ನಗುತಾ ನಿಂತಾಗ

ನೀ ನಗುತಾ ನಿಂತಾಗ
ಸವಿ ಮಾತು ನುಡಿದಾಗ
ಸೋತೆ...ನಾನಾಗ!
ನಿನ್ನ ಕಣ್ಣಲೇನು ಮಾಯೆ
ಎನ್ನ ಹೃದಯದೊಳು ನೀಯೇ 
ಸನಿಹಕೆ ಬಾರೆಯ
ತಡವೇತಕೆ ನೀನಿಗ!

ಬಾಗಿಲನು ತೆರೆದಾಗ 
ನಿನ್ನ ಮೊಗವ ಕಂಡಾಗ
ಸೋತೆ.. ನಾನಾಗ!
ಬೇಲೂರ ಶಿಲೆಯಂತೆ
ನಿನ್ನ ಚೆಂದದಾಕಾರ
ಶಿಲ್ಪಿಯೇ ನಾಚುವ
ನಿನ್ನ ಆ ಸೌಂದರ್ಯಕೆ
ಹೇಗಿರಲಿ ನಾನೀಗ!
       ✍️Madhav. K. Anjar 














Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