(ಲೇಖನ -74)ಬಿಲ್ಲವ ಸಂಘ, ಕುವೈಟ್ ದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ, ಬೈರಾಸ್ ಭಾಸ್ಕರೆ ಎಂಬ ನಾಟಕವನ್ನು ಪ್ರದರ್ಶನವನ್ನು ಮಾಡಿ,


 ಬಿಲ್ಲವ ಸಂಘ,  ಕುವೈಟ್ ದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ, ಬೈರಾಸ್ ಭಾಸ್ಕರೆ ಎಂಬ ನಾಟಕವನ್ನು ಪ್ರದರ್ಶನವನ್ನು ಮಾಡಿ, ಇಂದಿನ ದಿನಗಳಲ್ಲಿ ಹಣಕ್ಕೆ ಮತ್ತು ಗುಣಕ್ಕಿರುವ ಮೌಲ್ಯವನ್ನು ಸಾವಿರಾರು ಜನರಿಗೆ ತಿಳಿಯುವಂತೆ ಮಾಡಿರುವ ಆ ಕ್ಷಣಗಳು, ನಾನು ಬರೆಯಲೇ ಬೇಕೆಂಬ ಆಸಕ್ತಿಯೊಂದಿಗೆ!


     ಹಲವಾರು ನಾಟಕಗಳನ್ನು  ನನ್ನ ಜೀವನದಲ್ಲಿ ನೋಡಿರುತ್ತೇನೆ!, ಈ ಹಿಂದೆ ನಾಟಕವೆಂದಾಗ ಹೆಚ್ಚಿನವು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಾ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ಸೃಷ್ಟಿ ಮಾಡುತ್ತಿತ್ತು,  ಬರಬರುತ್ತಾ ಕೆಲವರ ನಾಟಕ ಬರವಣಿಗೆಗಳು ಅಶ್ಲೀಲ ಮತ್ತು ಅರ್ಥವಿಲ್ಲದ ಸ್ಥಿತಿಗೆ ತಲುಪಿ ಏನೇನೋ ಅವಾಂತರ ಸೃಷ್ಟಿಸಿ ಸಮಾಜವನ್ನು ಕೆಡಿಸುವ ಮಟ್ಟಿಗೆ ಇಳಿದಿದ್ದು ಇದೆ. ಇಂದಿನ ಮೊಬೈಲ್ ಮತ್ತು ಟಿವಿ ಮಾಧ್ಯಮದ ನಡುವೆ ಅಲ್ಲಲ್ಲಿ ಹಲವಾರು ಸಂಘಟನೆಗಳು ಮಾಡುವ ಒಳ್ಳೆಯ ವಿಚಾರಗಳು ಅಲ್ಪ ಜನರಿಗೆ ತಲುಪಿದರೂ, ನಾಟಕದ ಪ್ರತಿಯೊಂದು ದೃಶ್ಯಗಳು ಮನಮುಟ್ಟುವಂತೆ ಇರುತ್ತದೆ.

