(ಲೇಖನ -59)ನಾವು ಭಾರತೀಯರು, ಇಂದು ಭಾರತೀಯರಾಗಿ ಉಳಿದಿದ್ದೇವೆ ಎಂದರೆ, ನಮ್ಮ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಜೀವ ಜೀವನವನ್ನು ಪಣವಿಟ್ಟು ನಮ್ಮ ದೇಶವನ್ನು ಉಳಿಸಿ ನಮ್ಮ ಕೈಗೆ ಕೊಟ್ಟುಬಿಟ್ಟಿದ್ದಾರೆ

(ಲೇಖನ -59)ನಾವು ಭಾರತೀಯರು, ಇಂದು ಭಾರತೀಯರಾಗಿ ಉಳಿದಿದ್ದೇವೆ ಎಂದರೆ, ನಮ್ಮ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಜೀವ ಜೀವನವನ್ನು ಪಣವಿಟ್ಟು ನಮ್ಮ ದೇಶವನ್ನು ಉಳಿಸಿ ನಮ್ಮ ಕೈಗೆ ಕೊಟ್ಟುಬಿಟ್ಟಿದ್ದಾರೆ. ಭಾರತವೆಂದರೆ ಸೌಭಾಗ್ಯ, ಭಾರತವೆಂದರೆ ಮೌಲ್ಯ, ಭಾರತವೆಂದರೆ ಪ್ರೀತಿ, ಭಾರತವೆಂದರೆ ಹೆಮ್ಮೆ. ಪ್ರತಿಯೊಬ್ಬ ನೈಜ ಭಾರತೀಯ ನಾನೊಬ್ಬ ಭಾರತೀಯನೆಂದು ಧೈರ್ಯವಾಗಿ ಹೇಳುತ್ತಾನೆ. ನಮ್ಮ ದೇಶದಲ್ಲಿ ಹಲವು ಜಾತಿ ಧರ್ಮ, ಮತ ಪಂಗಡಗಳು, ಹಲವಾರು ಭಾಷೆಗಳು, ಸಂಸ್ಕೃತಿ, ಸಂಸ್ಕಾರಗಳಿದ್ದಾವೆ. ಪ್ರಪಂಚದ ಎಲ್ಲಾ ದೇಶಗಳಿಗೆ ಭಾರತದ ಬಗ್ಗೆ ವಿಶ್ವಾಸ, ಪ್ರೀತಿ ಅಚ್ಚಳಿಯದೆ ಉಳಿದಿದೆ. ಅದಕ್ಕೆ ಕಾರಣ ಭಾರತೀಯರಲ್ಲಿ ಇರುವ ಗೌರವ ಮನೋಭಾವನೆ, ಸೇವಾ ಮನೋಭಾವನೆ, ಪ್ರೀತಿ ಮುಂತಾದವು. ಸಂಸ್ಕಾರವೆಂಬುದು ಭಾರತೀಯರಲ್ಲಿ ಕಲಿಯಬೇಕು, ಬುದ್ದಿವಂತಿಕೆ, ಮತ್ತು ಯಾವುದೇ ಕಠಿಣ ಸಂಧರ್ಭದಲ್ಲಿ ಮೇಲೆದ್ದು ಬರುವ ದೇಶವೆಂದರೆ ಅದು ಭಾರತ ಮಾತ್ರ. ಈ ವಿಷಯಗಳು ಪ್ರಪಂಚದ ಮೂಲೆ ಮೊಲೆಗೂ ತಿಳಿದಿದೆ. ಹಾಗಾಗಿ ಹೆಚ್ಚಿನ ದೇಶಗಳು ಭಾರತದ ತಂಟೆಗೆ ಬರುವುದಿಲ್ಲ. ನಮ್ಮ ದೇಶದೊಳಗೆ ಕುಳಿತು ದೇಶದ ಬಗ್ಗೆ ಬಿನ್ನಾಭಿಪ್ರಾಯ ಸೃಷ್ಟಿಸುವ ಕೆಲವು ಜನರನ್ನು ಹೊರತುಪಡಿಸಿ ಭಾರತೀಯತೆಯ ಘನತೆಯನ್ನು ನಾಶಪಡಿಸಲು ಯಾರಿಗೂ ಸಾಧ್ಯವಿಲ್ಲ, ಇಂದು, ಮುಂದೆ ಕೂಡ. ಬ್ರಿಟಿಷರು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದು ಭಾರತವನ್ನು ತನ್ನ ಹಿಡಿತದಲ್ಲಿ ಇಡಲು ಶ್ರಮಿಸಿದರು, ಭಾರತದ ಮುಗ್ದ ಜನರನ್ನು ತುಳಿದು, ಕೊಂದು, ತನ್ನ ವಿಕೃತಿ ಮೆರೆದರು, ಭಾರತವೆಂಬ ಸಂಪತ್ತಿನ ರಾಷ್ಟ್ರವನ್ನು ದೋಚಿದರು, ಭಾರತೀಯರ ಸಂಸ್ಕೃತಿ, ಜನರ ಮೇಲೆ ಸವಾರಿ ಮಾಡಿದರು, ಮನೆ, ಮಠ, ಜಾತಿ ಧರ್ಮವೆನ್ನದೆ ಸಾಲು ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಸಾಯಿಸಿದರು. ಇದೆಲ್ಲಾ ಇಂದು ಇತಿಹಾಸವೆಂದು ಹೇಳಿದರೂ, ಆ ದಿನಗಳಲ್ಲಿ ನಮ್ಮ ದೇಶವನ್ನು ಹಿಂಪಡೆಯಲು ಸಾಲು ಸಾಲಾಗಿ, ಜೀವತೆತ್ತ ವೀರ, ಶೂರರು ಲೆಕ್ಕವಿಲ್ಲದಷ್ಟು. ಇಂದು ಇತಿಹಾಸ ಹೇಳಿಕೊಡುವವರು ಇಲ್ಲ, ಭಾರತೀಯತೆ ಅಂದರೇನು, ದೇಶ ಪ್ರೇಮವೇನು?ಸ್ವಾತಂತ್ರ್ಯ ಹೇಗೆ ಬಂತು, ಸ್ವಾತಂತ್ರ್ಯ ಕಿಚ್ಚು, ಪ್ರಯತ್ನ, ರಾಷ್ಟ್ರೀಯತೆ ಇದೆಲ್ಲಾ ಪುಸ್ತಕಕ್ಕೆ ಸೀಮಿತವಾಗಿದೆ.


