(ಲೇಖನ -75)ಕಲಾ ಮಾಣಿಕ್ಯ ಶ್ರೀ ಸುರೇಶ್ ಸಾಲ್ಯಾನ್ ತುಳುಕೂಟವೆಂಬ ಕಲಾ ಸಾಗರದಲ್ಲಿ

ಕಲಾ ಮಾಣಿಕ್ಯ ಶ್ರೀ ಸುರೇಶ್ ಸಾಲ್ಯಾನ್ ತುಳುಕೂಟವೆಂಬ ಕಲಾ ಸಾಗರದಲ್ಲಿ , ತುಳು ನೌಕೆಯ ನಾವಿಕ. ತುಳುವರಿಂದ, ತುಳುವರಿಗಾಗಿ, ತುಳು ಭಾಷೆ ಸಂಸ್ಕೃತಿಯನ್ನು ಪೂಜಿಸುತ್ತಾ, ಬೆಳೆಸುತ್ತಾ, ಪ್ರಪಂಚದ ಮೂಲೆ ಮೂಲೆಗೂ  ತುಳುವರ ಸಂಸ್ಕೃತಿ ಮತ್ತು ಭಾರತ ದೇಶದ ಸಂಸ್ಕೃತಿಯನ್ನು ದೃಶ್ಯ ರೂಪದಲ್ಲಿ ಸಾದರಪಡಿಸಿ  ಮಕ್ಕಳಿಂದ ಹಿರಿಯರವರೆಗಿನ  ಜನರ ಮೆಚ್ಚುಗೆಗೆ ಪಾತ್ರರಾಗಿ ಮತ್ತೊಮ್ಮೆ  ತಮ್ಮ ಕೀರ್ತಿ ಪತಾಕೆಯನ್ನು  ಮರಳುಗಾಡಿನ  ಊರಿನಲ್ಲಿ ಓಯಸಿಸ್ ನಂತೆ ಭಾರತದ ಪ್ರತಿ ರಾಜ್ಯದ, ಪ್ರತಿ ಜಿಲ್ಲೆಯ ಸಂಸ್ಕೃತಿಯನ್ನು ಅದ್ದೂರಿಯಾಗಿ ಪ್ರದರ್ಶನ ಮಾಡಿ  ಸಾವಿರಾರು ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ. ಕಲೆ ಎಂಬುದು ದೇವರ ಆಶೀರ್ವಾದ, ಅದನ್ನು  ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದಾಗ ಯಶಸ್ವಿ ಎಂಬುದು ಕಟ್ಟಿಟ್ಟ ಬುತ್ತಿ . ತುಳುಕುಟ ಎಂಬ ಸಂಘಟನೆಯಲ್ಲಿ ನಾ ಕಂಡಂತೆ ಮಾನ್ಯ ಸುರೇಶ್ ಸಾಲಿಯಾನ್  ರವರು  ಸುಮಾರು 25 ವರ್ಷಗಳಿಂದ ತನ್ನ ಕಲಾ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಾ ಬಂದಿರುತ್ತಾರೆ. ಅವರ ಚಿಂತನೆ, ಅವರಲ್ಲಿರುವ ಭಾವನೆ, ಅವರಲ್ಲಿರುವ ವಿನಯತೆ, ಅವರಲ್ಲಿರುವ ಸೌಜನ್ಯತೆ ಇಷ್ಟಪಡದವರು ಇಷ್ಟಪಡುವಂತೆ ಇರುತ್ತದೆ ಹಾಗೂ ಯಾವುದೇ ಪ್ರಶಸ್ತಿ ಬಯಸದೆ  ಆತ್ಮಾರ್ಥವಾಗಿ ಮಾಡುತ್ತಿರುವ ಕೆಲಸಗಳು ನಡೆಯುತ್ತಲೇ ಇದೆ. ಸುರೇಶ್ ರವರೇ ನಮಗೆ ಈ ವರ್ಷ  ನಿಮ್ಮಿಂದ ಹೊಸ ಕಾರ್ಯಕ್ರಮಗಳು ಬೇಕು ಎಂದು ಹೇಳಿದಾಗಲೇ ಸಂತೋಷದಿಂದ ಸ್ವೀಕರಿಸಿ ಹೇಳಿದ ದಿನದಿಂದಲೇ  ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ  ಯಾರು ಊಹಿಸಲು ಅಸ್ಯಾದವಾದ ಕಲಾಚಾತುರ್ಯತೆ  ಮತ್ತು ವಿವಿಧ  ಜನರನ್ನು  ಸೇರಿಸಿ ಮಾಡುವ ಕಲೆ ಎಲ್ಲರಿಗೂ ಬರುವುದಿಲ್ಲ. ಅಂತಹದರಲ್ಲಿ ಶ್ರೀ ಸುರೇಶ್  ರವರು ಬಹಳ ಕಡಿಮೆ ಸಮಯದಲ್ಲಿ ತುಳು ಪರ್ಬ 2022 ನ್ನು ಬಹಳ ಅದ್ದೂರಿಯಾಗಿ ನೆರವೇರಿಸಿಕೊಡಲು ಕಾರಣರಾಗಿಬಿಟ್ಟರು.


