(ಲೇಖನ -65) ನಾಶವಾಗುತ್ತಿರುವ ಅರಣ್ಯ ಪ್ರದೇಶಗಳು, ನವರಂದ್ರಗಳನ್ನು ಮುಚ್ಚಿ ಕುಳಿತುಕೊಳ್ಳುವ ಅರಣ್ಯಾಧಿಕಾರಿಗಳು,

(ಲೇಖನ -65) ನಾಶವಾಗುತ್ತಿರುವ ಅರಣ್ಯ ಪ್ರದೇಶಗಳು, ನವರಂದ್ರಗಳನ್ನು ಮುಚ್ಚಿ ಕುಳಿತುಕೊಳ್ಳುವ ಅರಣ್ಯಾಧಿಕಾರಿಗಳು,ಅರಣ್ಯ ಸಂಪತ್ತು ನಮಗೆ ಅಗತ್ಯವೇ ಇಲ್ಲವೆಂಬಂತೆ ನಡೆದುಕೊಳ್ಳುತ್ತಿರುವ ಇಂದಿನ ಯುವಪೀಳಿಗೆ, ಎಸಿ ಕಾರು, ಬೈಕು ಎಸಿ ಬಸ್ಸು ಎಲ್ಲವೂ ಹವಾನಿಯಂತ್ರಿತ  ವಾಹನಗಳು  ಸುತ್ತಾಡಲು ಇರುವಾಗ ನಮಗೆ ಮರಗಿಡಗಳ ಅವಶ್ಯಕತೆಯಿದೆಯೇ? ಸುಂದರ ಮನೆಗಳ ಕಿಟಕಿ ಬಾಗಿಲನ್ನು ಅಲಂಕರಿಸಲು ತೇಗ ಬೀಟೆ, ಹಲಸಿನ ಮರಗಳು ಎಲ್ಲಿಯಾದರೂ ಸಿಕ್ಕಿದರೆ ಸಾಕು ನನ್ನ ಮನೆ ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲರಲ್ಲೂ ಇದೆ, ಆದರೆ ಖಾಲಿ ಜಾಗಗಳು ಇರುವಲ್ಲಿ  ಒಂದು ಗಿಡ ನೆಡುವ  ಮನಸ್ಸು ಯಾವನು ಮಾಡುತ್ತಿಲ್ಲ! ಪರಿಸರ ಪ್ರೇಮಿಗಳು ಒಂದಷ್ಟು ಗಿಡಗಳನ್ನು ಅರಣ್ಯ ಪ್ರದೇಶದಲ್ಲಿ ಸಸಿ ನೆಟ್ಟು  ಪ್ರಕೃತಿಯ  ಮಡಿಲನ್ನು ಕಾಪಾಡುತ್ತಿರುತ್ತಾರೆ, ಆದರೆ ಸಾಮಾನ್ಯ ಜನರು ಪ್ರಕೃತಿಯ ಬಗ್ಗೆ  ಚಿಂತೆಯಿಲ್ಲದೆ ಬದುಕುತಿದ್ದಾರೆ.  ಎಲ್ಲಿಯೂ ಹೋಗಬೇಕಾಗಿಲ್ಲ, ತಮ್ಮ ತಮ್ಮ ಊರು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. ನೀವು ನಡೆಯುತ್ತಿದ್ದ, ಅಥವಾ ಹಾದುಹೋಗುತ್ತಿದ್ದ ಪ್ರದೇಶಗಳು ಎಷ್ಟು ಸುಂದರ ಮಯವಾಗಿತ್ತು,  ಅದೆಷ್ಟು ಮರ ಗಿಡಗಳಿದ್ದವು, ಸುತ್ತಲ ಪ್ರದೇಶಗಳು ಎಷ್ಟು ಹಸಿರುಮಯ ವಾಗಿತ್ತು, ನದಿಗಳು ಅದೆಷ್ಟು  ಶುಭ್ರವಾಗಿ ಹರಿಯುತ್ತಿತ್ತು, ನೀರಿನ ಆಶ್ರಯ  ಎಲ್ಲಾ ಪ್ರದೇಶದಲ್ಲೂ ಹೇಗಿತ್ತು? ಆಮ್ಲಜನಕ, ಅರಣ್ಯ ಜೀವಿಗಳು, ಶುಭ್ರ ಗಾಳಿ, ಶಾಂತವಾಗಿರುವ ಪ್ರದೇಶ, ಬೆಟ್ಟಗುಡ್ಡಗಳು ಅದರಲ್ಲಿರುವ ಪ್ರಾಣಿ ಪಕ್ಷಿಗಳು ಎಲ್ಲವೂ ನಿಮ್ಮ ಕಣ್ಣ ಮುಂದೆ ಕಾಣುತ್ತಿತ್ತು. ಆದರೆ ಇಂದು ಅದೇ ದಾರಿಯಲ್ಲಿ ನಡೆದಾಗ ಬಣ್ಣ ಬಣ್ಣದ ಸುಂದರ ಮನೆಗಳು, ಮನೆಯ ಮುಂದೆ  ಸುಂದರ ಕಾಂಪೌಂಡ್ ಗಳು, ಒಂದು ಕಾರು ಎರಡು ಬೈಕ್, ಅವರವರ ಸಾಧ್ಯತೆಗೆ ತಕ್ಕಂತೆ ಐಷಾರಾಮದ ಬದುಕು.  ಇಲ್ಲಿ ಗಮನಿಸಬೇಕಾಗಿರುವುದು, ನಮ್ಮ ಹಿಂದಿನ ಅರಣ್ಯ ಪ್ರದೇಶಗಳು ಸಂಪೂರ್ಣ ನಾಶಪಡಿಸಿ, ಪ್ರದೇಶಗಳನ್ನು  ಲೇಔಟ್ ಗಳನ್ನಾಗಿ ಪರಿವರ್ತಿಸಿ, ಹತ್ತು ಸೆಂಟು 20 ಸೆಂಟುಗಳ  ನಕ್ಷೆಗಳನ್ನು  ತಯಾರಿಸಿ, ಕೃಷಿ ಪ್ರದೇಶಗಳನ್ನು ಕೂಡ ಪಟ್ಟಣವಾಗಿ  ಪರಿವರ್ತನೆಗೊಳ್ಳುತ್ತ ಊರಿನ ಹಳ್ಳಿಯ, ಸಂಪೂರ್ಣ ಚಿತ್ರವನ್ನು ಬದಲಾಯಿಸಲು ತುಂಬಾ ಉತ್ತಮ  ಪರಿಶ್ರಮದಿಂದ ಬದಲಾವಣೆಗಳನ್ನು ಪ್ರಭಾವಿ ಜನರು ಮಾಡಿಕೊಂಡಿದ್ದಾರೆ. ಕೋಟಿಗಟ್ಟಲೆ ಹಣವನ್ನು ಫಿಕ್ಸೆಡ್ ಡೆಪಾಸಿಟ್ ಇಟ್ಟು  ಆರಾಮವಾಗಿ ದಿನಗಳೆಯುತ್ತಿದ್ದಾರೆ.



