(ಲೇಖನ -70)12 ವರುಷದ ಹುಡುಗಿ ಕಾಣೆಯಾಗಿದ್ದಾರೆ! ,ನನ್ನ ಗೆಳೆಯನ ಕರೆ ಬಂದಾಗ ಕಾಣೆಯಾದವರ ವಾಸ ಸ್ಥಳ ಅರಿತ ಕೂಡಲೇ

    12 ವರುಷದ ಹುಡುಗಿ  ಕಾಣೆಯಾಗಿದ್ದಾರೆ! ,ನನ್ನ ಗೆಳೆಯನ ಕರೆ ಬಂದಾಗ ಕಾಣೆಯಾದವರ ವಾಸ ಸ್ಥಳ ಅರಿತ ಕೂಡಲೇ,ಬಂದ ಮಾಹಿತಿಯನ್ನು ನನಗೆ ತಿಳಿದಿರುವ ವಾಟ್ಸಪ್ಪ್ ಗ್ರೂಪ್ ಮತ್ತು ಸ್ನೇಹಿತರಿಗೆ ಕಳುಹಿಸಿ, ಕೂಡಲೇ ಹುಡುಕಾಟ ಆರಂಭಿಸಿ ನನ್ನ ಪ್ರಯತ್ನ ಮತ್ತು ಸಹಾಯಕ್ಕೆ ಅಣಿಯಾದೆ,  ಸಂಜೆಯ ಹೊತ್ತಿಗೆ ಮನೆಯಿಂದ ಕಾಣೆಯಾದ ಹುಡುಗಿ, ಒಂದು ತರ ಎಲ್ಲರನ್ನೂ  ಆತಂಕಕ್ಕೀಡು ಮಾಡಿತ್ತು, ಕುವೈಟ್ ದೇಶದ ಅಬಾಸಿಯ ಎಂಬ ನಗರದಲ್ಲಿ, ಜನನಿಭಿಡ ಪ್ರದೇಶದಲ್ಲಿ ಮನೆಯವರ ಬುದ್ದಿಮಾತಿಗೆ ಸಿಟ್ಟುಗೊಂಡು ಮನೆಯ ಹೊರಗೆ ನಡೆದ ಹುಡುಗಿಯ ಪತ್ತೆ ಯಾಗದೆ ಇದ್ದಾಗ, ಕೂಡಲೇ ಎಚ್ಚತ್ತುಕೊಂಡು ಸುಮಾರು 50 ತಂಡಕಿಂತಲೂ ಜಾಸ್ತಿ ಮಲಯಾಳಿ ಜನರು   ತನ್ನ ತನ್ನ ವಾಹನದಲ್ಲಿ ಹುಡುಕಾಟದಲ್ಲಿ ತೊಡಗಿಕೊಂಡರು. ಅವರಂತೆ ನಾನೂ ಒಬ್ಬ ನನ್ನ ವಾಹನದಲ್ಲಿ ಹೊರಟು, ನಾಪತ್ತೆಯಾದ ಸ್ಥಳದಿಂದ ಹುಡುಕಾಟ, ಪ್ರತೀ ಗುಂಪಿನ ಹುಡುಕಾಟದ ಮಾಹಿತಿ ವಾಟ್ಸಪ್ಪ್ ನಲ್ಲಿ ಕಳುಸುತೀದ್ದ ತಂಡ,  ಹೆಚ್ಚಿನ ಕಟ್ಟಡ, ಮನೆ, ಅಂಗಡಿಗಳಲ್ಲಿ ಸಿಸಿ ಟಿವಿ ಅಳವಡಿಸಿರುವ ಕಾರಣ ಹುಡುಗಿಯ ಛಲನವಲನದ ಮಾಹಿತಿಯನ್ನು ಆಧರಿಸಿ ನಗರದ ಮೂಲೆ ಮೂಲೆಯನ್ನು ತಡಾಕಡಿ ಸುಸ್ತಾಗಿ ಹೋದ ಎಲ್ಲರೂ, ಇನ್ನಷ್ಟು ಭಯಗೊಳ್ಳಲು ಆರಂಭಿಸಿದರು,  ಪೋಷಕರ ಭಯ ಇಮ್ಮಡಿಯಾಗಿ ಕಣ್ಣೀರುಹಾಕುತಿದ್ದರು.  7 ರಿಂದ ರಾತ್ರಿ 11.30 ರ ವರೆಗೂ ಸಿಗದ ಸಮಯದಲ್ಲಿ ನಿರಾಶೆಗೊಳ್ಳುತಿದ್ದ ನಾವೆಲ್ಲರೂ ನಮ್ಮ ಹುಡುಕಾಟದ ದಿಕ್ಕನ್ನು ಬದಲಾಯಿಸುವ  ನಿರ್ಧಾರಕ್ಕೆ ಬರುವ ಸಮಯದಲ್ಲಿ ನಮ್ಮ ನಗರದ ಹೊರಭಾಗದಲ್ಲಿ ಹುಡುಕುತಿದ್ದ ತಂಡಕ್ಕೆ ಹುಡುಗಿಯ ಪತ್ತೆಯಾಯಿತು. ಎಲ್ಲರೂ ಸಂತೋಷಗೊಂಡರು.



