಗತ್ಯವಾಗಿ ನನ್ನ ಹೆಂಡತಿ ಮಕ್ಕಳೊಂದಿಗೆ ಹೋಗುವ ದಾರಿಯಲ್ಲಿದ್ದೆ,  ನಮ್ಮ ಕಟ್ಟಡದ ಕೆಳಗಡೆ ವಾಸವಾಗುತ್ತಿದ್ದ ಈ ಮರಿ ಬೆಕ್ಕು  ಇನ್ನು ಅಲ್ಲೇ ಬಿಟ್ಟರೆ ಯಾವುದಾದರೂ ಕೆಳಗಡೆ  ಬಿದ್ದು ಸಾಯೋದು ಖಚಿತವೆಂದು  ನನ್ನ ಮನದಲ್ಲಿ ಮೂಡಿದಾಗ, ಅದೇ ಕ್ಷಣ  ಬೆಕ್ಕನ್ನು  ನಮ್ಮ ಕಾರಿನೊಳಗಡೆ  ಸೇರಿಸಿಬಿಟ್ಟೆ, ಅಲ್ಪ ಹೆದರಿಕೆಯಾದರೂ, ಬೆಕ್ಕಿನ ಸ್ಪಂದನೆ ನೋಡಿ ಮಿಯಾವ್ ಹೇಳುತ್ತಾ ಹಿಂದುಗಡೆ ಸಿಟಿನ ಕೆಳಗಡೆ ಕೂರಿಸಿಬಿಟ್ಟೆ. ಸಾಧಾರಣವಾಗಿ ಬೆಕ್ಕುಗಳು  ಎಲ್ಲಾ ಬಾಗಿಲನ್ನು ಮುಚ್ಚಿದಾಗ ಗಲಿಬಿಲಿಗೊಂಡು ಜಾಸ್ತಿ ಓಡಾಟ ಮಾಡುತ್ತವೆ. ನಾ ಇನ್ಯಾವುದೋ   ಪ್ರದೇಶಕ್ಕೆ ಬಂದು ಸಿಕ್ಕಿಬಿದ್ದಿದ್ದೇನೆ ಎಂದು ಅರಿತ  ಬೆಕ್ಕು, ಸುಮ್ಮನೆ ಕುಳಿತುಕೊಂಡಿತು. ಆ ಬೆಕ್ಕಿನೊಂದಿಗೆ ಆಸ್ಪತ್ರೆ ಪಯಣ ಮಾಡಿದ ನಾವು, ಬೆಕ್ಕನ್ನು ಕಾರಿನೊಳಗಡೆ ಬಿಟ್ಟು, ಸುಮಾರು ನಾಲ್ಕು ಗಂಟೆಗಳ ಕಾಲ ಕಾರಿನೊಳಗೆ ಹಾಯಾಗಿ ಮಲಗಿಬಿಟ್ಟಿತ್ತು. ಬೆಕ್ಕಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ, ಕಾರಿನ ಕೆಟಕಿಬಾಗಿಲನ್ನು ಸ್ವಲ್ಪ ಸರಿಸಿ, ಕಾರಣ ಮರದ ಕೆಳಗಡೆ ನಿಲುಗಡೆ ಮಾಡಿ ನನ್ನ ಕೆಲಸ ಕಾರ್ಯವನ್ನು ಮುಗಿಸಿ  ಹಿಂತಿರುಗಿ ಬಂದಾಗ, ಬಾಗಿಲಿ ತೆರೆಯುತ್ತಲೇ ಪುನಃ ಮಿಯಾವ್ ಎಂದು ಬಿಟ್ಟಿತು. ಸಂತಸದಿಂದ  ನಾವೆಲ್ಲರೂ ಅದರೊಂದಿಗೆ ಆರಾಮವಾಗಿ ಮನೆಗೆ ತಲುಪಿದೆವು. ಖುಷಿಯಿಂದ ತನ್ನ ಸ್ವಾಸ್ಥನವನ್ನು ಸೇರಿ ಬಿಟ್ಟಿತು.

