(ಲೇಖನ 79 ) ಮಮತೆಯ ತೊಟ್ಟಿಲು

 (ಲೇಖನ 79 ) ಮಮತೆಯ ತೊಟ್ಟಿಲು

   ತಾಯಿಯು ಮಕ್ಕಳ ಮೇಲೆ ತೋರಿಸುವ ಪ್ರೀತಿ ಮಮತೆಯಾದರೆ, ಆ ಪ್ರೀತಿಗೆ ಬೆಲೆ ಕಟ್ಟುವ ಸಾಧ್ಯತೆ ಯಾವ ಮಕ್ಕಳಿಗೂ ಬರದು. ಮಮತೆ ಅನ್ನೋದು ದೊಡ್ಡವರು ತನಗಿಂತ ಚಿಕ್ಕವರಿಗೆ ತೋರುವ ಪ್ರೀತಿ ವಾತ್ಸಲ್ಯ. ಮಕ್ಕಳನ್ನು ಹೊಂದಿರುವ ಪ್ರತಿ ತಾಯಿಯ ಪ್ರೀತಿ, ಮಮಕಾರ, ಆರೈಕೆ, ಹಾರೈಕೆ, ವರ್ಣಿಸಲು ಸಾಧ್ಯವಿಲ್ಲ. ತನ್ನ ಮಕ್ಕಳಿಗಾಗಿ ತಾಯಿ ಪಡುವ ಕಷ್ಟಗಳು ಒಂದೆಡೆಯಾದರೆ, ಜವಾಬ್ದಾರಿಯುತ ಅಪ್ಪ ಸಂಸಾರಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಬದುಕುತ್ತಿರುತ್ತಾನೆ.



        ಮಕ್ಕಳು ಎಲ್ಲಿದ್ದರೂ ಕ್ಷೇಮವಾಗಿರಲಿ ಆ ದೇವರು ಸದಾಕಾಲ ಕಾಪಾಡುತ್ತಿರಲಿ ನನಗೆ ಕಷ್ಟವಾದರೂ ಪರವಾಗಿಲ್ಲ ನನ್ನ ಮಕ್ಕಳಿಗೆ ಕಿಂಚಿತ್ತು ಕಷ್ಟವನ್ನು ಕೊಡಬೇಡ ದೇವರೇ ಎನ್ನುತ್ತಾ, ಸದಾ ಹಾರೈಸುವ ಜೀವ ತಾಯಿಯೊಬ್ಬಳೇ. ಮಕ್ಕಳಿಗೆ ಏನೇ ಕಷ್ಟ ಬಂದರೂ  ಅದನ್ನು ಎದುರಿಸುವ ಶಕ್ತಿಯನ್ನು ಕೊಡುತ್ತಿರು, ಭಗವಂತ ನೀನೆ ಅವರನ್ನು ಕಾಪಾಡುತ್ತಿರು ಎಂದು ಮನದೊಳಗೆ ಹಾರೈಸುವ ಪೋಷಕರು . ತಂದೆ ತಾಯಿಯ ಮತ್ತು ಮಕ್ಕಳ ನಡುವಿನ ಬಾಂಧವ್ಯ,ಸಂಬಂಧ ವರ್ಣಿಸಲಸಾಧ್ಯ.  ನಮ್ಮ ಜೀವನದಲ್ಲಿ ತಂದೆ ತಾಯಿ ನೀಡಿದ ಪ್ರೀತಿ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ನಮ್ಮ ಬಾಲ್ಯತನದಿಂದ, ನಮ್ಮ ಮುಪ್ಪಿನ ಜೀವನ ಮುಗಿದು ಸಾಯುವವರೆಗೂ ತಂದೆ ತಾಯಿಯ ಪ್ರೀತಿ ಸದಾ ನಮ್ಮ ಕಣ್ಣ ಮುಂದೆ ಇರುತ್ತದೆ.

       ಮಗಾ, ಮಗಳೇ ಬೆಳಗಾಯ್ತು ಎದ್ದೇಳು, ಕೈ ಕಾಲು ಮುಖ ತೊಳೆದು ತಿಂಡಿ ತಿನ್ನು ಶಾಲೆಗೆ ಹೋಗು, ಚೆನ್ನಾಗಿ ಕಲಿತು ಉತ್ತಮ ಮನುಷ್ಯನಾಗು ಎಂದೆಲ್ಲ ಆಶೀರ್ವಾದ ಮಾಡುತ್ತ, ಮನೆಯ ಎಲ್ಲಾ ಕೆಲಸವನ್ನು ತನ್ನ ಮೇಲೆ ಹಾಕಿಕೊಂಡು, ಅಲ್ಪ ನಿದ್ರೆ, ವಿಶ್ರಾಂತಿ ಪಡೆಯುತ್ತ ಸದಾ ಮಕ್ಕಳ ಸುಖವನ್ನು ಬಯಸುವ ಜೀವ. ಇಂದಿನ ದಿನಗಳಲ್ಲಿ ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗುವ ಕಾರಣ ತಾಯಿಯ ಅಲ್ಪ ಜವಾಬ್ದಾರಿ ಯನ್ನು ತಂದೆಯೂ ತೆಗೆದುಕೊಂಡು ಮಕ್ಕಳನ್ನು ಬೆಳೆಸಲು ಹರಸಾಹಸ ಪಡುತ್ತಿರುತ್ತಾರೆ. ಮಕ್ಕಳು ಏನೇ ತಪ್ಪು ಮಾಡಿದರೂ ಅಮ್ಮನೆನಿಸಿಕೊಂಡವಳು ಎದುರು ಸಿಟ್ಟು ತೋರಿಸಿದರೂ ಮನದೊಳಗೆ ಅತೀ ಪ್ರೀತಿಯನ್ನು ಮಾಡುತ್ತ, ತಪ್ಪನ್ನು ತಿದ್ದುಪಡಿ ಮಾಡಲು, ಕ್ಷಮಿಸಿ ಮುಂದಿನ ಜೀವನಕ್ಕೆ ಅನುವು ಮಾಡುತ್ತಾಳೆ.