               ಮಕ್ಕಳೆಂದರೇನು, ಅವರನ್ನು ಬೆಳೆಸಿ ಪೋಶಿಸುವ ಕಷ್ಟದ ಬಗ್ಗೆ ತಂದೆ ತಾಯಿಗೆ ಮಾತ್ರ ತಿಳಿದಿರುತ್ತದೆ. ಮಗು ಕಾಣೆಯಾದಾಗ ಯಾವ ತಂದೆ ತಾಯಿಗೆ ಜೀವ ಬಿಟ್ಟಂತೆ ಆಗದು ಹೇಳಿ!, ನನ್ನ ಹುಡುಕಾಟ ನನ್ನನ್ನೇ ರೋಮಾಂಚನಗೊಳಿಸಿತ್ತು, ಅಂಗಡಿ ಮುಂಗಟ್ಟು, ಈಜಿಪ್ಟ್, ಬಂಗಾಳಿಯವರು ವಾಸಮಾಡುವ ಸ್ಥಳಕ್ಕೆ ಹೋಗಿ ಅವರ ಮೊಬೈಲ್ ಸಂಖ್ಯೆ ತೆಗೆದುಕೊಂಡು ಮಾಹಿತಿಯನ್ನು ಹಂಚಿ, ಹೆಚ್ಚಿನ ಕಟ್ಟಡ ದ ಸುತ್ತ ಹುಡುಕಾಟ, ಇನ್ನೂ ಪೂರ್ಣಗೊಳ್ಳದ ಕಟ್ಟಡದಲ್ಲಿ ಹುಡುಕಾಟ, ಒಂದು ಕಡೆ ಪೂರ್ತಿ ಕತ್ತಲೆ ಆವರಿಸಿದ್ದು, ಕಟ್ಟಡದೊಳಗೆ ಒಬ್ಬನೇ ಪ್ರವೇಶ ಮಾಡಿ ಸುಮಾರು ಕೋಣೆಗಳಲ್ಲಿ ಹುಡುಕಾಟ, ಶಾಲಾ ವಠಾರ, ಪಾರ್ಕಿಂಗ್, ಮೈದಾನ, ಕಸದ ತೊಟ್ಟಿ, ಬಸ್ಸು, ಕಾರು, ನಿಲ್ಲಿಸಿರುವ ಇನ್ನಿತರ ವಾಹನಗಳ ತಪಾಸಣೆ ರಾತ್ರಿ ಹೊತ್ತಿನಲ್ಲಿ ಭಯಾನಕವಾಗಿತ್ತು. ಮೊದಮೊದಲು ಹುಡುಕಾಟದ ಜನರ ಸಂಖ್ಯೆ ಕಮ್ಮಿಯಾಗಿದ್ದರೂ ರಾತ್ರಿಯಾಗುತ್ತ ಮಲಯಾಳಂ ಜನರ ತಂಡ ಹೆಚ್ಚಾಗಿತ್ತು,  ಮಸೀದಿ, ಹೋಟೆಲು, ದೊಡ್ಡ ಶಾಪಿಂಗ್ ಮಾಲಿನ ಒಳಹೊಕ್ಕು, ಹುಡುಕುತಿದ್ದ ಜನರು. ಕುವೈಟ್ ನ ಭಯಾನಕ ಪ್ರದೇಶದ ಅಕ್ಕಪಕ್ಕದಲ್ಲಿ ಪತ್ತೆಯಾದ ಹುಡುಗಿ ಎಲ್ಲರನ್ನೂ ನಿಟ್ಟುಸಿರು ಬಿಡುವಂತೆ ಮಾಡಿತು.

