(ಲೇಖನ -76)ದಿನ ಬೆಳಗಾಗುತ್ತಿದ್ದಂತೆ, ಅಪೌಷ್ಟಿಕ ಆಹಾರದ ದಾಸರಾಗುತ್ತಿರುವ ಇಂದಿನ ಪೀಳಿಗೆ,

(ಲೇಖನ -76) ದಿನ ಬೆಳಗಾಗುತ್ತಿದ್ದಂತೆ, ಅಪೌಷ್ಟಿಕ ಆಹಾರದ ದಾಸರಾಗುತ್ತಿರುವ ಇಂದಿನ ಪೀಳಿಗೆ, ಬಹಳಷ್ಟು ಬದಲಾವಣೆ ನಮ್ಮ ಆಹಾರ ಪದ್ಧತಿಯಲ್ಲಿ ಆಗಿ ಹೋಗಿದೆ. ಸುಲಭವಾಗಿ ಅಲ್ಪಪರಿಶ್ರಮ ಮತ್ತು ಸಮಯದಲ್ಲಿ ಸಿಗಲ್ಪಡುವ ಆಹಾರಕ್ಕೆ ಹೆಚ್ಚಿನವರು ಸೇರಿಕೊಳ್ಳುತ್ತಿದ್ದಾರೆ. ಇಂದಿನ ಕಾಲದಲ್ಲಿ ಹೆಚ್ಚಾಗಿ ಬಹಳಷ್ಟು ಜನರು ಸಮಯವೇ ಇಲ್ಲವೆಂದು ಹೇಳುತ್ತಾ, ಪಾಶ್ಚರೀಕರಿಸಿದ ಆಹಾರ ಪದಾರ್ಥಗಳು ತಂದು ತಿನ್ನುತ್ತಿದ್ದಾರೆ. ನಮ್ಮ ಬಾಲ್ಯದಲ್ಲಿ ಸೇವಿಸುತ್ತಿದ್ದ  ಆಹಾರ ಪದಾರ್ಥ ಬರ ಬರುತ್ತಾ ಮಾಯವಾಗುತ್ತಿದೆ. ಬೆಳಗೆದ್ದು ಇಡ್ಲಿ, ದೋಸೆ, ತಂಗಳನ್ನ, ಮೊಸರು, ಉಪ್ಪಿನಕಾಯಿ ಊಟ, ಮೀನು, ಮನೆಯಲ್ಲಿ ಸಾಕಿರುವ ಕೋಳಿ, ಮೊಲ, ಕಾಡುತ್ಪತ್ತಿಯಲ್ಲಿ ಸಿಗುತ್ತಿದ್ದ ಫಲವಸ್ತು, (ಹಲಸು, ಮಾವಿನಕಾಯಿ, ನೇರಳೆ, ಗೇರುಹಣ್ಣು, ಗೇರುಬೀಜ, ಹೆಬ್ಬಲಸು, ಸೀತಾಫಲ, ರಾಮ ಫಲ, ಮುಂತಾದವು ) ಹಾಗೆಯೇ ಸಸ್ಯಾಹಾರ, ತರಕಾರಿ, ಬಸಳೆ, ಅಲಸಂಡೆ, ಪಪ್ಪಾಯ, ಕುಂಬಳಕಾಯಿ, ಸೌತೆಕಾಯಿ, ಕಾಳು ಬೇಳೆ, ಎಲ್ಲವೂ ಹೆಚ್ಚಾಗಿ ಗದ್ದೆಯಲ್ಲಿ ಬೆಳೆಸಿ ತಾಜಾತನದಿಂದ ಕೂಡಿದ ಆಹಾರವನ್ನು ಸೇವಿಸುತಿದ್ದ ಕಾಲ. ಆರೋಗ್ಯ, ಆಯುಷ್ಯ, ತ್ವಚೆ, ಎಲ್ಲವೂ ಸರಿಯಾಗಿ ಇದ್ದ ಕಾಲ.



