(ಲೇಖನ -66)ಹಣದುಬ್ಬರ ವೆಂದರೆ ಏನೆಂದು ಕೂಡ ತಿಳಿಯದ ಸಾಮಾನ್ಯ ಜನರು ತನ್ನ ಹೊಟ್ಟೆಪಾಡಿಗಾಗಿ ಹರಸಾಹಸ ಪಡುತ್ತಾ ಜೀವನವನ್ನು ಕಳೆಯುತ್ತಿರುತ್ತಾರೆ.

(ಲೇಖನ -66) - ಹಣದುಬ್ಬರ - ಹಣದುಬ್ಬರ ವೆಂದರೆ  ಏನೆಂದು ಕೂಡ ತಿಳಿಯದ ಸಾಮಾನ್ಯ ಜನರು  ತನ್ನ ಹೊಟ್ಟೆಪಾಡಿಗಾಗಿ ಹರಸಾಹಸ ಪಡುತ್ತಾ ಜೀವನವನ್ನು ಕಳೆಯುತ್ತಿರುತ್ತಾರೆ. ದಿನದಿಂದ ದಿನಕ್ಕೆ ದಿನೋಪಯೋಗಿ ವಸ್ತುಗಳ ಬೆಲೆಗಳು ಏರುತ್ತಲೇ ಇದೆ. ಇದಕ್ಕೆ ಕಾರಣ  ಹಲವಾರು, ಆದರೆ ಹಣದುಬ್ಬರವನ್ನು ಹತೋಟಿಯಲ್ಲಿಡುವ  ಜವಾಬ್ದಾರಿ ಸಂಬಂಧಪಟ್ಟ  ಇಲಾಖೆ ಅಥವಾ ಉತ್ತಮ  ಬುದ್ಧಿವಂತ ಮತ್ತು ಜ್ಞಾನವುಳ್ಳ   ಹಣಕಾಸು ಮಂತ್ರಿಗಳಿಗೆ  ಅಥವಾ ಪ್ರಧಾನಮಂತ್ರಿಗಳಿಗೆ ಹಾಗೂ  ಜವಾಬ್ದಾರಿಯುತ ಪ್ರಜೆಗಳಿಂದ  ಕೂಡಿರುತ್ತದೆ. ಹಣದುಬ್ಬರಕ್ಕೆ ನೇರ  ಮತ್ತು ಪರೋಕ್ಷವಾಗಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಜವಾಬ್ದಾರರಾಗಿರುತ್ತಾರೆ. ಇದರಲ್ಲಿ  ಸರ್ಕಾರದ ಆಡಳಿತದ ರೀತಿ ಬಹಳ ಹೆಚ್ಚಿನ ಮಹತ್ವವನ್ನು ಹೊಂದಿರುತ್ತದೆ. ಭಾರತೀಯರು ತಾವು ಖರೀದಿಸುವ  ಪ್ರತಿಯೊಂದು ವಸ್ತುಗಳಲ್ಲಿ  ತೆರಿಗೆ  ಮೂಲಕ ಸರ್ಕಾರಕ್ಕೆ ಪಾವತಿ ಮಾಡುತ್ತಿದ್ದಾರೆ ಆದರೆ ಪಾವತಿ ಮಾಡಿದ ತೆರಿಗೆ  ಜನರಿಗೆ ಎಷ್ಟರಮಟ್ಟಿಗೆ  ತಲುಪುತ್ತಿದೆ  ಎನ್ನುವುದು  ನಿಗೂಢವಾಗಿಯೇ ಇರುತ್ತದೆ. ಸರ್ಕಾರ ಹಲವಾರು  ಸವಲತ್ತು ಅಥವಾ ಸಾರ್ವಜನಿಕ ಉದ್ದೇಶಕ್ಕಾಗಿ  ಕೋಟಿಗಟ್ಟಲೆ  ಹಣವನ್ನು ಬಿಡುಗಡೆ ಮಾಡುತ್ತಿರುತ್ತದೆ, ಬಿಡುಗಡೆಯಾದ  ಹಣ ಪೂರ್ಣವಾಗಿ ಪ್ರಜೆಗಳ  ಕೈ ಸೇರುವುದಿಲ್ಲ. ಹಣವು  ಬಿಡುಗಡೆಯಾಗುತ್ತಿದ್ದಂತೆಯೇ ಭ್ರಷ್ಟಾಚಾರ ಮಾಡುವ ರಾಜಕೀಯ ವ್ಯಕ್ತಿಗಳ ಕೈ ಸೇರಿಬಿಡುತ್ತದೆ, ಒಂದು ಯೋಜನೆಯಲ್ಲಿ ಹಣಕ್ಕಾಗಿ  ಆಸೆ ಪಡುತ್ತಿರುವ ಶಕ್ತಿಗಳು ಸೇರಿಕೊಂಡರೆ ಯೋಜನೆಗಳು ಸಂಪೂರ್ಣವಾಗಿ ವಿಫಲ ಗೊಳ್ಳುತ್ತದೆ. ಜನರ ಹಣ ಭ್ರಷ್ಟರ  ಕೈಗೆ ಸಿಕ್ಕಿ  ಅದೇ ರೀತಿ ಜನರು ಕಷ್ಟಪಡುವಂತಹ ಸಂದರ್ಭಗಳು ಪುನರಾವರ್ತಿತ ಗೊಳ್ಳುತ್ತದೆ.



