(ಲೇಖನ -64)ಭೂ ಕಂದಾಯ ಇಲಾಖೆಯಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಆದಷ್ಟು ಜಾಗ್ರತರಾಗಿರಿ

(ಲೇಖನ -64) ಭೂ ಕಂದಾಯ ಇಲಾಖೆಯಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಆದಷ್ಟು ಜಾಗ್ರತರಾಗಿರಿ, ಅಮಾಯಕ ಜನರ ಜಮೀನು ಹಣದಾಸೆಗಾಗಿ ಭ್ರಷ್ಟ ಅಧಿಕಾರಿಗಳು ನಿಮಗೆ ತಿಳಿಯದಂತೆ ಬೇರೆಯವರ ಹೆಸರಿಗೆ ಮಾರಾಟ ಮಾಡಿದ ಪ್ರಸಂಗಗಳು ಅದೆಷ್ಟೋ ನಡೆದಿರಬಹುದು. ಇದರಲ್ಲಿ ಲ್ಯಾಂಡ್ ಲಿಂಕ್ಸ್, ಭ್ರಷ್ಟ ರಾಜಕೀಯ, ಭ್ರಷ್ಟ ಪೊಲೀಸ್, ಭ್ರಷ್ಟ ವಕೀಲ, ಭ್ರಷ್ಟಚಾರ ಮಾಡುವ ನ್ಯಾಯಾಧೀಶ ಕೂಡ ಸೇರಿ ನಡೆಸುವ ಸಾಧ್ಯತೆಗಳಿವೆ . ನಿಮಗೆ ಭೂಮಿ ಅಥವಾ ಕೃಷಿ ಜಾಗಗಳ ಮೂಲ ದಾಖಲೆ ಬಗ್ಗೆ ಮಾಹಿತಿಗಳು ಇಲ್ಲದೇ ಇದ್ದಲ್ಲಿ ಕೇಳಿ ತಿಳಿದುಕೊಳ್ಳಿ,  ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳ ಅಥವಾ ಕಡತಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವವರಲ್ಲಿ ಮಾತ್ರ ನಿಮ್ಮ ಸಮಸ್ಯೆಗಳನ್ನು ಹೇಳಿ ಅದಕ್ಕೆ ಪರಿಹಾರವನ್ನು ಪಡೆದುಕೊಳ್ಳಿ. ನಿಮ್ಮ ಸಮಯ ಸರಿಯಾಗಿ ಇಲ್ಲದೇ ಹೋದಲ್ಲಿ ಅಥವಾ ಸರಿಯಾದ ಮಾಹಿತಿಗಳು ಇಲ್ಲದೇ ಹೋದಲ್ಲಿ ಜಮೀನು ತೆಗೆದುಕೊಳ್ಳುವುದು ಅಥವಾ ಮಾರುವ ಕೆಲಸಕ್ಕೆ ಹೋಗಬೇಡಿ. ಇಲ್ಲಿ ಕೆಲವು ನಾನು ಕೇಳಿದ ಪ್ರಸಂಗಗಳನ್ನು  ಗಮನಿಸಿ, ಪಿತ್ರಾರ್ಜಿತ ಆಸ್ತಿ - ಕಾನೂನು ಪ್ರಕಾರ ಹಕ್ಕುದಾರರಿಗೆ ಹಕ್ಕು ಆದರೆ ಅಮಾಯಕ ಮತ್ತು ಅವಿದ್ಯಾವಂತ ಕೃಷಿಕನ ಭೂಮಿಯನ್ನು ಬ್ಯಾಂಕ್ ಮ್ಯಾನೇಜರ್ ಮತ್ತು ಅವರ ಸಂಬಂಧಿಗಳು ಕೃಷಿಕನ ಜಾಗವನ್ನು ಬ್ಯಾಂಕ್ ಎಲಂ ಪ್ರಕ್ರಿಯೆ ಎಂದು ತೋರಿಸಿ, ನ್ಯಾಯಾಲಕ್ಕೂ ತಪ್ಪು ಮಾಹಿತಿಯನ್ನು ಕೊಡಲು ಭ್ರಷ್ಟ ನ್ಯಾಯವಾದಿ ಸಹಕರಿಸಿ ನ್ಯಾಯಾಲಯದ ಕಣ್ಣಿಗೆ ಮಣ್ಣೇರಚಿ ನ್ಯಾಯಾಲಯದಲ್ಲಿ ತನ್ನ ಪರವಾಗಿ ತೀರ್ಪನ್ನು ಪಡೆದುಕೊಂಡು, ಖಾತೆ ಬದಲಾವಣೆ ಮತ್ತು R.T. C ಬದಲಾವಣೆ ಮಾಡಲು ಪ್ರಯತ್ನಿಸಿದ ಬಗ್ಗೆ ಮಾಹಿತಿ, ಕೃಷಿಕನು ನ್ಯಾಯಾಲಯ ಮೆಟ್ಟಿಲು ಹತ್ತಿ ನ್ಯಾಯಕ್ಕಾಗಿ ಮೊರೆ ಹೋಗಿ, 30 - 40 ವರುಷ ಕಳೆದರೂ ನ್ಯಾಯ ಸಿಗದೇ ಹೋಗುವ ಅನೇಕ ಉದಾಹರಣೆಗಳನ್ನು ನೋಡಿರಬಹುದು.