         ಬೈರಾಸ್ ಭಾಸ್ಕರ, ಮುಗ್ದ ಮನಸಿನ ವ್ಯಕ್ತಿ, ತನ್ನ ಅಣ್ಣನನ್ನು ಬೆಳೆಸಲು ಮತ್ತು ಸಮಾಜದಲ್ಲಿ ಉತ್ತಮವಾದ ವ್ಯಕ್ತಿಯನ್ನಾಗಿ ಮಾಡಲು ತನ್ನ ಜೀವನವನ್ನೇ ಮುಡಿಪಾಗಿಟ್ಟ, ಅಣ್ಣನಿಗೆ ಒಂದೊಳ್ಳೆಯ ಕೆಲಸ ಸಿಕ್ಕಿ ಶ್ರೀಮಂತನಾಗುತ್ತಾನೆ. ಅಣ್ಣ ತಮ್ಮನ ಬಾಂಧವ್ಯ ಉತ್ತಮವಾಗಿರುವ ಸಮಯದಲ್ಲಿ ಅತ್ತಿಗೆಯ ರೂಪದಲ್ಲಿ ಮನೆಗೆ ಸೇರಿ, ಆಸ್ತಿಗಾಗಿ ಸಂಸಾರದ ಸಂಬಂಧವನ್ನು ಹಾಳು ಮಾಡಿ, ಬಂಗಾರದ ಮನಸ್ಸಿನ ಭಾಸ್ಕರನಿಗೆ ಆರೋಪಗಳನ್ನು ಹೊರಿಸಿ, ಅಣ್ಣನಿಂದ ಬೆರ್ಪಡಿಸಿ, ಅನಾರೋಗ್ಯ ತಾಯಿಯೊಂದಿಗೆ ಮನೆಯಿಂದಾಚೆ ದೂಡಿ, ತಾಯಿ ರಸ್ತೆ ಬದಿಯಲ್ಲಿ ಸತ್ತು ಬಿದ್ದಾಗ, ತಾನು ಬೆಳೆಸಿದ ಅಣ್ಣನೇ ಸಹಾಯ ಮಾಡದೇ ಇದ್ದ ಕರುಣಾಜನಕ ಸ್ಥಿತಿ. ಕೊನೆಗೆ ತನಗರಿವಿಲ್ಲದೆ ಭಾಸ್ಕರನಿಗೆ ಬಂದು ಸೇರಿದ ಐಶ್ವರ್ಯ, ಆಗ ಅತ್ತಿಗೆಯ ಬಣ್ಣ ಬದಲಾಗುವ ಕ್ಷಣಗಳು.

       ಈ ನಾಟಕವು ಇಂದಿನ, ಹಿಂದಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ತುಂಬಾ ಅರ್ಥವಾಗುವಂತೆ ಬರೆದು ಪ್ರದರ್ಶನ ಮಾಡಿ  ಅಳುವಂತೆ ಮಾಡಿಬಿಟ್ಟಿತು. ಹಲವು ಬಾರಿ ಕಣ್ಣೋರಿಸಿದರು ಮತ್ತೆ ಮತ್ತೆ ಅತ್ತು ಬಿಡಬೇಕು ಅನ್ನುವಷ್ಟರಲ್ಲಿ ಕೊನೆಯ ಬೆಂಚು ಪ್ರೇಕ್ಷಕರ ಡೈಲಾಗ್ ಮತ್ತು ವೇದಿಕೆಯ ನಾಟಕಾರರ ನಗು ಚಟಾಕಿ ಮತ್ತೆ ನಗುವಂತೆ ಮಾಡಿಬಿಟ್ಟಿತು.

        ಏನಿದ್ದರೂ ಎಲ್ಲರೂ ಒಂದು ಬಾರಿ ನೋಡಲೇ ಬೇಕಾದ ನಾಟಕ, ಬೈರಾಸ್ ಭಾಸ್ಕರೆ. ಹಣವಿರುವವರಿಗೆ ಗುಣವಿಲ್ಲದೆ ಹೋದರೆ ಎಷ್ಟು ಬೆಲೆ, ಹಣವಿರದೆ ಗುಣಗಳು ಹೊಂದಿರುವವನಿಗೆ ಬರುವ ಭಾಗ್ಯ..... ವನ್ನು ತೋರಿಸಿದ ನಾಟಕ.

       ಬರೆದವರಿಗೂ, ಪ್ರತೀ ಕಲಾವಿದರಿಗೂ, ಶುಭವಾಗಲಿ ಬಿಲ್ಲವ ಸಂಘ ಕುವೈಟ್ ಇನ್ನಷ್ಟು ಒಳ್ಳೆಯ ಕಲಾ ವೇದಿಕೆ ಸೃಷ್ಟಿಸಲಿ.

      ✍️ಮಾಧವ ನಾಯ್ಕ್ ಅಂಜಾರು.















  



Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