(ಲೇಖನ -68)ಸಂಸಾರವೆಂದ ಕೂಡಲೇ , ನನ್ನ ಮನದಲ್ಲಿ ಸಾವಿರಾರು ವ್ಯಾಖ್ಯಾನ, ಮೂಡಿಬರತೊಡಗಿತು

✍️Madhav. K. Anjar 

(ಲೇಖನ -68) ದಿನಚರಿ, ಎಂದಿನಂತೆ  ಬೆಳಗೆದ್ದು  ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿ, ದುಡಿಮೆಗಾಗಿ ಮನೆಯಿಂದ ಹೊರಟ ನನ್ನೊಂದಿಗೆ ಮಲಯಾಳಿ ಸಂಗಡಿಗ, ಆತನ ಕೆಲಸ ಚಿಕ್ಕದಾದರೂ, ಚೊಕ್ಕ ಮತ್ತು ಪ್ರಾಮಾಣಿಕತೆಯಿಂದ ಬದುಕುವ ವ್ಯಕ್ತಿಯೊಂದಿಗೆ.....ಇವತ್ತು ಯಾವುದರ ಬಗ್ಗೆ ಲೇಖನ ಬರೆಯುವುದು ತಿಳಿಯುತ್ತಿಲ್ಲವೆಂದು ಹೇಳಿದಾಗ, ಸರ್ ನೀವು ಇವತ್ತು ಸಂಸಾರದ ಬಗ್ಗೆ ಬರೆಯಿರಿ ಅಂದುಬಿಟ್ಟರು.....



          ಸಂಸಾರವೆಂದ ಕೂಡಲೇ , ನನ್ನ ಮನದಲ್ಲಿ ಸಾವಿರಾರು ವ್ಯಾಖ್ಯಾನ, ಮೂಡಿಬರತೊಡಗಿತು, ಇಲ್ಲಿ ಅಕ್ಷರ ರೂಪದಲ್ಲಿ ನಿಮ್ಮ ಮುಂದಿಡುತಿದ್ದೇನೆ. ಕೆಲವರ ಸಂಸಾರ ಆನಂದ ಸಾಗರ, ಹಲವರ ಸಂಸಾರ ಸಮಸ್ಯೆಗಳ ಆಗರ, ಇನ್ನು ಕೆಲವರ ಸಂಸಾರ ನಗು, ಪ್ರೀತಿ, ಕಷ್ಟ ಸುಖವನ್ನು ಸಮಾನ ರೀತಿಯಲ್ಲಿ ನೋಡುವುದು, ಇನ್ನು ಕೆಲವರು ಏನಾದರಾಗಲಿ ಎಂಜಾಯ್ ಮಾಡಬೇಕೆಂದು ಹಾಸಿಗೆಗೆಗಿಂತ ಜಾಸ್ತಿ ಕಾಲು ಚಾಚಿ ಅತ್ಯಂತ ಕನಿಷ್ಠ ಗುಣಮಟ್ಟದಲ್ಲಿ ಇನ್ನೊಬ್ಬರಿಗೆ ಭಾರವಾಗಿ ಬದುಕುವುದು.