          ಒಂದು ಕಡೆ ಬೆಕ್ಕನ್ನು  ಕ್ಷೇಮವಾಗಿ  ಅದರ ಸ್ವಾಸ್ಥಳಕ್ಕೆ ತಲುಪಿಸಿದ ನೆಮ್ಮದಿ, ಇನ್ನೊಮ್ಮೆ ನಮಗೆ ಅರಿಯದೆ ಬೆಕ್ಕು ಆ ಪೆಟ್ಟಿಗೆ ಒಳಗೆ ಕೂರುವುದು  ಬೇಡವೆಂದು ಬೇರೆ ಸರಂಜಾಮಗಳನ್ನು ಹಾಕಿ ಮುಚ್ಚಿ ಬಿಟ್ಟಿದೆ. ಆದರೆ ಇನ್ನೆರಡು ದಿನ ಬಿಟ್ಟು  ಅದೇ ಪೆಟ್ಟಿಗೆಯೊಳಗೆ ಸೇರಿ ಕೂತಿದ್ದ ಬೆಕ್ಕು  ಮತ್ತೊಮ್ಮೆ ಅದೇ ರೀತಿಯಲ್ಲಿ ಹತ್ತಿರದ ಸಿಗ್ನಲ್ ನಲ್ಲಿ  ಮೇಲೆದ್ದು ಬಂದು  ನಿಂತಿತು ನನ್ನ ಪಕ್ಕದ ಕಾರಿನಲ್ಲಿ ಪಯಣಿಸುತ್ತಿದ್ದ ಎಲ್ಲರೂ  ತನ್ನ ಮೊಬೈಲ್ ನಲ್ಲಿ ಫೋಟೋ ತೆಗೆಯಲೇ ಆರಂಭಿಸಿದಾಗಲೇ ನನಗೆ ತಿಳಿದ ಬಿಟ್ಟಿತು, ಒಬ್ಬಾತ ನನ್ನನ್ನು ಕರೆದು ಮೇಲೆ ಬೆಕ್ಕಿದೆ ನೋಡು ಅಂದರು, ಅಯ್ಯೋ ದೇವರೇ ಇನ್ನೇನು ಮಾಡುವುದು, ಕಾರನ್ನು ಪಕ್ಕ ಸರಿಸಿ  ಬೆಕ್ಕಿನ ಬಾಲ ಹಿಡಿದು ಪುನಃ ಕಾರಿನೊಳಗಡೆ ಹಾಕಿಬಿಟ್ಟೆ.  ಆಗಲೇ ಕೆಲಸಕ್ಕೆ ತಡವಾಗಿದ್ದ ನಾನು ಇನ್ನಷ್ಟು ಸಿಟ್ಟುಗೊಂಡು ಕಾರಿನೊಳಗಡೆ ಕೂರಿಸಿ ಸುಮಾರು 50 ಕಿ.ಮೀ ಪಯಣ ಮಾಡಿದೆ. ಬೆಕ್ಕನ್ನು  ಅಲ್ಲಿಬಿಟ್ಟರೂ ಸಾಯುತ್ತದೆಂಬ ಚಿಂತೆ ಯೊಂದಿಗೆ  ಪುನಃ ಕಾರಿನೊಳಗೆ ಬಿಟ್ಟು, ಅಲ್ಪ ಕಿಟಕಿಯನ್ನು ತೆರೆದಿಟ್ಟು ಬಿಟ್ಟೆ, ಮಧ್ಯಾಹ್ನ  ನೀರು ಆಹಾರವನ್ನು ತಿನ್ನಲು ಕೊಟ್ಟು ಸಂಜೆಯವರೆಗೂ ಕಾರಿನೊಳಗೆ ಹಾಯಾಗಿ ಮಲಗಿ ಬಿಟ್ಟಿತ್ತು. ಅದೇ ಸಂಜೆ ಪುನಃ ಅದರ ಸಂಸ್ಥಾನಕ್ಕೆ  ತಲುಪಿಸಿ ನನ್ನ ಜವಾಬ್ದಾರಿಯನ್ನು ಮಾಡಿಬಿಟ್ಟೆ. 

