(ಲೇಖನ -72)ಕುವೈತ್ ಕನ್ನಡ ಕೂಟವೆಂಬ ಪ್ರಭುದ್ದ ಸಂಘಟನೆ, ಕನ್ನಡಿಗರ ಗೌರವವನ್ನು ಇನ್ನಷ್ಟು ಹೆಚ್ಚಿಸುತ್ತಾ ಬಂದಿದೆ,
ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ, ಕನ್ನಡವೇ ನನ್ನುಸಿರು ಹೀಗೆ ಹತ್ತು ಹಲವು ವ್ಯಾಖ್ಯಾನಗಳಿಂದ, ಕವಿಗಳು ಮೇಧಾವಿಗಳು, ಕನ್ನಡಾಂಬೆಯ ವರ್ಣನೆಯನ್ನು ಮಾಡುತ್ತಾ, ಕನ್ನಡ ಭಾಷೆಯ, ಕರ್ನಾಟಕ ರಾಜ್ಯದ, ಕನ್ನಡ ಜನತೆಯ ಹೆಸರನ್ನು ಶಿಖರದೆತ್ತರಕ್ಕೆ ಕೊಂಡೊಯ್ತಿದ್ದಾರೆ. ಕನ್ನಡ ನೆಲದಲ್ಲಿ ಹುಟ್ಟಿ ಬಂದಿರುವಂತಹ ಪ್ರಬಲ ಕವಿಗಳು ಕವಿಯತ್ರಿಗಳು ಕನ್ನಡ ಭಾಷೆಗೆ ಮರೆಯಲಾಗದ ಕೊಡುಗೆಯನ್ನು ಕೊಡುತ್ತಾ ಬಂದಿರುತ್ತಾರೆ.
ಕುವೈತ್ ಕನ್ನಡ ಕೂಟವೆಂಬ ಪ್ರಭುದ್ದ ಸಂಘಟನೆ, ಕನ್ನಡಿಗರ ಗೌರವವನ್ನು ಇನ್ನಷ್ಟು ಹೆಚ್ಚಿಸುತ್ತಾ ಬಂದಿದೆ, ಈ ಸಂಘಟನೆಯ ಅತ್ಯಂತ ಹಿರಿ ಸಂಘಟನೆಯಾಗಿದ್ದು, ಹೆಚ್ಚು ಮೌಲ್ಯಯುತ ವ್ಯಕ್ತಿಗಳನ್ನು ಹೊಂದಿರುವ ಗೌರವಾನ್ವಿತ ಜನರ ಗುಂಪು. ಪ್ರತಿಯೊಂದು ಕಾರ್ಯಕ್ರಮಗಳು ಅತ್ಯುತ್ತಮ ಮತ್ತು ಬಹಳ ಅಚ್ಚುಕಟ್ಟಾಗಿ ನಡೆಸಿಕೊಡಲು ಪ್ರಯತ್ನಪಡುವ ಸಂಘದ ಪ್ರತಿ ಸದಸ್ಯರು ಮತ್ತು ಆಡಳಿತ ಸಮಿತಿ. ಪ್ರತಿವರ್ಷ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಪ್ರೇಕ್ಷಕರ ಮನ ಗೆಲ್ಲುವಂತಿರುತ್ತದೆ. ಈ ಸಲವೂ, ರಾಜ್ಯೋತ್ಸವವನ್ನು ಕರ್ನಾಟಕದ ಪ್ರತಿ ಜಿಲ್ಲೆಯ ಸಾಂಸ್ಕೃತಿಕ ಕಲಾವೈಭವನ್ನು ವಿಭಿನ್ನ ರೀತಿಯಲ್ಲಿ ಪ್ರದರ್ಶನ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿಬಿಟ್ಟಿತು.