           ಸಾಧಾರಣವಾಗಿ ಸಮಸ್ಯೆಗಳು ಬಂದಾಗ ಕೆಳ ಸಿವಿಲ್ ನ್ಯಾ ಯಾಲಯಕ್ಕೆ ಮೊರೆ ಹೋಗುವ ಜನರು ಆದರೆ ಸಿವಿಲ್ ನ್ಯಾಯಾಲಯದ ಕೇಸು ನಡೆಯುತ್ತಿರುವಾಗಲೇ AC ಕೋರ್ಟ್ ನಲ್ಲಿ ಇನ್ನೊಂದು ಫೈಲನ್ನು ತೆರೆದು, ಭ್ರಷ್ಟ ಅಧಿಕಾರಿಗಳೊಂದಿಗೆ ಸೇರಿ ನಿಮಗೆ ತಿಳಿಯದೆ ನಿಮ್ಮ ಹೆಸರನ್ನು ತೆಗೆಯುವ ಪ್ರಸಂಗಗಳು ನಡೆಯಲು ಬಹುದು. ಇಲ್ಲಿ ಹಣವಂತರ ಮತ್ತು ಪ್ರಾಭಲ್ಯ ಜನರ ಮತ್ತು ಹಣಕ್ಕಾಗಿ ಆಸೆಪಡುವ ಪ್ರತಿಯೊಬ್ಬರೂ ಭ್ರಷ್ಟ ಜನರು ಸೇರಿಕೊಳ್ಳಬಹುದು. ಕೃಷಿಕ ಅಥವಾ ಅವಿದ್ಯಾವಂತನೆನ್ನದೆ ಅವನ ಮೇಲೆ ಸವಾರಿ ಮಾಡಲು ಗೂಂಡಾ ಜನರನ್ನು ಉಪಯೋಗಿಸುವ ಸಾಧ್ಯತೆಗಳು ಇರಬಹುದು. ಅದಾಗ್ಯೂ ಮೇಲಿನ ನ್ಯಾಯಾಲಕ್ಕೆ ಕಾಲಿಡುವಾಗ ಕೂಡ ಬಹಳ ಜಾಗ್ರತೆ ಇರಬೇಕು ಸಾಧಾರಣವಾಗಿ ಕೆಳಗಿನ ನ್ಯಾಯಾಲಯದ ಮಾಹಿತಿಯನ್ನು ಪರಿಗಣಿಸಿ ನಿಮ್ಮ ಅರ್ಜಿಗಳನ್ನು ತಿರಸ್ಕರಿಸಿಸುವ ಸಂಧರ್ಭಗಳು ಜಾಸ್ತಿ ಅಥವಾ ಅಲ್ಲಿಯೂ ನೀವು ನಂಬಿ ಹೋಗಿರುವ ನ್ಯಾಯವಾದಿ ನಿಮಗೆ ಸರಿಯಾದ ಮಾಹಿತಿಯನ್ನು ಕೊಡದೆ ಅಥವಾ ತಿಳಿದು ಕೂಡ ಎದುರಾಳಿಯ ಜನರಿಂದ ಬೆರೆತು ಇನ್ನಷ್ಟು ಸಮಸ್ಯೆಯನ್ನು ಜಾಸ್ತಿ ಮಾಡುವ ಅಥವಾ ನಿಮ್ಮ ಮಾಹಿತಿಯನ್ನು ಮೆಲ್ಮನೆಗೆ ತಿಳಿಸದೇ ಇರಲುಬಹುದು.