        ಇಂದಿನ, ಆಹಾರ, ಬ್ರೆಡ್, ಬರ್ಗರ್, ಹಾಟ್ ಡಾಗ್, ಶವರ್ಮ, ಚೈನೀಸ್ ಫಾಸ್ಟ್ ಫುಡ್, ಕೆ. ಎಫ್. ಸಿ. ಪಿಜ್ಜಾ ಮುಂತಾದ ಆಹಾರವನ್ನು ಅತಿಯಾಗಿ ಸೇವಿಸಿ ಆರೋಗ್ಯ ಮತ್ತು ವಿಪರೀತ ಬೊಜ್ಜಿನೊಂದಿಗೆ ಜೀವನ ಕಳೆಯುವ ಸ್ಥಿತಿ. ಆಯುಷ್ಯ 100 ರಿಂದ 50ಕ್ಕೆ ತಂದಿಟ್ಟು ಜೀವ ಕಳೆದುಕೊಳ್ಳುವ ಮಟ್ಟಕ್ಕೆ ತಲುಪುವ ಜೀವನ ಪದ್ಧತಿಗೆ ಅಂಟಿಕೊಂಡು ಬದುಕು ನಡೆಸುವ ಜನರ ಸಂಖ್ಯೆ ಅತಿಯಾಗುತ್ತಿದೆ. ಯಾಕೆಂದರೆ ಕೆಲವರು  ದೊಡ್ಡಸ್ತಿಕೆ ತೋರಿಸಿಕೊಳ್ಳಲು, ಇನ್ನು ಕೆಲವರು ಅಂತಹ ಆಹಾರಕ್ಕೆ ದಾಸರಾಗಿ ಹೊರಗೆ ಬರದೇ ಇರುವ ಮಟ್ಟಕ್ಕೆ ತಲುಪಿರುತ್ತಾರೆ. ತನ್ನ ಜೀವ ಜೀರ್ಣಸಿಕೊಳ್ಳದಷ್ಟು ತುಂಬಿಸಿ ವಿಕಾರ ರೂಪಕ್ಕೆ ಬಿದ್ದು ಒದ್ದಾಡುತ್ತಾರೆ. ನಾನು ಅಲ್ಪವೇ ತಿನ್ನುವುದು, ನಾನು ತುಂಬಾ ದಪ್ಪಗೆ, ಸ್ಲಿಮ್ ಆಗ್ಬೇಕು ಅನ್ನುತ್ತಾ ಹೊಸ ಹೊಸ ನಾಟಕವಾಡುತ್ತಾ ನಾಲ್ಕು ಹೆಜ್ಜೆ ಹಾಕಿ... ಇನ್ನಷ್ಟು ಬಾರಿಸಿ ತೆಗುವ ಅಲ್ಪ ಜನರು.

ನೀವೆಷ್ಟು ದಪ್ಪಾಗಿದ್ದರೂ, ತೆಳ್ಳಗಿದ್ದರೂ ಸರಿಯಾದ ಆಹಾರವನ್ನು ಸೇವಿಸಲು ಪ್ರಯತ್ನಪಟ್ಟಾಗ ಆರೋಗ್ಯ ಚೆನ್ನಾಗಿರುತ್ತದೆ. ಬರೇ ಅಪೌಸ್ಟಿಕ ಆಹಾರವನ್ನು ತಿಂದು ಆಕಾರ ಕಳೆದುಕೊಳ್ಳಬೇಡಿ, ಸಹಜವಾಗಿ ಅಥವಾ ಪಾರಂಪರ್ಯ ಅಥವಾ ಆರೋಗ್ಯಕರ ದಪ್ಪ ಜೀವ ಅಥವಾ ತೆಳ್ಳಗಿನ ಜೀವವೂ ಪ್ರಕೃತಿ ಕೊಟ್ಟ ಸೌಂದರ್ಯದಂತೆ, ನಾನು ಹೇಗಿದ್ದರೂ ಚೆನ್ನ ಎಂಬ ಖುಷಿಯಲ್ಲಿರಿ. ಸೌಂದರ್ಯ ಬರೇ ತೆಳ್ಳಗಿರುವವರು ಮಾತ್ರ ಅಲ್ಲಾ ದಪ್ಪಗಿರುವ ಜೀವ ಕೂಡ ಸೌಂದರ್ಯದ ರಾಣಿ ಅಥವಾ ರಾಜನಂತೆ ಇರುವವರೂ ಇದ್ದಾರೆ.

           ನಮಗೆ ಬದುಕಲು ಆಹಾರವನ್ನು ಬಹಳ ಪ್ರಾಮುಖ್ಯ, ನಮ್ಮ ದಿನಚರಿಯಲ್ಲಿ ಸಮಾನ ಪೌಷ್ಟಿಕ ಮತ್ತು ಉತ್ತಮವಾದ ಆಹಾರಪದ್ದತಿಯನ್ನು ರೂಢಿಸಿಕೊಂಡಾಗ ನಮ್ಮ ಜೀವ, ಜೀವನ ಎರಡೂ ಚೆನ್ನಾಗಿಯೇ ಇರುತ್ತದೆ. ರೋಗ ರುಜಿನ ದೂರವಾಗಿ ಲಘುವಾಗಿ ನಡೆದು ಓಡಾಡಿ ನೆಮ್ಮದಿಯ ದಿನವನ್ನು ಕಳೆಯಬಹುದು.

    ಮಿತ ಆಹಾರ, ಹಿತನುಡಿ, ಹೆಚ್ಚು ಕೆಲಸವನ್ನು ಮಾಡಿದಾಗ ನಮ್ಮ ಜೀವದ ಆಕಾರವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಇಂದಿನಿಂದ ಶುದ್ಧ ಆಹಾರ ಮತ್ತು ಪೌಷ್ಟಿಕತೆಯ ಆಹಾರವನ್ನು ತಿಂದು ಸರಿಯಾದ ಮನುಜನ ಆಕಾರಕ್ಕೆ ಮರಳುವಂತೆ ಆಗಲಿ ಎಂದು ಹಾರೈಸುತ್ತ.

✍️Madhav. K. Anjar









Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