          ಇಂದಿನ ದಿನಗಳಲ್ಲಿ ನಾವೆಷ್ಟು ನಮ್ಮ ಮಕ್ಕಳಿಗೆ ದೇಶ ಪ್ರೇಮವನ್ನು ಹೇಳಿಕೊಡುತಿದ್ದೇವೆ? ದೇಶವೆಂದರೇನು, ನಮ್ಮ ದೇಶದ ಸಂಸ್ಕೃತಿ ಏನು, ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಜನರೆಲ್ಲಾ ಯಾರು? ಎಷ್ಟು ಜನ ವೀರ ಶೂರರು ಇದ್ದರು, ಅವರ ಹೆಂಡತಿ ಮಕ್ಕಳನ್ನು ಕೂಡ ನೋಡಿಕೊಳ್ಳದೆ ದೇಶದ ಹಿತಕ್ಕಾಗಿ ಹೇಗೆ ಬದುಕಿ ಕೊನೆಯುಸಿರೆಳೆದರು ಇವೆಲ್ಲಾ ಇಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸವನ್ನು ಬಹಳ ಅಲ್ಪ ಜನರು ಮಾಡುತ್ತಿದ್ದಾರೆ. ಮಾತೆತ್ತಿದರೆ ನನ್ನ ಮಕ್ಕಳು ಅಮೇರಿಕದಲ್ಲಿದ್ದಾನೆ, ಜೇರ್ಮನಿ ಯಲ್ಲಿದ್ದಾನೆ, ಲಂಡನ್ ನಲ್ಲಿದ್ದಾನೆ ಅನ್ನುವ ಮಾತುಗಳು ಬಹಳಷ್ಟು ಕೇಳಿಬರುತ್ತವೆ. ತಪ್ಪಲ್ಲ, ಓದು ಬರಹ ಕಲಿತು ಉದ್ಯೋಗಕ್ಕಾಗಿ ಹೋದರೆ, ದೇಶವನ್ನು ಮರೆಯುವ ಸ್ಥಿತಿಗೆ ತಲುಪಿರುವ ಇಂದಿನ ಜನಾಂಗ. ನಮಗ್ಯಾಕೆ ಬೇಕು ದೇಶ, ನಮ್ಮ ದೇಶದ ವ್ಯವಸ್ಥೆ, ರಾಜಕೀಯ ವ್ಯಕ್ತಿಗಳು ಸರಿಯಿಲ್ಲ ಎಂಬ ಕಾರಣ ಹೇಳಿ ಇನ್ನೊಂದು ದೇಶಕ್ಕೆ ಲಗ್ಗೆಇಡುವ ಹೆಚ್ಚಿನ ಜನರು ಇಂದಿನ ದಿನದಲ್ಲಿ ಹೆಚ್ಚಾಗಿದ್ದಾರೆ. ಕಾರಣ ಹತ್ತು ಹಲವು, ಬ್ರಿಟಿಷರಿದ್ದ ಕಾಲದಲ್ಲಿ ಅವರನ್ನು  ನಮ್ಮ ನೆಲದಿಂದ ಓಡಿಸಿ ಮುಂದಿನ ಪೀಳಿಗೆಯ ಜನರಿಗೆ ಭಾರತಾಂಬೆಯ ಸೇವೆ ಮಾಡುವಂತೆ ಅನುವು ಮಾಡಿಕೊಟ್ಟು ವೀರ ಮರಣವನಪ್ಪಿದ್ದಾರೆ. ನಾವೆಲ್ಲರೂ ಒಂದಾಗಿ ಭಾರತೀಯತೆಯನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸಬೇಕು. ಭಾರತೀಯರು ನೀತಿವಂತರು, ಬುದ್ದಿವಂತರು, ವಿವೇಕವುಳ್ಳವರು, ಮೌಲ್ಯಗಳನ್ನು ಹೊಂದಿರುವ ಜನರೆಂದು ಪ್ರಪಂಚ ಒಪ್ಪುವಂತೆ ಬದುಕಬೇಕು.