               ದೊಡ್ಡ ದೊಡ್ಡ  ಕುಳಗಳ ಸಹಾಯದಿಂದ  ನಿಜವಾದ ಅರಣ್ಯ ಪ್ರದೇಶಗಳನ್ನು ಇಲ್ಲವಾಗಿಸಿ, ಅಲ್ಲಲ್ಲಿ ಉಳಿದ ಈ ಹಿಂದೆ ಹಿಂದುಳಿದ ಜನರಿಗೆ ನೀಡಿದ ದರ್ಖಾಸ್ತು ಜಾಗಗಳನ್ನು, ಮತ್ತು ತರಗೆಲೆಗಳನ್ನು ಉಪಯೋಗಿಸುವ ಚಿಕ್ಕಪುಟ್ಟ ಕಾಡುಗಳನ್ನು ಅರಣ್ಯ ಪ್ರದೇಶದ ಪಟ್ಟಿಗೆ ಸೇರಿಸಿ, ಮನೆ ಕಟ್ಟದ ಸ್ಥಿತಿಗೂ ತಂದು ನಿಲ್ಲಿಸಿರುವ ಪ್ರಭಾವಿ ಜನಗಳು. ರಿಯಲ್ ಎಸ್ಟೇಟ್ ಬಿಜಿನೆಸ್, ಲ್ಯಾಂಡ್ ಲಿಂಕ್ಸ್ ಬಿಸಿನೆಸ್ ಎಂದು ಹೇಳುತ್ತಾ. ಮೂಲೆ ಮೂಲೆಯನ್ನು ಅಗೆದು ಸಮತಟ್ಟು ಮಾಡಿ ದೊಡ್ಡ ದೊಡ್ಡ ಕಟ್ಟಡಗಳನ್ನು ಹಳ್ಳಿಹಳ್ಳಿಗೂ ತಲುಪಿಸುತ್ತಿರುವ ನಮ್ಮ ಸುಂದರ ವ್ಯವಸ್ಥೆ. ಇಂದಿಗೂ, ಅಳಿದುಳಿದ ಅರಣ್ಯ ಪ್ರದೇಶಗಳನ್ನು ತುಂಬಾ ವ್ಯವಸ್ಥಿತವಾಗಿ ಮೇಲಿನ ಬಿಸಿನೆಸ್ಮ್ಯಾನ್ ಗಳು ವಶಪಡಿಸಿಕೊಳ್ಳಲು ತಮ್ಮ ಕೊಡುಗೆಗಳನ್ನು ನೀಡುತ್ತಿದ್ದಾರೆ.