        ಇಲ್ಲಿ ನಾನು ಗಮನಿಸಿದ ಕೆಲವು ವಿಚಾರಗಳು, ಯಾರಾದರೂ ಸಮಸ್ಯೆಗೆ ಎದುರಾದಗ ಕೂಡಲೇ ಸ್ಪಂದಿಸುವ ಜನರು, ಜಾಣರು, ಮತ್ತು ತನ್ನ ಸಮಯವನ್ನು ಉಪಯೋಗಿಸಿ ಪ್ರಯತ್ನಕ್ಕೆ ಅಣಿಯಾಗುವ ಸಜ್ಜನರು, ಮಾನವೀಯತೆಯಲ್ಲಿ ತೊಡಗಿಸಿಕೊಂಡ ಅದೆಷ್ಟುಮಂದಿ. ಕೆಲವರು ಮನೆಯೊಳಗೆ ಕುಳಿತು ಅಸಹಾಯಕತೆ ತೋರಿಸಿಕೊಂಡು ಮರುಗುತ್ತಿದ್ದರು, ಕೆಲವರ ಪ್ರಾರ್ಥನೆ, ಇನ್ನೂ ಕೆಲವರು ಸುಳ್ಳು ಮಾಹಿತಿಯನ್ನು ಹಂಚಿ ಹುಡುಕಾಟಕ್ಕೆ ತೊಂದರೆ ಮಾಡಿದ ಜನರು, ಕೆಲವರು ಸ್ಪಷ್ಟಮಾಹಿತಿ ನೀಡಿ ಸಹಾಯಮಾಡಿದ ಯುವಕರು, ಏನೇನೋ ವಿಚಾರಗಳು. ನನ್ನ ಹುಡುಕಾಟದ ಸಮಯದಲ್ಲಿ ಮನೆಯ ದೇವರ ಪ್ರಾರ್ಥನೆ, ಸ್ವಾಮಿ ವರ್ತೆ ಪಂಜುರ್ಲಿ ಪೊಣ್ಣು ಒಲ್ಪ ಇತ್ತುಂಡಲಾ ಬೇಗ ತೋಜಾದ್ ಕೊರ್ಲ. ನನ್ನ ಪ್ರಾರ್ಥನೆಯೋ ಕಾಕತಳಿಯವೊ ಪ್ರಾರ್ಥಿಸಿದ 30 ನಿಮಿಷದಲ್ಲಿ ಶುಭವಾರ್ತೆ.

        ಮಕ್ಕಳ ಮನಸ್ಥಿತಿ ಎಲ್ಲಿವರೆಗಿದೆ, ಇಲ್ಲಿ ಯಾರ ವಿಚಾರ ತಪ್ಪು ಅನ್ನುವುದಕ್ಕಿಂತ ನಮ್ಮ ಮುಂದಿನ ಜನಾಂಗ ಯಾವ ಮಟ್ಟಕ್ಕೆ ಹೋಗಬಹುದು ಅನ್ನುವ ಚಿಂತೆ, ಇಂತಹ ಅದೆಷ್ಟೋ ಉದಾಹರಣೆ, ನಾಪತ್ತೆಯಾದವರು ಸಿಗದೇ, ಅಲ್ಲಿ ಇಲ್ಲಿ ಜೀವ ಕಳೆದುಕೊಂಡು ಭಯಾನಕರೀತಿಯ ಸುದ್ದಿಗಳೊಂದಿಗೆ ಮುಚ್ಚಿಕೊಂಡು ಹೋಗುತ್ತಿರುವ ಘಟನೆಗಳು.

       ಯಾರಾದ್ರೂ ಸಮಸ್ಯೆಗೆ ಎದುರಾದಾಗ ವಾಸ್ತವ ಅರಿತು ನಿಮ್ಮಿಂದ ಆಗುವ ಸಹಾಯವನ್ನು ಮಾಡುವ ಅಭ್ಯಾಸ ನಿಮಗೆ ತೃಪ್ತಿಕೊಡುತ್ತದೆ. ಸಹಾಯವೆಂದರೆ ಹಣದ ರೂಪದಲ್ಲಿ ಮಾತ್ರವಲ್ಲ ಹೃದಯದಲ್ಲಿ ಹುಟ್ಟುವಂತಹ ಕರುಣೆ ಭಾವನೆ.

   ಎಲ್ಲರಿಗೂ ದೇವರು ಕ್ಷೇಮವಾಗಿಡಲಿ 🙏

                    ✍️ಮಾಧವ ಕೆ ಅಂಜಾರು 













Comments

Post a Comment

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