(ಲೇಖನ -62)- ಭಾರತೀಯ ಪ್ರಜೆಗಳಿಗೆ ಉಚಿತ ಶಿಕ್ಷಣ ಬೇಕೆಂದು ಹೇಳುವವರು ತೀರಾ ಬಡತನ ಉಳ್ಳವರು ಮತ್ತು ಮಧ್ಯಮ ವರ್ಗದ ಜನರು ಮಾತ್ರ

 (ಲೇಖನ -62)-  ಭಾರತೀಯ ಪ್ರಜೆಗಳಿಗೆ ಉಚಿತ ಶಿಕ್ಷಣ ಬೇಕೆಂದು ಹೇಳುವವರು ತೀರಾ ಬಡತನ ಉಳ್ಳವರು ಮತ್ತು ಮಧ್ಯಮ ವರ್ಗದ ಜನರು ಮಾತ್ರ, ಶಿಕ್ಷಣ ಎಂಬುವುದು ಎಲ್ಲಾ ಪ್ರಜೆಗಳಿಗೆ ಸಿಗಬೇಕು, ಉತ್ತಮವಾದ ಶಿಕ್ಷಣ ಪಡೆದುಕೊಂಡಿರುವ ಹೆಚ್ಚಿನ ಜನರು ಕೆಲಸ ಗಿಟ್ಟಿಸಿಕೊಳ್ಳದಿದ್ದರೂ, ಭಾರತದ ಉತ್ತಮ ಭವಿಷ್ಯಕ್ಕೆ ಅಡಿಪಾಯವಾಗಿ ಮಾರ್ಪಟ್ಟುಗೊಳ್ಳುತ್ತಾರೆ. ಶಿಕ್ಷಣವನ್ನು ಉಚಿತವಾಗಿ ಕೊಟ್ಟರೆ ಪ್ರಜೆಗಳು ಮೈಗಳ್ಳರಾಗುತ್ತಾರೆಂಬ ಮಾತುಗಳನ್ನು ಕೆಲವರು ಹೇಳಬಹುದು, ಆದರೆ ಅಂತಹ ಮಾತುಗಳು ವಿದ್ಯೆ ಇರುವವನ ಬಾಯಲ್ಲಿ ಬರಲು ಸಾಧ್ಯವಿಲ್ಲ! ವಿದ್ಯೆ ಎಂಬುವುದು ಮೇಲ್ಜಾತಿ, ಕೀಲ್ಜಾತಿ, ಮೇಲ್ವರ್ಗ, ಕೆಳವರ್ಗ, ವಿವಿಧ ಧರ್ಮ ದೇಶಗಳನ್ನು ಶಿಸ್ತುಬದ್ದವಾಗಿ ನಡೆಸಲು ಉಪಯೋಗವಾಗುವ ಅತ್ಯುತ್ತಮ ಸಾಧನ. ವಿದ್ಯೆಯಿಂದ ವಂಚಿತಗೊಂಡ ಪ್ರತೀ ಪ್ರಜೆ ಸಮಾಜದಲ್ಲಿ ನಡೆಯುವ ಪ್ರತೀ ದಬ್ಬಾಳಿಕೆ, ಅರಾಜಕತೆ, ಬೇಧ ಭಾವ ಮೋಸ, ವಂಚನೆಗಳನ್ನು ಪ್ರಶ್ನಿಸುವ, ಹೋರಾಟ ಮಾಡುವ ಶಕ್ತಿಯನ್ನು, ಧೈರ್ಯವನ್ನು ಕೊಡುವ ಬಹಳ ದೊಡ್ಡ ಬತ್ತಳಿಕೆ.