"ನುಡಿ ಪಲ್ಲಕಿ " ಒಂದು ಸಿಂಹಾವಲೋಕನ ಈ ದೃಶ್ಯ ಲೋಕದಲ್ಲಿ, ಪ್ರತಿಯೊಬ್ಬ ಕಲಾಕಾರನ ಕೊಡುಗೆ, ಧರಿಸಿರುವ ಉಡುಗೆ, ನಟಿಸಿರುವ, ಕುಣಿದು ಕುಪ್ಪಳಿಸಿರುವ ದೃಶ್ಯಗಳು ಬಹಳ ಅದ್ಭುತವಾಗಿತ್ತು, ಮಕ್ಕಳಿಂದ ಹಿರಿಯರವರೆಗೂ ನಗು ಮುಖದಲ್ಲಿ ತನ್ನ ತನ್ನ ಪಾತ್ರಗಳನ್ನು ಮಾಡಿ, ಮನ ತಣಿಸಿಕೊಂಡು ಕನ್ನಡಾಂಬೆ ಸೇವೆಯನ್ನು ಬಹಳ ಗೌರವದಿಂದಲೇ ಮಾಡಿರುತ್ತಾರೆ. ಕನ್ನಡ ಕೂ ಟಕ್ಕೆ ಸೇರುವ ಕುಟುಂಬಗಳಲ್ಲಿ ಎಲ್ಲರಲ್ಲೂ ಕಲೆ ಎಂಬುದು ಕರಗತಗೊಳ್ಳುತ್ತದೆ. ಸಮಾಜದಲ್ಲಿ ಅಥವಾ ಉದ್ಯೋಗದಲ್ಲಿ ಎಷ್ಟೇ ದೊಡ್ಡ ಸ್ಥಾನಮಾನಗಳಿದ್ದರೂ ಕನ್ನಡ ಕೂಟದಲ್ಲಿ ಎಲ್ಲಾ ಸ್ಥಾನಮಾನಗಳನ್ನು ಬದಿಗಿಟ್ಟು ಒಂದು ಕುಟುಂಬ ಅಥವಾ ಮಕ್ಕಳಂತೆ ಸೇರಿ ನಡೆಸುವ ಕಾರ್ಯಕ್ರಮಗಳು.
1960 ರಿಂದ ಇತ್ತೀಚಿನವರೆಗಿನ ಚಲನಚಿತ್ರ ಗೀತೆಗಳ ತುಣುಕುಗಳು, ಕನ್ನಡ ಮಣ್ಣಿನ ವಿವಿಧ ಸಂಸ್ಕೃತಿಗಳು, ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಎಲ್ಲಾ ಭಾಗಗಳ ವೈಶಿಷ್ಟ್ಯತೆಯನ್ನು ಒಂದು ವೇದಿಕೆಯಲ್ಲಿ ತೋರಿಸಿಕೊಟ್ಟು ಕನ್ನಡದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿರುತ್ತಾರೆ. ಬಹಳ ಉತ್ತಮವಾದ ಕಾರ್ಯಕ್ರಮವನ್ನು ಮಾಡುತ್ತಿರುವ ಕನ್ನಡ ಕೂಟದ ಪ್ರತಿಯೊಬ್ಬರಿಗೂ ಇನ್ನಷ್ಟು ಯಶಸ್ಸು ಸಿಗಲಿ, ಕನ್ನಡ ಭಾಷೆಯನ್ನು ಇಲ್ಲಿರುವ ಮಕ್ಕಳಿಗೆ ಬೋಧನೆ ಮಾಡಲು ಶ್ರಮ ಪಡುತ್ತಿರುವ ಪ್ರತಿಯೊಬ್ಬರಿಗೂ ಜಯವಾಗಲಿ. ಕನ್ನಡದ ಕಂಪು, ಕನ್ನಡದ ಇಂಪು ಪ್ರಪಂಚದ ಮೂಲೆ ಮೂಲೆಗೂ ತಲುಪುತ್ತಲಿರಲಿ.
✍️ಮಾಧವ. ಕೆ. ಅಂಜಾರು
Thank you very much sir , for such wonderful words of praise
ReplyDelete