ನಿನ್ನ ಸನ್ನೆ

ಮುಗ್ದ ಮೊಗದೊಳು
ಆ ನಿನ್ನ ಸನ್ನೆಯು
ಮಿಂಚಾಗಿ ಸೇರಿತೇನ್ನ
ಹೃದಯದಾಳದೊಳು,
ಆ ನಿನ್ನ ಕೆನ್ನೆಗೆ
ಮುತ್ತಿಡಲೇ ನಾನು
ಕಣ್ಣಿನ ನೋಟಕೆ
ಸೋತೆನು ಇನ್ನೇನು?

ನಿನ್ನ ನಗುವಿಗೆ
ಚಿಂತೆಯು ಮರೆಯಾಯ್ತು
ಮಗುವಿನಂತೆ ನಿನ್ನ
ಮುದ್ದಾಡಲೇ ನಾನು
ಬಾ ಎನ್ನ ಹತ್ತಿರ
ರಾಣಿಯೇ ನೀನು
ಉಸಿರಾಗಿ ಸೇರೆನ್ನ
ಹೃದಯದ ಗೂಡಿನೋಳು.

       - Madhav. k. Anjar






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