       ಕೇಸು ರಿಜಿಸ್ಟರ್ ಮಾಡಲು ಅಥವಾ submission ಮಾಡಲು ಉದ್ದೇಶಪೂರ್ವಕ ತಡ ಮಾಡುವ ಸಾಧ್ಯತೆ, ನೀವು ಕೇಳುವ ಪ್ರಶ್ನೆಗೆ ಸರಿಯಾದ ಮಾಹಿತಿಯನ್ನು ಕೊಡದೇ ಇರುವುದು, ಎದ್ರಿಯ ವಿಳಾಸ ತಪ್ಪಾಗಿ ನಮೂಧಿಸುವುದು, ನೋಟಿಸು ತಪ್ಪು ವಿಳಾಸಕ್ಕೆ ಹೋಗಿ ಹಿಂತಿರುಗಿ ಹೋದರೂ ನಿಮಗೆ ತಿಳಿಸದ ನ್ಯಾಯವಾದಿಗಳು ಸಿಗಬಹುದು. ಮೇಲ್ನೋಟ್ಟಕ್ಕೆ ಪ್ರಖ್ಯಾತ ಅಥವಾ ಪ್ರಾಮಾಣಿಕವಾಗಿ ಕಂಡರೂ ಹಲವು ತರದ ಪ್ರಶ್ನೆಗಳನ್ನು ಕೇಳಿದಾಗ ನೀವು ಸಂಪರ್ಕಿಸಿದ ನ್ಯಾಯವಾದಿಯ ನಿಜ ಬಣ್ಣ ತಿಳಿದುಕೊಳ್ಳಬಹುದು. ನ್ಯಾಯವಾದಿಗಳು ಅಣ್ಣ ತಮ್ಮಂದಿರು ಅವರಲ್ಲಿ ಯಾವುದೇ ಬೇಧವಿಲ್ಲ ಆದರೆ ಅನ್ಯಾಯಕ್ಕಾಗಿ ಈ ಅಣ್ಣ ತಮ್ಮಂದಿರು ಸೇರಿಕೊಂಡಲ್ಲಿ ನ್ಯಾಯಾಲಯ ಮೆಟ್ಟಿಲು ಹತ್ತಿದವನ ಜೀವನವನ್ನೇ ಹಾಳು ಮಾಡುವ ಸಾಧ್ಯತೆಗಳಿರಬಹುದು. ಎಲ್ಲಾ ವಿಷಯದಲ್ಲಿ ಪ್ರಾಮಾಣಿಕವಾಗಿದ್ದಲ್ಲಿ ನಾವು ಬದುಕುದಾದರೂ ಹೇಗೆ, ಪ್ರಾಮಾಣಿಕನಾಗಿದ್ದರೆ ನನ್ನ ಹೆಂಡತಿ ಮಕ್ಕಳನ್ನು ಹೇಗೆ ಸಾಕುವುದು ಅನ್ನುವ ಆಲೋಚನೆಗಳು ಕೆಲವರಲ್ಲಿ ಸೇರಿಕೊಂಡರೆ, ಅವರಿಗೆ ಬರೇ ಹಣ ಮಾತ್ರ ಕಣ್ಣೆದುರಿಗೆ ಕಾಣುತ್ತದೆ ಹೊರತು ಕಣ್ಣೀರಿನ ಕಥೆ ತಿಳಿಯದು.

        ಹೀಗೂ ಆಗಬಹುದು, ತಂದೆಯ ಹೆಸರಲ್ಲಿರುವ ಆಸ್ತಿಯನ್ನು ಮಕ್ಕಳ ಹೆಸರಲ್ಲಿ ಮಾಡಿಸುತ್ತೇವೆ ಎಂದು ಹೇಳಿ, ರಿಜಿಸ್ಟರ್ ಆಫೀಸ್ ಗೆ ಕರೆದುಕೊಂಡು ಹೋಗಿ ಜಾಗ ಮಾರಾಟ ಮಾಡಿದ್ದರೆಂದು ತೋರಿಸಿ, ಆ ಜಾಗವನ್ನು ಇನ್ನೊಬ್ಬರಿಗೆ ಮಾರಿ, ಅದನ್ನು ಖರೀದಿ ಮಾಡಿದ ವ್ಯಕ್ತಿ ನೀವಿರುವ ಜಾಗಕ್ಕೆ ಬೇಲಿ ಹಾಕಲು ಬರುವ ಸಾಧ್ಯತೆಗಳಿರಬಹುದು. ಅಲ್ಲಿಯೂ ಕಾರ್ಯಕರ್ತ ನೆಂಬ ಪದವೀಯೊಂದಿಗೆ ಶಾಸಕರ ಮೊರೆ ಹೋಗಿ ಅಧಿಕಾರಿಗಳಿಗೆ ಧಮ್ಕಿ ಕೊಟ್ಟು, ಅವರ ವರ್ಗಾವಣೆ ಇನ್ನಿತರ ಚಟುವಟಿಕೆಗಳು ನಂಡೆಯಲು ಬಹುದು, ಆದರೆ ಸತ್ಯವೆಂಬುದು ಯಾವಾಗಲೂ ಸತ್ಯವೇ ಆದರೆ ಅಸತ್ಯದ ಪರವಾಗಿ ನಿಲ್ಲುವ ಯಾವುದೇ ವ್ಯಕ್ತಿ ಎಷ್ಟು ಗಳಿಸಿದರೂ ಅವನ ಒಳಗುಟ್ಟು ನಿಧಾನವಾಗಿ ಪ್ರಪಂಚಕ್ಕೆ ಗೊತ್ತಾಗಿ, ಒಳೋಗೊಳಗೇ ಕೊಳೆದು ಸಾಯುತ್ತಾನೆ, ಇದು ಭಗವಂತನ ನಿಯಮ 