             ಸುಮಾರು 180 ಕಲಾಸಕ್ತಿ ಜನರನ್ನು ಸೇರಿಸಿ ಒಂದುವರೆ ಗಂಟೆಗಳ ಕಾಲ ನಿರಂತರವಾಗಿ ಭಾರತದ ಪ್ರತಿಯೊಂದು  ವೈಶಿಷ್ಟ್ಯತೆಯನ್ನು ಸಾವಿರಾರು ಜನರ ಮುಂದೆ ಸಾದರಪಡಿಸಿ ಜನ ಮಣ್ಣನೆಗೆ ಪಾತ್ರರಾಗಿಬಿಟ್ಟರು. ಕಲೆ ಎಂಬುದು ಶಕ್ತಿ, ಕಲೆ ಎಂಬುದು ಯುಕ್ತಿ, ಕಲೆ ಎಂಬುದು ಪ್ರೀತಿ, ಕಲೆ ಎಂಬುದು ಸೌಜನ್ಯ, ಕಲೆ ಎಂಬುದು ಸಮಾಜ ಎನ್ನುವುದನ್ನು ಸಾಬೀತುಪಡಿಸಿದ ಇವರಿಗೆ ಯಾವ ಪುರಸ್ಕಾರ ಕೊಟ್ಟರು  ಸಾಲದು. ಅವರ ಕಲಾಕುಂಚದಲ್ಲಿ ನಾನೊಬ್ಬ ಚಿಕ್ಕ ಪಾತ್ರಧಾರಿ, ನನಗೆ ಸುಭಾಷ್ ಚಂದ್ರ ಬೋಸ್ ಇವರ ಕೇವಲ ಅರ್ಧ ನಿಮಿಷದ ಪಾತ್ರವಿದ್ದರೂ ಬಣ್ಣ ಮತ್ತು ಉಡುಗೆ ತೊಟ್ಟ ನಂತರ  ನನ್ನಲ್ಲಿ ಬಂದಂತ ಶಕ್ತಿ  ಅದೇ ಕಲಾ ಶಕ್ತಿ. ಒಂದು ಪಾತ್ರ, ನನ್ನ ಮೈನವಿರೇರುಳು ವಂತೆ ಮಾಡಿತು . ನನ್ನಂತೆ ಇನ್ನುಳಿದ  ಪಾತ್ರದಾರಿಗಳು ಬಹಳ ಪ್ರೀತಿಯಿಂದ ತನ್ನ ಪಾತ್ರವನ್ನು ಮಾಡಿ ಇವರ ನಿರ್ದೇಶನಕ್ಕೆ ಬೆನ್ನೆಲುಬುಲಾಗಿ ನಿಂತು  ಯಾವುದೇ ತೊಂದರೆಗಳಿಲ್ಲದೆ  ಅತ್ಯುತ್ತಮ ಕಾರ್ಯಕ್ರಮವಾಗಿ ಹೊರಹೊಮ್ಮಲು ಸಹಾಯ ಮಾಡಿಬಿಟ್ಟರು.