               ಈ ಮೇಲಿನ ಸಂದರ್ಭಗಳು  ಪುನರಾವರ್ತನೆಗೊಳ್ಳಳು ನಾವೆಲ್ಲರೂ ಕಾರಣರೆಂದು ನನಗನಿಸುತ್ತದೆ. ಪ್ರತಿಯೊಬ್ಬ ಪ್ರಜೆಯೂ  ಜವಾಬ್ದಾರಿಯುತವಾಗಿ ವರ್ತಿಸಿದರೆ ಭ್ರಷ್ಟರನ್ನು ಮಟ್ಟ ಹಾಕಬಹುದು. ಪಾರದರ್ಶಕವಾಗಿರುವ ಯೋಜನೆಗಳು ಸಂಪೂರ್ಣವಾಗಿ ಜನರ ಕೈಗೆ ಸೇರಿರುತ್ತಿದ್ದರೆ ಭಾರತದಲ್ಲಿ ಹಣದುಬ್ಬರವನ್ನು ಹತೋಟಿಯಲ್ಲಿಡಬಹುದು. ಇಂದಿಗೂ ಹಲವು  ಖಾಸಗಿ ಕಂಪನಿಗಳಲ್ಲಿ  25ವರ್ಷಗಳ ಹಿಂದಿನ ವೇತನ ಪದ್ಧತಿ ನಡೆಯುತ್ತಿದೆ. ಆದರೆ ದಿನಬಳಕೆ  ವಸ್ತುಗಳ ಬೆಲೆಯೇರಿಕೆ ವರ್ಷ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಇದರಿಂದ ಕೆಲಸಗಾರ  ಮತ್ತು ಅವನ ಕುಟುಂಬ ಬಹಳಷ್ಟು ಕಷ್ಟ ಪಟ್ಟು  ಜೀವಿಸಬೇಕಾಗುತ್ತದೆ. ಪ್ರಸ್ತುತ ಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ಖರ್ಚುವೆಚ್ಚ  ತಿಂಗಳಿಗೆ 10000 ವಾದರೆ, ಒಂದು ಮನೆಯಲ್ಲಿ ಕನಿಷ್ಠ  ಮೂರು ಜನ ವಿದ್ದಲ್ಲಿ ತಿಂಗಳಿಗೆ ಸರಾಸರಿ  25000 ವಾದರೂ ಬೇಕಾಗುತ್ತದೆ. ಒಂದು ವೇಳೆ ಮನೆಯಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ ಜನರಿದ್ದಲ್ಲಿ ಸರಾಸರಿ 30ರಿಂದ 35 ಸಾವಿರ ತಿಂಗಳು ಖರ್ಚು ಬೇಕಾಗುತ್ತದೆ. ಇದು ಸಾಮಾನ್ಯ ಜನರ ಲೆಕ್ಕಾಚಾರ. ಬರೇ ಎಂಟರಿಂದ 10 ಸಾವಿರ ದುಡಿದು 35000 ವೆಚ್ಚವನ್ನು ಭರಿಸಲು ಕಷ್ಟಪಡುವ  ಸಾಮಾನ್ಯ ಜನರ ಸ್ಥಿತಿ ತುಂಬಾ ಶೋಚನೀಯ.