     ಪ್ರತೀ ವರುಷ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಹಬ್ಬಕಿಂತಲೂ ಜಾಸ್ತಿಯಾಗಿ ಖುಷಿಯಾಗಿ ಆಚರಣೆ ಮಾಡಬೇಕು, ತಮ್ಮ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮನದಟ್ಟು ಮಾಡಿಸಬೇಕು. ಪ್ರಪಂಚದ ಯಾವುದೇ ದೇಶಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿರುವಷ್ಟು ಸ್ವಾತಂತ್ರ್ಯ ಇನ್ಯಾವ ದೇಶದಲ್ಲೂ ಇಲ್ಲ, ಆದರೆ ಆ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿ ಸಾರ್ವಜನಿಕರಿಗೆ ಭಯ ಹುಟ್ಟಿಸಿ ಸಾಮಾನ್ಯ ಜನರ ಸ್ವಾತಂತ್ರ್ಯ ಕಸಿದುಕೊಳ್ಳುವ ಘಟನೆಗಳು ತುಂಬಾನೆ ನಡೀತಾ ಇದೆ.
         ರಾಜಕೀಯ ಜನರು, ನ್ಯಾಯಾಂಗ, ಕಾರ್ಯಂಗ, ಶಾಸಕಾಂಗದ ಕಾರ್ಯಕ್ಕೆ ಮೂಗುತೂರಿಸಿ ವ್ಯವಸ್ಥೆಯನ್ನು ಹಾಳುಮಾಡುವ ಕೆಲಸಕ್ಕೆ ಕೈ ಹಾಕದೆ, ಪಾರದರ್ಶಕ ವ್ಯವಸ್ಥೆಗೆ ಬಲವಾಗಿ ನಿಂತು, ದೇಶವನ್ನು ಇನ್ನಷ್ಟು ಮೇಲಕ್ಕೆತ್ತಲು ಪರಿಶ್ರಮ ಮಾಡಬೇಕು. ಬರುವ ಆಗಸ್ಟ್ 15 ರಂದು, ನಿಮ್ಮ ಮನೆಯಲ್ಲಿ, ಶಾಲೆ, ಸಂಘ, ಗ್ರಾಮ, ಎಲ್ಲೆಂದರಲ್ಲಿ  ರಾಷ್ಟ್ರಗೀತೆ ಮೊಳಗಲಿ. ಮರಿಮಕ್ಕಳಿಂದ ಹಿಡಿದು ಮನೆಯ ಪ್ರತೀ ಸದಸ್ಯರು ರಾಷ್ಟಗೀತೆಯನ್ನು ಜೋರಾಗಿ ಹೇಳಿ, ದೇಶಕ್ಕಾಗಿ ತ್ಯಾಗವನ್ನು ಮಾಡಿದ ಪ್ರತೀ ಜನರಿಗೆ ಗೌರವವನ್ನು ಕೊಟ್ಟು, ಭಾರತಾಂಬೆಯ ಮಡಿಲಿಗೆ ಹೂವನ್ನು ಹಾಕಿ, ಭಾರತದ ಬಾವುಟವನ್ನು ಹೆಮ್ಮೆಯಿಂದ ಹಾರಿಸಿ, ಜಯಘೋಷದೊಂದಿಗೆ ಆಚರಿಸಿ. ಭಾರತೀಯರ ಧ್ವನಿ ಪ್ರಪಂಚಕ್ಕೆ ಕೇಳಿಬಿಡಲಿ. ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಸಮಾನರು, ನಾವೆಲ್ಲರೂ ಒಂದೇ ಎಂಬುದನು ಸಾಬೀತುಪಡಿಸೋಣ.

ವಂದೇ ಮಾತರಂ : ಭಾರತ್ ಮಾತ ಕಿ ಜೈ :

            ✍️ಮಾಧವ ಅಂಜಾರು 



























Comments

  1. ಒಳ್ಳೆಯ ಹಾಗೂ ಅರ್ಥಗರ್ಭೀತವಾದ ಲೇಖನ, ಶುಭವಾಗಲಿ💐💐💐

    ReplyDelete

Post a Comment

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