      ಮಗ, ಕಳ್ಳ ನಾದರೂ, ರೌಡಿಯಾದರೂ, ಸುಳ್ಳ ನಾದರೂ, ಕುಡುಕನಾದರೂ, ತಿರ್ಬೋಕಿ ಯಾದರು ಅಮ್ಮನ ಮಾತು ಒಂದೇ ನನ್ನ ಮಗ ಹಾಗಿಲ್ಲ, ಅವನು ನನ್ನ ಮಗು ಹಾಗೆ ಮಾಡುವುದೇ ಇಲ್ಲ ಎಂದು ಧೈರ್ಯವಾಗಿ ಹೇಳುವವಳು, ಅಂದ್ರೇ ಅಮ್ಮನ ಮಮತೆಗೆ ಯಾರೂ ಎದುರಿರಲಾರರು. ಅಕಸ್ಮಾತ್ ವಯಸ್ಸಾಗಿ ನಡೆಯಲು ಆಗದೇ, ಅಥವಾ ಆಸ್ಪತ್ರೆಗೆ ಸೇರಿ ನೋವು ಅನುಭವಿಸಿತಿದ್ದರೂ ತನ್ನ ಮಕ್ಕಳ ಬಗ್ಗೆ ಚಿಂತಿಸುವ, ಹಾರೈಸುವ ಜೀವ ನಮ್ಮ ತಾಯಿ. ಜಗತ್ತಿನಲ್ಲಿ ಯಾರು ನಿನ್ನನ್ನು ದೂರ ಮಾಡಿದರೂ ತಂದೆ ತಾಯಿ ಯಂತೂ ದೂರ ಮಾಡುವುದಿಲ್ಲ. ಪ್ರಪಂಚದಲ್ಲಿ ನಿನ್ನನ್ನು ಯಾರಾದ್ರೂ ಏನೇ ಹೇಳಲಿ, ತೆಗಳಲಿ, ಹೊಗಳಲಿ, ದೊಡ್ಡ ಸ್ಥಾನವೇ ಕೊಡಲಿ ತಾಯಿಯ ಮಮತೆಯಲ್ಲಿ ಯಾವುದೇ ಕೊರತೆ ಇರುವುದಿಲ್ಲ.

       ತಂದೆ ತಾಯಿ ಮುಪ್ಪಿನ ಜೀವನ ನಡೆಸುವಾಗ ಹೆಚ್ಚು ಆರೈಕೆ ಮಾಡಿ, ತಂದೆ ತಾಯಿಯೇ ಮೊದಲ ದೇವರು, ತಂದೆ ತಾಯಿಯೇ ಮೊದಲ ಗುರು, ತಂದೆ ತಾಯಿಯೇ ನಿನ್ನ ಐಶ್ವರ್ಯ, ಗೌರವ, ಪ್ರಪಂಚ. ಅವರ ಒಂದು ಕಣ್ಣೀರಿನ ಮಾತು ಸರ್ವನಾಶಕ್ಕೆ ಕಾರಣವಾಗಬಹುದು. ತಂದೆ ತಾಯಿಯನ್ನು ತೆಗಳಬೇಡ, ತಂದೆ ತಾಯಿಯನ್ನು ವಯಸ್ಸಾದ ಮೇಲೆ ವೃದ್ದಾಶ್ರಮಕ್ಕೆ ಹಾಕಬೇಡ. ತಂದೆ ತಾಯಿಯು ನಡೆಯಲಾಗದಿದ್ದರೆ ಬೈದು ಇನ್ನಷ್ಟು ದುಃಖ್ಖ ಕೊಡಬೇಡ.

ಈ ಲೇಖನವನ್ನು ನನ್ನ ಪ್ರೀತಿಯ ಗೆಳೆಯನಿಗೆ ಅರ್ಪಿಸುತ್ತಾ,

ಭಾರತದ ಅನುರಾಗ, ಎಲ್ಲರಿಗೂ ಉತ್ತಮ ಮಕ್ಕಳು, ಮತ್ತು ಅವರ ಪೋಷಕರಿಗೆ ಕೊನೆಯವರೆಗೂ ಉತ್ತಮವಾದ ಆರೋಗ್ಯ ಕೊಟ್ಟು ಶ್ರೀ ದೇವರುಗಳು ಕಾಪಾಡಲಿ ಎಂಬ ಹಾರೈಕೆಯೊಂದಿಗೆ.

      ✍️Madhav. K. Anjar.



















  


   

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