             ರಾಜಕೀಯ, ಕೆಲಸ, ದೇಶ ವಿದೇಶ,ಹಿತ ಚಿಂತನೆ, ಉತ್ಕೃಷ್ಟ ಮನೋಭಾವನೆ, ಇದೆಲ್ಲವನು ಪಡೆಯಬೇಕಾದರೆ ಶಿಕ್ಷಣ ಬಹಳ ಮಹತ್ತರವಾದ ಪಾತ್ರ ವಹಿಸಿಕೊಂಡಿರುತ್ತದೆ. ಯಾವ ದೇಶ ಅಥವಾ ಊರು ಶಿಕ್ಷಣದಲ್ಲಿ ಹಿಂದೆ ಉಳಿದಿರುತ್ತದೆಯೋ ಅಲ್ಲಿ ಅತೀ ಹೆಚ್ಚು ಸಮಸ್ಯೆಗಳು ಉದ್ಭವಿಸುತ್ತದೆ. ಸಮಾನ ರೀತಿಯಲ್ಲಿ ಜಾತಿ ಧರ್ಮ ಮತಗಳ ಬೇಧ ಭಾವಗಳಿಲ್ಲದ ಶಿಕ್ಷಣ ವ್ಯವಸ್ಥೆಯ ಅಗತ್ಯ ತುಂಬಾನೆ ಇದೆ. ಇಲ್ಲವಾದಲ್ಲಿ ಹಣವಿರುವವರು ತಮ್ಮ ಅಧಿಕಾರವನ್ನು ತೋರಿಸುತ್ತಾರೆ, ಹಣವಿರುವ ಜನರು ವಿದ್ಯೆ ಪಡೆದುಕೊಂಡು ವಿದ್ಯೆ ಇಲ್ಲದವರನ್ನು ಮೋಸ ಮಾಡಿ, ಇನ್ನಷ್ಟು ದುಡ್ಡಿನ ಕಂತೆ ಕಟ್ಟಿಕೊಳ್ಳುತ್ತಾರೆ. ಧಾರ್ಮಿಕ ಭಾವನೆಗಳನ್ನು ಮುಂದಿಟ್ಟು ಜನರನ್ನು ದಾರಿ ತಪ್ಪಿಸುವುದರಲ್ಲಿ ಅವಿದ್ಯಾವಂತರೆ ಜಾಸ್ತಿ ಆಗಿರುತ್ತಾರೆ. ಧಾರ್ಮಿಕ ಭಾವನೆಗಳನ್ನು ಉಪಯೋಗಿಸಿ ಕೆಳವರ್ಗದ ಜನರನ್ನು ತುಳಿಯಲು ವಿದ್ಯಾವಂತ ಮೇಲ್ವರ್ಗದ ಜನರೇ ಹೆಚ್ಚಾಗಿಬಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಥವಾ ಈ ಹಿಂದಿನ ದಿನಗಳಲ್ಲಿ ನಮ್ಮ ದೇಶವನ್ನು ಅಥವಾ ಊರನ್ನಾಳಿದ ಅದೆಷ್ಟು ಜನ ವಿದ್ಯಾವಂತರು ಇದ್ದರು ಎಂಬುವುದನ್ನು ನೀವೊಮ್ಮೆ ಪರಿಶೀಲಿಸಿ, ಯಾರು ವಿದ್ಯಾವಂತರನ್ನು ಆಳುತ್ತಿದ್ದಾರೆ, ಯಾರು ಊರಿನ ಉದ್ದಾರಕ್ಕಾಗಿ ಶ್ರಮಿಸುತ್ತಿದ್ದಾರೆ? ಎಷ್ಟು ಭ್ರಷ್ಟಾಚಾರ ನಮ್ಮಲ್ಲಿ ಕಡಿಮೆಯಾಗಿದೆ? ಎಷ್ಟು ಪ್ರಬುದ್ಧ ಜನರು ಶೃಸ್ಟಿಯಾಗಿದ್ದಾರೆ, ಎಷ್ಟು ಜನರು ಭಾರತದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ? ಎಷ್ಟು ಜನ ಮೂಡ ನಂಬಿಕೆ , ಜಾತಿ ಧರ್ಮಗಳನ್ನು ಅರ್ಥ ಮಾಡಿಕೊಂಡಿದ್ದಾರೆ?