         ಅಂದಿನ ಕಾಲದಲ್ಲಿ ಸುಮಾರು ಮೂರ್ನಾಲ್ಕು ತಲೆಮಾರಿನ  ಕುಟುಂಬದ ಸದಸ್ಯರೆಲ್ಲರೂ ಒಂದೇ ಮನೆಯಲ್ಲಿ  ವಾಸಮಾಡುತ್ತಿದ್ದರು, ಮನೆಗೊಬ್ಬ ಹಿರಿಯ ವ್ಯಕ್ತಿ, ಯಜಮಾನ ನಾಗಿ ಮನೆ ಪತಿ ಸದಸ್ಯರ ಆಗುಹೋಗುಗಳನ್ನು ನೋಡಿಕೊಳ್ಳುತ್ತಾ, ಹಬ್ಬ-ಹರಿದಿನಗಳನ್ನು  ಚಿಕ್ಕ ಮಕ್ಕಳಿಂದ ಹಿಡಿದು  ಮನೆಯ ಹಿರಿಯ ಸದಸ್ಯರು ತುಂಬಾ ಸಂತೋಷದಿಂದ  ಮಾಡಿಕೊಳ್ಳುತ್ತಿದ್ದರು. ಗಂಡ-ಹೆಂಡತಿಯ ಸಮಸ್ಯೆ, ಅಣ್ಣ ತಮ್ಮನ ಸಮಸ್ಯೆ, ಇಂಡಿ ಮಕ್ಕಳ ಸಮಸ್ಯೆಗಳು ಎದುರಾದಾಗ  ಮನೆಯವರೆಲ್ಲರೂ ಸೇರಿ ಪರಿಹಾರ ಕಂಡುಕೊಳ್ಳುವ ಕಾರ್ಯಕ್ರಮವಿತ್ತು. ಬರಬರುತ್ತಾ ಹಲವಾರು ಕಾರಣಗಳಿಂದ ಕೂಡುಕುಟುಂಬದ ಪದ್ಧತಿಗಳು ಮಾಸಿ ಹೋಗಿದೆ. ಮನೆಯ ಪ್ರತಿ ಸದಸ್ಯ ಬೆಳೆದು ನಿಂತ ಮೇಲೆ ವಿದ್ಯಾಭ್ಯಾಸವನ್ನು ಗಳಿಸಿಕೊಂಡು ಪರವೂರು ಹಾಗೂ ದೇಶ-ವಿದೇಶಗಳಲ್ಲಿ ಸೇರಿಬಿಟ್ಟರು.

         ದಿನದಿಂದ ದಿನಕ್ಕೆ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳು ಅರಿವಿಗೆ ಬರುವುದಕ್ಕೂ ಮುನ್ನ  ಮನೆಯನ್ನು ಸೇರಿ, ಸಂಕುಚಿತ ಮನೋಭಾವದ ವ್ಯಕ್ತಿಗಳನ್ನು ಹುಟ್ಟುಹಾಕುವಲ್ಲಿ ನಾವೆಲ್ಲರೂ ಬಿದ್ದಾಗಿದೆ. ಇಂದಿನ ಜನಾಂಗದ  ಪ್ರತಿಯೊಬ್ಬರಿಗೂ  ಐಶ್ವರ್ಯ ಮತ್ತು ಪ್ರಯತ್ನವಿಲ್ಲದೆಯೇ ಸಿಗುವ  ಸಂಪತ್ತಿಗಾಗಿ ಕಾಯುತ್ತಿರುವ ಯುವಪೀಳಿಗೆ! ಒಂದು ಕಡೆ, ಹಣಕ್ಕಾಗಿ  ಗಂಡನನ್ನೇ ಬಿಡುವ ಮಟ್ಟಿಗೆ  ತಲುಪುತ್ತಿರುವ ಇಂದಿನ ಪೀಳಿಗೆ, ಇನ್ನೊಂದು ಕಡೆ ಬೇಕಾದಷ್ಟು ಹಣ ಅಂತಸ್ತು ಆಸ್ತಿ ಎಲ್ಲವೂ ಇದ್ದರೂ, ತೃಪ್ತಿಯಾಗಿಲ್ಲ ಎಂಬ ಕಾರಣಕ್ಕೆ ಅಡ್ಡದಾರಿ ಹಿಡಿಯುವ ಅದೆಷ್ಟು  ಜನರಲ್ಲವೇ?

