ತ್ರಿವರ್ಣದೊಳು ನನ್ನುಸಿರು
ಕೇಸರಿ ಬಿಳಿ ಹಸಿರು
ತ್ರಿವರ್ಣದೊಳು ನನ್ನುಸಿರು
ಈ ಮಣ್ಣಿನ ಋಣ ಎನಗೆ
ಭರತ ಖಂಡವೆ ನನ್ನುಸಿರು,
ಎದುರಾಳಿಗಳಿರಲಿ
ಶತ್ರು ಸಾಮ್ರಾಜ್ಯವೇ ಇರಲಿ
ಉಸಿರಿರುವವರೆಗೂ ಪ್ರೀತಿಸುವೆ
ಭಾರತವೇ ನನ್ನುಸಿರು,
ಇಂದಾದರೂ, ನಾಳೆಯಾದರೂ
ಭರತ ಭೂಮಿಯ ಹೆಸರು
ಎದೆತಟ್ಟಿ ಹೇಳುವೆ
ಭಾರತವೇ ನನ್ನುಸಿರು
ಸದೆಬಡಿಯುವೆ ಶತ್ರುಗಳನು
ಪೂಜಿಸುವೆ ಸೈನಿಕರನು
ಸ್ವಾತಂತ್ರ್ಯಕೆ ನಿಮ್ಮ ಬಲಿ
ಮರೆಯಲಾಗದು ವೀರ ಶೈಲಿ,
ಕ್ಷಣ ಕ್ಷಣಕೂ ಪ್ರತೀ ದಿನಕು
ಭವ್ಯ ಭಾರತದ ಕನಸು
ಜಯವಾಗಲಿ ಜಯವಾಗಲಿ
ತ್ರಿವರ್ಣಧ್ವಜವೇ ನನ್ನುಸಿರು.
✍️ಮಾಧವ ಅಂಜಾರು.
Comments
Post a Comment