             ನಮ್ಮ ಸಂವಿಧಾನ ಬರೆದ ಅಂಬೇಡ್ಕರ್ ರವರು ಬಹಳ ಜಾಗ್ರತೆಯಿಂದಲೇ ಬರೆದಿದ್ದಾರೆ ಆದರೆ, ಸಂವಿಧಾನದ ಲೋಪದೋಷಗಳನ್ನು ಉಪಯೋಗಿಸಿ ಅಥವಾ ಭ್ರಷ್ಟ ರಾಜಕೀಯ ವ್ಯಕ್ತಿಗಳ ಸಹಾಯದಿಂದ ಮಾಡಬಾರದ ಕೆಲಸಗಳನ್ನು ಮಾಡುವ ಜನಗಳು ನಿಮ್ಮ ಅಕ್ಕ ಪಕ್ಕ ಇರಬಹುದು. ಇದಕ್ಕೆ ಕಾರಣ ಹಣದಾಸೆ, ಐಷಾರಮದ ಬದುಕಿನ ಚಿಂತನೆ, ದೊಡ್ಡ ದೊಡ್ಡ ಕಾರು, ಬಂಗಲೆ ಪಡೆಯುವ ಆಸೆ, ಆ ಆಸೆಗಳು ಇದ್ದಾಗ ಅವರಲ್ಲಿ ಬರುವ ಯಾವುದೇ ಕೆಲಸಗಳು ಬರೇ ಹಣದ ವ್ಯವಹಾರ ಆಗಿರುತ್ತದೆ ಹೊರತು ಯಾವುದೇ ನ್ಯಾಯ ಸಿಗುವ ಸಾಧ್ಯತೆ ಇರುವುದಿಲ್ಲ.

            ಕೈ ಕಾಲು ಇರದವರು ಅಥವಾ ತೀರಾ ಬಡತನ ಇರುವವರು ಬೇಡಿ ತಿನ್ನುತ್ತಾರೆ ತನ್ನ ಹೊಟ್ಟೆಪಾಡಿಗಾಗಿ, ಕೈ ಕಾಲು ಸರಿಯಾಗಿದ್ದು, ಒಂದಷ್ಟು ಪದವಿಹಿಡಿದುಕೊಂಡು ಇನ್ನೊಬ್ಬರನ್ನು ಕಾಡಿ ತಿನ್ನುತ್ತಾರೆ ತನ್ನ ಸಂತಾನ ಬೆಳೆಸಲಿಕ್ಕಾಗಿ! ಇಲ್ಲಿ ವ್ಯತ್ಯಾಸ ಇಷ್ಟೇ -ಬೇಡುವವನಲ್ಲಿ  ನ್ಯಾಯ ಇರುತ್ತದೆ. ನಿಮ್ಮನ್ನು ಕಾಡುವವನಲ್ಲಿ ಅನ್ಯಾಯ ತುಂಬಿರುತ್ತದೆ. ಮಾನವನಾಗಿ ಹುಟ್ಟಿದಮೇಲೆ ಅಲ್ಪವಾದರೂ ಕರುಣೆ, ಸಹಾಯ, ಸತ್ಯ, ಧರ್ಮದ ಪಾಲನೆ ಬೇಕು, ಇಲ್ಲವಾದಲ್ಲಿ ನಿನ್ನ ಸಂಪಾದನೆ ಬೇರೆಯವರಿಗೆ ತೊರ್ಪಡಿಕೆಗಾಗಿ ಮಾತ್ರ ಮತ್ತು ನಿನ್ನ ಪಾಪದ ಕೊಡ ತುಂಬಿ, ಹಣದೊಂದಿಗೆ ಹೆಣವಾಗುವವರೆಗೆ ಮಾತ್ರ.

         The Passion of India Foundation (R) ನಮ್ಮ ದೇಶದಲ್ಲಿ ಪ್ರಾಮಾಣಿಕವಾಗಿ ಕೆಲಸಮಾಡುವ ಉತ್ತಮವಾದ ಪ್ರಜೆಗಳು ಹೆಚ್ಚಾಗಲಿ ಎಂಬ ಹಾರೈಕೆಯೊಂದಿಗೆ

            ✍️Madhav. K. Anjar 



          




















Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.