          ಕುಟುಂಬಗಳು  ಚಿಕ್ಕದಾಗಿವೆ, ಮನಸುಗಳು  ಚಿಕ್ಕದಾಗಿವೆ, ಹೃದಯಗಳು  ಚಿಕ್ಕದಾಗಿವೆ, ಸತ್ಯ ನ್ಯಾಯ ನೀತಿ ಎಲ್ಲವೂ  ಗಾಳಿಯಲ್ಲಿ ತೂರಿ ಹೋಗುತ್ತಿವೆ, ಇಂದಿನ ಸಮಾಜದ ಹೆಚ್ಚಿನ ಜನರು ವಿಪರೀತವಾದ ಆಸೆಗಳಿಗೆ ಒಳಗಾಗಿ, ಮಾಡಬಾರದ್ದನ್ನು  ಮಾಡುತ್ತಿರುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಎಲ್ಲರ ಜೀವನದ ಸಮಯವು ಕಿರಿದಾಗುತ್ತಿದೆ, ಎಲ್ಲರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಂಪಾದನೆಯ ಉದ್ದೇಶದಿಂದ ದೂರ ದೇಶಗಳಲ್ಲಿರುವ ಜನರ ಸ್ಥಿತಿಯಂತೂ ಊಹಿಸಲಸಾಧ್ಯ, ದೂರದೂರಿನ ಸಂಪಾದನೆ  ಸುಲಭವಾಗಿ ಕಂಡರೂ, ತನ್ನ ಊರಿನ ಸಂಪಾದನೆ ಕಡಿಮೆಯೆಂದು ಕಾಣುವುದು ಸಹಜ. ಇಂದಿನ ಕಾಲದಲ್ಲಿ  ಕೃಷಿಯನ್ನು ಮಾಡಿ ಜೀವಿಸುವ ಕುಟುಂಬಗಳು  ಬಹಳಷ್ಟು ವಿರಳವಾಗಿದೆ, ಪ್ರತಿಮನೆಯಲ್ಲೂ  ಇಂಜಿನಿಯರು, ಡಾಕ್ಟರು, ಪೈಲೆಟ್, ಐಎಎಸ್ ಐಪಿಎಸ್, ಬೇಕೆನ್ನೋ  ಆಸೆಗಳು ಹೆಚ್ಚಾಗುತ್ತಾ ಇದೆ.

             ಸಂಸಾರಗಳು  ಚಿಕ್ಕದಾಗುತ್ತಿದ್ದಂತೆ ನಂಬಿಕೆ, ಪ್ರೀತಿ, ಎಲ್ಲವೂ ಚಿಕ್ಕದಾಗಿ ಬಿಟ್ಟಿದೆ, ಹೆಂಡತಿಗೆ  ಗಂಡ ಭಾರವಾಗುತ್ತಿದ್ದಾನೆ, ಗಂಡನಿಗೆ ಹೆಂಡತಿ ಭಾರವಾಗುತ್ತಿದ್ದಾಳೆ, ಮಕ್ಕಳಿಗೆ ತಂದೆ-ತಾಯಿ ಭಾರವಾಗುತ್ತಿದ್ದಾರೆ, ಸೊಸೆಗೆ  ಅತ್ತೆ ಭಾರವಾಗುತ್ತಿದ್ದಾಳೆ, ಅತ್ತೆಗೆ ಸೊಸೆ ಬೇಡವಾಗಿದ್ದಾರೆ. ಎಲ್ಲರಿಗೂ ತನ್ನ ಕೈ ಕಾಲುಗಳು ಸರಿಯಾಗಿ ಕೆಲಸ ಮಾಡುತ್ತಿರುವವರೆಗೆ ಎಲ್ಲರೂ ಬೇಡವೆಂದು ಕಾಣುವುದು ಸಹಜ, ದುರದೃಷ್ಟವಶಾತ್  ದೊಡ್ಡ ಸಮಸ್ಯೆಗಳು ಎದುರಾದಾಗ ಮನೆಯ ಪ್ರತೀ ಸದಸ್ಯರು ನೆನಪಾಗುವುದು ಸಹಜ. ಏನಿದ್ದರೂ  ಒಂದಲ್ಲ ಒಂದು ದಿನ ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆಗೆ ಉದಾಹರಣೆಯಾಗಿ ಬಿಡುವುದು ಸಹಜ.

            The Passion Of India (R) ತಮಗೆಲ್ಲರಿಗೂ ಉತ್ತಮ ಮನೆತನ ಕುಟುಂಬ, ತಂದೆ ತಾಯಿ ಹೆಂಡತಿ ಮಕ್ಕಳು, ಅಣ್ಣತಮ್ಮಂದಿರು, ಅಕ್ಕ ತಂಗಿಯರು, ಅಜ್ಜ-ಅಜ್ಜಿ, ಮಾವ ಸೋದರತ್ತೆ, ಸೋದರಮಾವ, ಮಾಮಿ, ಅಳಿಯ ಹಾಗೆಯೇ  ಎಲ್ಲಾ ಸಂಬಂಧಗಳು  ತಮ್ಮ ಕುಟುಂಬದಲ್ಲಿ ಗಟ್ಟಿಯಾಗಿರಲಿ ಎಂಬ ಹಾರೈಕೆಯೊಂದಿಗೆ.

    🙏









Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.