         ತುಳುಕುಟವೆಂಬ  ಸಂಘಟನೆ  ಅದೆಷ್ಟೋ ಜನರಿಗೆ ವೇದಿಕೆಯಾಗಿ, ಪ್ರತಿ ಒಬ್ಬ  ಕಲಾಗಾರನಿಗೆ, ಬೆನ್ನೆಲುಬಾಗಿ  ಕೆಲಸ ಮಾಡುತ್ತಾ ಬಂದಿದೆ. ಆ ವೇದಿಕೆಯೊಳಗೆ  ಏನೂ ಅರಿಯದವನು ಕೂಡ  ಒಂದು ಬಾರಿ ಪ್ರವೇಶ ಮಾಡಿದರೆ  ಏನಾದರೂ ಒಂದು ತಿಳಿದು ಹೊರಗೆ ಬಂದೆ ಬರುತ್ತಾನೆ. ಕಾರಣ ನಿಮ್ಮಲ್ಲಿರುವ ಶಕ್ತಿಯನ್ನು ಹುಡುಕಿ ಕೊಡುವ ತಾಕತ್ತು  ತುಳುಕುಟವೆಂಬ  ವೇದಿಕೆಯಲ್ಲಿದೆ. ಬಹಳ ಪ್ರೀತಿಯಿಂದ  ಪ್ರೇಮದಿಂದ ವ್ಯವಹರಿಸಿ ಈ ಸಂಘದ ಸದಸ್ಯರು  ಆಡಳಿತ ಮಂಡಳಿ  ಹಾಗೂ  ಪ್ರತಿಯೊಬ್ಬರೂ  ಆಗು ಹೋಗುಗಳನ್ನು ಕೂಲಂಕುಶವಾಗಿ  ಪರಿಶೀಲಿಸಿ ಮುಂದಿನ ಹೆಜ್ಜೆ ನೀಡುವ ಸಂಘಟನೆ.  ವಿದ್ಯಾರ್ಥಿಗಳು, ಕಲಾ ಗಾರರು, ನಾಟಕ ಸಾಹಿತ್ಯ, ಯಕ್ಷಗಾನ, ಭೂತ ಕೋಲ, ಭಾರತದ ಪ್ರತಿಯೊಂದು ಸಂಸ್ಕೃತಿ ವೇದಿಕೆಯಲ್ಲಿ ತುಂಬಾ ಗೌರವದಿಂದ  ಪ್ರಸ್ತುತಪಡಿಸುತ್ತಾ  ಹಲವಾರು ಕಲಾಗಾರವನ್ನು ಸೃಷ್ಟಿ ಪಡಿಸಿದ್ದ  ಕೀರ್ತಿ ಇವರಿಗೆ ಸಲ್ಲುತ್ತದೆ.

       ಸುರೇಶ್ ಸಾಲಿಯಾನ ಅವರ ಯೋಚನೆ ಶಕ್ತಿ ಎಂದರೆ, ಒಂದು ಪಾತ್ರಕ್ಕೆ ಯಾರು ಸೂಕ್ತ, ಅವನ ಮುಖ ಭಾವವೇನು, ಅವರ ನಡತೆಯನು, ಅವರ ಮಾತನ್ನು ಒಗ್ಗೂಡಿಸಿ  ಅವನಿಗೆ ಸೂಕ್ತವಾದ  ಪಾತ್ರವನ್ನು ಕೊಡುವಂತಹ  ಶಕ್ತಿ ಹೊಂದಿರುತ್ತಾರೆ.  2022ನೇ ತುಳು ಪರ್ವದಲ್ಲಿ  ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಸಂಸ್ಕೃತಿ ಯನ್ನು ಬಹಳಷ್ಟು ಅಚ್ಚುಕಟ್ಟಾಗಿ ತೋರಿಸಿದೆ. ಪ್ರತಿಯೊಬ್ಬನಲ್ಲಿಯೂ ಕಲೆ ಎಂಬ ಶಕ್ತಿ ಅಡಗಿದೆ ಎಂಬುದನ್ನು ತೋರಿಸಿಕೊಟ್ಟಿದೆ. ವೇದಿಕೆಗೆ ಒಂದಿಬ್ಬರು ಸಾಲದು, ಹಲವಾರು ಮಂದಿ ಬೇಕಾಗುತ್ತದೆ. ಅದಕ್ಕೆ ಸೂಕ್ತವಾದ ಆಯ್ಕೆ ಅವರ ಬತ್ತಳಿಕೆಯಲ್ಲಿ. ತುಳು ಬರಹಕ್ಕೆ ತಾರೇಂದ್ರ ಪಿ ಶೆಟ್ಟಿಗಾರ್, ತಾಂತ್ರಿಕ ಸಹಾಯ ಶ್ರೀ ಶಾನುಬೋಗ್  ಈ ತ್ರಿಮೂರ್ತಿಗಳ ಪ್ರಯತ್ನಕ್ಕೆ ಸಿಕ್ಕ ಗೌರವ ಈ ಸಲದ ಪರ್ಬ.

      ಮೂಡಿಬರಲಿ ಇನ್ನಷ್ಟು ಹೊಸ ಚಿಂತನೆ, ಮೂಡಿಬರಲಿ ಇನ್ನಷ್ಟು ಹೊಸ ಕಾರ್ಯಕ್ರಮ, ಮೂಡಿಬರಲಿ ಇನ್ನಷ್ಟು ಹೊಸ ಹೊಸ ಕಲಾ ಚತುರರು. ಪ್ರೀತಿಯ ಹಾರೈಕೆಯೊಂದಿಗೆ.

ಅಧ್ಯಕ್ಷರು ಆಡಳಿತ ಮಂಡಳಿಯ ಪ್ರತಿಯೊಬ್ಬರಿಗೂ ಶುಭಾಶಯಗಳು.

         ✍️ಮಾಧವ. ಕೆ. ಅಂಜಾರು.













Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.