        ಈ ವಿಷಯದಲ್ಲಿ ಕಲಿಯಬೇಕಾದದ್ದು ಸುಮಾರು ಇದೆ, ಯಾವಾಗಲೂ ನಮ್ಮ ಚಲನವಲವನ್ನು ಗಮನಿಸುತ್ತಿದ್ದ ಬೆಕ್ಕೊಂದು ಅಕಸ್ಮಾತಾಗಿ ಅಪಾಯಕ್ಕೆ ಸಿಕ್ಕಿದಾಗ, ಈ ಮನುಷ್ಯ ನನ್ನನ್ನು ಬದುಕಿಸಬಹುದು ಎಂಬ ಭರವಸೆಯೊಂದಿಗೆ ಧೈರ್ಯವಾಗಿ ನಮ್ಮೊಂದಿಗೆ ಪ್ರಯಾಣ ಮಾಡಿದ ಕ್ಷಣಗಳು, ಪ್ರಾಣಿಗಳು ನಮ್ಮನ್ನು ವಿಶ್ವಾಸ ಮಾಡಿದರೆ ನಾವು ಬೇಕಾದರೆ ಮರೆಯಬಹುದು ಆದರೆ ಪ್ರಾಣಿಗಳು ಮರೆಯಲು ಸಾಧ್ಯವಿಲ್ಲ. ಆದರೆ ಮನುಷ್ಯನು ಹಾಗಲ್ಲ ಕೆಲವರಿಗೆ ಏನೇ ಉಪಕಾರವನ್ನು ಮಾಡು, ಎಷ್ಟು ಬೇಕಾದರೂ ಬಯಸು, ತನ್ನೆಲ್ಲ ಸರ್ವಸ್ವವನ್ನು ತ್ಯಾಗ ಮಾಡಿದರು ತೃಪ್ತಿ ಪಡದ ಜನರು  ನಿಮ್ಮ ಸುತ್ತಮುತ್ತಲು ಗೆಳೆಯ ಸಂಬಂಧಿಗಳ ರೂಪದಲ್ಲಿ ಇರುತ್ತಾರೆ. ಸದಾ ಇನ್ನೊಬ್ಬನಲ್ಲಿ ಬೇಕುಗಳನ್ನು ಬಯಸುತ್ತಾ ಕೊನೆಗೆ ಸಿಗದೇ ಇದ್ದಾಗ ಬಹಳ ದೊಡ್ಡ ವೈರಿಯಾಗಿ ಪರಿವರ್ತನೆಯಾಗುವುದು  ಮಾನವನ ಬಹುದೊಡ್ಡ  ಕೆಟ್ಟ ಮಾನಸಿಕತೆ.

           ನೀವು ಸಾಕಿದ ಯಾವುದೇ ಪ್ರಾಣಿಗಳಾಗಲಿ, ತಾನು ಹಾಕಿದ ಅನ್ನದ ಋಣವನ್ನು, ಅಥವಾ ತಮ್ಮಲ್ಲಿರುವ ವಿಶ್ವಾಸವನ್ನು  ಮುರಿದು ಜೀವಿಸಲು ಶ್ರಮಿಸುವುದಿಲ್ಲ. ಬಹಳ ಪ್ರೀತಿಯಿಂದಲೇ ವ್ಯವಹಿರಿಸುವ ಪ್ರಾಣಿಗಳು ತನ್ನ ಜೀವಕ್ಕೆ ಅಪಾಯವಾದರೂ ಅನ್ನ ಹಾಕಿದ ಅಥವಾ ಪ್ರೀತಿಯಿಂದ ಒಂದು ತುತ್ತಿನ ಊಟದ ಋಣವನ್ನು ತೀರಿಸುವ ಶಕ್ತಿ ಪ್ರಾಣಿಗಳಿಗಿದೆ. ಅಂದ ಹಾಗೆ ಆ ಬೆಕ್ಕು ತದನಂತರ  ತನ್ನ ವಾಹನವನ್ನು ಏರಿ ಕುಳಿತುಕೊಳ್ಳುವುದಿಲ್ಲ, ಅದರ ಅರ್ಥ ಆ ಬೆಕ್ಕಿಗೆ ಅರ್ಥವಾಯಿತು ನನ್ನ ಎರಡು ಸಲ ಬದುಕಿಸಿದ್ದ ಇನ್ನು ಮುಂದೆ ನಾ ಇನ್ನೊಮ್ಮೆ ಸಮಸ್ಯೆಯಲ್ಲಿ ಬೀಳಬಾರದು.!

       ಸದಾ ಇನ್ನೊಂದು ಜೀವಿಗೆ ಅಥವಾ ಜೀವಕ್ಕೆ ಮಿಡಿಯುವ ಅಥವಾ ಸ್ಪಂದಿಸುವ ಹೃದಯವನ್ನು ನೀನು ಹೊಂದಿದೆ ಅಂದರೆ ದೇವರು ನಿನ್ನನ್ನು ಪ್ರಪಂಚಕ್ಕಾಗಿ ಸೃಷ್ಟಿಸಿದ್ದಾನೆ ನಿನ್ನಿಂದ ಸಾಧ್ಯವಾದಷ್ಟು ಒಳಿತಿಗಾಗಿ ಕೆಲಸವನ್ನು ಮಾಡಿ   ತೃಪ್ತಿಯಿಂದ ಬದುಕನ್ನು ಸಾಧಿಸು.

     ನಿಮಗೆಲ್ಲರಿಗೂ ಒಳ್ಳೆದಾಗಲಿ ನನ್ನ ಆಶಯದೊಂದಿಗೆ.

              ✍️ಮಾಧವ. ಕೆ. ಅಂಜಾರು.















 



 






Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