         ಹೇಗಾದರೂ ಮಾಡಿ ಬದುಕಬೇಕೆಂಬ ಛಲದಿಂದ,   ಆದಷ್ಟು ಹೊಂದಾಣಿಕೆಯನ್ನು ಮಾಡಿ ಜೀವಿಸಲು ಪ್ರಯತ್ನಿಸುತ್ತಿರುತ್ತಾರೆ,  ಆಕಡೆ ಬದುಕಲಾಗದೆ, ದಿನದಿಂದ ದಿನಕ್ಕೆ ವಿಪರೀತ ಸಾಲವನ್ನು ಮಾಡುತ್ತ, ಕೊನೆಗಾಲಕ್ಕೆ ತನ್ನ ಸಂಪಾದನೆಗಿಂತ ನಾಲ್ಕು ಪಟ್ಟು ಹೆಚ್ಚಿನ ಸಾಲ ತೀರಿಸಲಾಗದ ಸ್ಥಿತಿಗೆ ತಲುಪುವ ಸಂದರ್ಭಗಳು ಅತಿಯಾಗಿ ಬಿಡುತ್ತದೆ. ಪ್ರಾಮಾಣಿಕತೆಯನ್ನು  ಮರೆತಿರುವ ಜನಗಳು  ಹೆಚ್ಚಾದ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಪೈಪೋಟಿಯ ರೀತಿಯಲ್ಲಿ ಅಮಾಯಕ ಜನರನ್ನು ಒಂದಲ್ಲ ಒಂದು ರೀತಿಯಲ್ಲಿ ಲೂಟಿಯನ್ನು ಮಾಡುತ್ತಾ  ತನ್ನ ಜೇಬು ತುಂಬಿಸಿಕೊಂಡು ಐಷಾರಾಮದ ಜೀವನ ಮಾಡುವ ಭ್ರಷ್ಟ ಅಧಿಕಾರಿಗಳು ಮತ್ತು  ಭ್ರಷ್ಟ ರಾಜಕೀಯ ನಾಯಕರು ಭಾರತದ ಅರ್ಥವ್ಯವಸ್ಥೆಗೆ ಬಹಳ ದೊಡ್ಡ ಸಮಸ್ಯೆಯಾಗಿರುತ್ತಾರೆ. ಇಂತವರನ್ನು ಮಟ್ಟ ಹಾಕಲು ಪ್ರತಿಯೊಬ್ಬ ಭಾರತೀಯನು ಪ್ರಯತ್ನಮಾಡಬೇಕು. ಅನಧಿಕೃತವಾಗಿ ಗಳಿಸುವ ಕಪ್ಪು ಹಣ, ಹಣದುಬ್ಬರಕ್ಕೆ ಬಹಳ ದೊಡ್ಡ ಕಾರಣ, ಹಣವಂತರೇ ಹಣವನ್ನು  ಮಾಡುತ್ತ ಇನ್ನಿತರರನ್ನು ಹಣದ ಪ್ರಭಾವದಿಂದ ಆಳ್ವಿಕೆಗೆ ತೊಡಗಿಸಿಕೊಳ್ಳುತ್ತಾರೆ. ಸಮಾಜಘಾತುಕ ಶಕ್ತಿ ಹೆಚ್ಚಿಸಲು ನೇರವಾಗಿ ಕಾರಣರಾಗುತ್ತಾರೆ.