               ಬರೇ ಭಾಷಣಗಳಲ್ಲಿ ಮತ್ತು ಪೇಪರುಗಳಲ್ಲಿ ಅರಣ್ಯಪ್ರದೇಶಗಳನ್ನು ತೋರಿಸಿದರೆ ಸಾಲದು, ಅರಣ್ಯ ಮನುಜಕುಲದ ಸಂಪತ್ತು, ಪ್ರಾಣಿ ಪಕ್ಷಿ, ನದಿಗಳ ಜೀವನಾಡಿ, ಅದನ್ನು ನಾಶಪಡಿಸುತ್ತಿರುವ ನಾವೆಲ್ಲರೂ ಪರಿಣಾಮಗಳನ್ನು ಎದುರಿಸುತ್ತಲೇ ಇದ್ದೇವೆ! Oxigen ಡಬ್ಬ ಗಳನ್ನು ಇನ್ನು ಮುಂದಿನ ದಿನಗಳಲ್ಲಿ ಮನೆಗಳಲ್ಲಿ ಸೇರಿಸಿ ಜೀವಿಸಬೇಕಾಗಬಹುದು. ಶುದ್ಧ ಗಾಳಿಗಾಗಿ ಪರದಾಡಿ ಸಾಯುತ್ತಿರುವ ಪಟ್ಟಣಗಳು ಈಗಾಗಲೇ ನಮ್ಮ ದೇಶದಲ್ಲಿ ಅತಿಯಾಗಿದೆ. ದೇಶದ ಜನಸಂಖ್ಯೆಇನ್ನಷ್ಟು ಜಾಸ್ತಿಯಾಗುತ್ತಿವೆ, ಮನೆ ಮಠ ಗಳು ಅಲ್ಲಲ್ಲಿ ಎದ್ದೇಳುತ್ತ ಸಂಪೂರ್ಣವಾಗಿ ಪ್ರಕೃತಿಯನ್ನು ನಾಶ ಮಾಡುತ್ತಿದೆ. ಇದನೆಲ್ಲವನ್ನು ನಿಲ್ಲಿಸಲು ಸಾಧ್ಯವೇ ಇಲ್ಲವೆಂಬತೆ ನಮ್ಮ ವ್ಯವಸ್ಥೆಗಳು ಪ್ರತಿಕ್ರಿಯೆ ನೀಡುತ್ತವೆ, ಪ್ರಕೃತಿ ವಿಕೋಪ, ಅಕಾಲಿಕ ಮಳೆಗೆ ಸಕಲ ಜೀವಿಗಳು ನಾಶವಾಗುತ್ತಿವೆ, ಭೂಮಿಯ ಭವಿಷ್ಯ ಮನುಷ್ಯ ಕುಲ ನಾಶಪಡಿಸುತ್ತಿದೆ.

        The passion of india (R) ಭಾರತ ಮತ್ತು ಪ್ರಪಂಚದಲ್ಲಿ ಪ್ರಕೃತಿಯ ರಕ್ಷಣೆ ಮಾಡುವ ಜನರು ಇನ್ನಷ್ಟು ಹುಟ್ಟಿಬರಲಿ ಭೂಮಿ ತಾಯಿಯ ಸೇವೆ ಪ್ರತಿಯೊಬ್ಬರೂ ಮಾಡುವಂತಾಗಲಿ ಎಂಬ ಹಾರೈಕೆಯೊಂದಿಗೆ.

   ✍️Madhav. K. Anjar













Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