              ಸಮಾನತೆ ಬರಬೇಕಾದರೆ ವಿದ್ಯೆ ಬಹಳ ಅಗತ್ಯ, ಸಮಾನತೆ ಬಂದರೆ ಅಥವಾ ಪ್ರಶ್ನಿಸುವ ಜನರು ಹೆಚ್ಚಾದರೆ ನಮಗೆ ಉಳಿಗಾಲವಿಲ್ಲ ಎನ್ನುವವರು ಉಚಿತ ಶಿಕ್ಷಣವನ್ನು ವಿರೋಧಿಸುತ್ತಾರೆ! ಅಲ್ಪ ಸ್ವಲ್ಪ ಕಲಿತು ಹಣ ಸುರಿದು ಕೆಲಸ ಗಿಟ್ಟಿಸಿಕೊಂಡ ಜನರು ಇನ್ನಷ್ಟು ಭ್ರಷ್ಟಾಚಾರಕ್ಕೆ ಕಾರಣರಾಗುತ್ತಾರೆ, ಅವಿದ್ಯಾವಂತ ಮೂರ್ಖ ರಾಜಕೀಯ ನಾಯಕರ ಬೆಂಬಲಿಗರಾಗಿ ಸುತ್ತುತಿರುತ್ತಾರೆ. ಯೋಚನೆ, ವಿವೇಚನೆಗಳಿಲ್ಲದೆ ಹುಚ್ಚರಂತೆ ಅಲೆದಾಡಿ ಅಮಾಯಕರ ಜೀವ ಬಲಿ ತೆಗೆದುಕೊಂಡು ಅಲ್ಲಿಯೂ ಮೂರ್ಖ ಭಾಷಣ ಮಾಡಿ ಇನ್ನಷ್ಟು ಅವಿವೇಕಿಗಳನ್ನು ಒಟ್ಟುಗೂಡಿಸುತ್ತಾರೆ. ಕೆಲ ಜನರು ಹೇಳಬಹುದು ವಿದ್ಯೆ ಇದ್ದ ಮಾತ್ರಕ್ಕೆ ಸಾಕಾಗದು, ಈ ಹಿಂದೆ ದೇಶಕ್ಕಾಗಿ ಹೋರಾಡಿದವರು ಎಲ್ಲರೂ ವಿದ್ಯಾವಂತರೆ ಕೇಳಬಹುದು? ಅಥವಾ ಅತೀ ಹೆಚ್ಚು ಕಲಿತವರೇ ಸಂಸ್ಕಾರ, ಧರ್ಮ ಮರೆತು ಜೀವಿಸುತ್ತಾರೆ ಅನ್ನಬಹುದು. ಇಂತಹ ಪ್ರಶ್ನೆಗಳು ಅವರ ಯೋಚನೆ ಮತ್ತು ಎಷ್ಟು ವಿದ್ಯಾವಂತರೆಂದು ತೋರಿಸುತ್ತದೆ ಹೊರತು, ಅವಿದ್ಯಾವಂತತೆ ಅವನಲಿ ಜೀವಂತವಾಗಿದೆ ಎಂದು ತೊರ್ಪಡಿಸಲುಬಹುದು.

            ಮನುಷ್ಯರನ್ನು ಒಂದೇ ದೃಷ್ಟಿಯಲ್ಲಿ ನೋಡುತ್ತಾ, ಪ್ರಬುದ್ಧ, ಶುದ್ಧ ಮತ್ತು ಗೌರವ ಕೊಟ್ಟು ಕೊಂಡುಕೊಳ್ಳುವ ಪ್ರವೃತ್ತಿ, ಹಿತ ಚಿಂತನೆ, ಮತ್ತು ಪಾರದರ್ಶಕ ಜೀವನ ಮಾಡುವವನು ಮಾತ್ರ ವಿದ್ಯಾವಂತನೆಂದು ಹೇಳಬಹುದು ವಿನಃ, ಅಲ್ಪ ತುಂಬಿದ ಕೊಡ ಹೋದಲೆಲ್ಲಾ ಶಬ್ದ ಮಾಡುವ ಪ್ರವೃತ್ತಿಯ ಜನರು ಶತ ಮೂರ್ಖರಿಗೆ ಸಮಾನವಾಗಿರಬಹುದು!

          ಪ್ರತೀ ಪ್ರಜೆಗೆ ವಿದ್ಯಾದಾನವಾಗಲಿ, ಪ್ರತೀ ಪ್ರಜೆಯು ಭಾರತದ ಉತ್ತಮವಾದ, ಉತ್ಕೃಷ್ಟ  ಪ್ರಜೆಯಾಗಲಿ ಎಂಬ ಹಾರೈಕೆಯೊಂದಿಗೆ

           ✍️ಮಾಧವ ಅಂಜಾರು.






Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