             ಭಾರತೀಯರಿಗೆ  ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತೈದು ವರ್ಷ ಕಳೆದರೂ ಪಾರದರ್ಶಕತೆಯ ಆಡಳಿತ ಇನ್ನೂ ದಕ್ಕಿಲ್ಲ , ಈವರೆಗೆ ಅಧಿಕಾರವಹಿಸಿಕೊಂಡ  ಪಕ್ಷಗಳು  ಪಾರದರ್ಶಕತೆಯ ಆಡಳಿತವನ್ನು ತರುವಲ್ಲಿ ಹಿಂದೇಟು ಹಾಕುತ್ತಿದೆ, ಏಕೆಂದರೆ ಪಾರದರ್ಶಕತೆ ಬಂದರೆ ಭ್ರಷ್ಟರ ಆಟಗಳು ನಡೆಯುವುದಿಲ್ಲ, ಭ್ರಷ್ಟ  ಅಧಿಕಾರಿಗಳಿಗೆ   ಹಣ ಮಾಡಲು ಕಷ್ಟವಾಗುತ್ತದೆ, ಸಮಾಜಘಾತಕ ಚಟುವಟಿಕೆಗಳನ್ನು ಮಾಡಲು ಸಾಧ್ಯವಿಲ್ಲ, ಎಲ್ಲಿಯತನಕ ಅವಿದ್ಯಾವಂತರು ಮತ್ತು ಬಡವರು ಇರುತ್ತಾರೆಯೋ ಅಲ್ಲಿಯತನಕ  ಆಟಗಳು ನಡೆಯುತ್ತಲೇ ಇರುತ್ತದೆ. ಇಂದಿಗೂ ಲ್ಯಾಂಡ್ಮಾ ಫಿಯಾ, ಡ್ರಗ್ಸ್ ಮಾಫಿಯಾ, ಮಕ್ಕಳ ಕಳ್ಳತನ, ಮಾನವ ಕಳ್ಳಸಾಗಣೆ, ಎಲ್ಲವೂ ನಡೆಯುತ್ತಲೇ ಇದೆ. ಇದನ್ನೆಲ್ಲವನ್ನು  ಪ್ರಶ್ನಿಸಲು ಹೋರಾಟ ಮಾಡಲು ಇಳಿಯುವ ಜನರನ್ನು ಸದ್ದಿಲ್ಲದೆ ನಾಶಮಾಡುವ ಉದಾರಣೆಗಳು ಇರಬಹುದು.

           ಬಡಮಕ್ಕಳಿಗೆ ಕನಿಷ್ಠ ಪ್ರೌಢ ಶಾಲೆಯವರೆಗೂ ಉಚಿತ ಶಿಕ್ಷಣ ಸಿಗುವಂತಾಗಲಿ, ಸರ್ಕಾರಿ ಕಛೇರಿಗಳು ಲಂಚ ಮುಕ್ತವಾಗಿ ಕಾರ್ಯ ನಿರ್ವಹಿಸಲಿ, ಹಿರಿಯ ನಾಗರಿಕರಿಗೆ ಯಾವುದೇ ಕಾಯಿಲೆ ಬಂದರೂ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ದಿಷ್ಟ -ಕಡಿಮೆ ಮೊತ್ತದ ಬೆಲೆ ನಿಗದಿಪಡಿಸಿ, ಸಹಾಯವಾಗುವಂತೆ ಆಗಲಿ. ಇನ್ನಿತರ ದೇಶಗಳಲ್ಲಿರಿರುವಂತೆ ನಮ್ಮ ದೇಶವೂ ಮುಂದುವರಿದ ದೇಶವಾಗಿ ಹೊರಹೊಮ್ಮಲಿ.

      TPI - THE PASSION OF INDIA (R) ಸದೃಢ ಭಾರತ ಮತ್ತು ಉತ್ತಮ ಗುಣಮಟ್ಟದ ಪ್ರಜೆಗಳೊಂದಿಗೆ ಪ್ರಪಂಚಕ್ಕೆ ಮಾದರಿಯಾಗಿ ಬೆಳೆಯುವ ಕನಸಿನೊಂದಿಗೆ.

                  ✍️Madhav. K. Anjar 











            

          















          







Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