(ಲೇಖನ -61) ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಉಸಿರು- ದೇವರು ಕೊಟ್ಟ ವರ

 (ಲೇಖನ -61) ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಉಸಿರು- ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಶಕ್ತಿ ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಯುಕ್ತಿ ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಸಂಪತ್ತು, ಬುದ್ದಿ, ದೇವರು ಕೊಟ್ಟ ವರ. ಅದನ್ನೆಲ್ಲವ ಪಡೆದುಕೊಂಡು ಇನ್ನೂ ಜೀವಿಸುತ್ತಿರುವೆಯೆಂದರೆ ನಿನ್ನ ತಂದೆ ತಾಯಿಯ ವರ. ಮನುಷ್ಯ ಸಾವಿರಾರು ತಪ್ಪುಗಳನ್ನು ಮಾಡುತ್ತಾನೆ, ಸಾವಿರಾರು ದ್ರೋಹಗಳನ್ನೂ ಮಾಡುತ್ತಾನೆ, ಸಾವಿರಾರು ಪಾಪಗಳನ್ನು ಮಾಡುತ್ತಾನೆ, ಆದರೆ ಯಾವುದನ್ನೂ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ, ಎಗ್ಗಿಲ್ಲದೇ ತನ್ನ ಕೈ ಕಾಲುಗಳು ಸರಿಯಾಗಿರುವಾಗ ಮಾಡಬಾರದ್ದನ್ನು ಮಾಡಿ, ಹೇಳಬಾರದ್ದನ್ನು ಹೇಳಿ, ಅತ್ಯಂತ ಕ್ರೂರವಾಗಿ ಜೀವಿಸಿ ಕೊನೆಗಾಲಕ್ಕೆ ನಡೆಯಲು ಆಗದೆ , ಹಾಸಿಗೆ ಹಿಡಿದು ಪರಿತಪಿಸುವ ಕಾಲದಲ್ಲಿ ದೇವರನ್ನು ದೂರುವ ಜನರು, ತಾನು ಯಾವುದೇ ತಪ್ಪುಗಳನ್ನೇ ಮಾಡದೆ ಅನುಭವಿಸುವ ಕಷ್ಟಗಳು ಕೂಡ ದೇವರು ಕೊಟ್ಟ ವರ, ಯಾಕೆಂದರೆ?  ನಿನ್ನ ಆಲೋಚನೆ, ಶಕ್ತಿ, ಸಮಾಧಾನ ಇವೆಲ್ಲವನ್ನು ಪರೀಕ್ಷೆ ಮಾಡುವ ಸಮಯ ಕೂಡ ದೇವರು ಕೊಟ್ಟ ವರ. ಯಾವ ಸಮಯದಲ್ಲಿ ಯಾರನ್ನು ಹೇಗೆ ಉಪಕರಿಸುವೆಯೋ, ಅಪಕರಿಸಿವೆಯೋ ಅದು ನಿನ್ನ ಮೇಲಿದೆ, ಮಾನವೀಯತೆಯ ಮನುಜ ತನ್ನ ಬುದ್ದಿಯನ್ನು ಒಳಿತಿನ ಕೆಲಸಕ್ಕಾಗಿ ಉಪಯೋಗ ಮಾಡುತ್ತಾನೆ , ತನ್ನ ಬುದ್ದಿಯನ್ನು ಇನ್ನೊಬ್ಬನ ಅವನತಿಗಾಗಿ ಉಪಯೋಗಿಸಿ ಜೀವಿಸುವವನು ಮಾನವನಾಗಿರಲು ಅರ್ಹನಲ್ಲ, ತಿಳಿಯದೆ ಮಾಡುವ ತಪ್ಪಿಗಿಂತ ತಿಳಿದು ಮಾಡುವ ತಪ್ಪುಗಳು ನಿನ್ನ ಯೋಗ್ಯತೆ, ಮಾನಸಿಕತೆ ಮತ್ತು ಸೌಜನ್ಯತೆಯನ್ನು ತೋರಿಸುತ್ತದೆ. ನಿನ್ನ ಕೈಲಿ ನಾಲ್ಕಾರು ಪದವಿಗಳಿದ್ದರೆ ಸಾಲದು, ನಿನ್ನ ಬಳಿ ಬೇಕಾದಷ್ಟು ಹಣ, ಆಸ್ತಿಗಳಿದ್ದರೆ ಸಾಲದು, ನಿನ್ನ ಬಳಿ ಜನ ಬಲವಿದ್ದರೆ ಸಾಲದು, ಅದಕ್ಕೆ ಬೇಕಾಗುವ ನಡತೆ, ಸೌಜನ್ಯ, ಗೌರವ ಎಲ್ಲವೂ ಬೇಕಾಗುತ್ತದೆ. ಎಲ್ಲವನ್ನೂ ಸಮಾನ ರೀತಿಯಲ್ಲಿ ಜೀವನಪರ್ಯಂತ ಉಳಿಸಿಕೊಂಡು ಬರುವವನ ಬದುಕು ಯಾವಾಗಲೂ ಧೈರ್ಯದಿಂದ ಕೂಡಿರುತ್ತದೆ, ಯಾವುದೇ ಸವಾಲನ್ನು ಎದುರಿಸಲು ಶಕ್ತಿಯನ್ನು ಹೊಂದಿರುತ್ತಾನೆ.


            ಅಯ್ಯೋ, ಇವನೊಬ್ಬ ಮಹಾ ಯೋಗ್ಯ? ಊರೆಲ್ಲ ಬುದ್ದಿಹೇಳುತ್ತಾನೆ, ಇವನ ಯೋಗ್ಯತೆ ಏನು ಅಂತ ನಮಗೆ ಗೊತ್ತಿಲ್ಲವಾ ಅನ್ನುವವರೂ ನಿಮಗೆ ಸಿಗಬಹುದು, ನಿಮ್ಮನ್ನು ಹೀಗಳೆಯುವ ವ್ಯಕ್ತಿಗಳೂ ಸಿಗಬಹುದು, ನಿಮ್ಮನ್ನು ತುಂಬಾ ಹೊಗಳುವವರು ಅಥವಾ ತೆಗಳುವವರು ಸಿಗಬಹುದು, ನಿನ್ನ ವೈಯುಕ್ತಿಕ ವಿಚಾರದಲ್ಲಿ ಸುಖಾ ಸುಮ್ಮನೆ ಮೂಗುತೂರಿಸುವವರು ಸಿಗಬಹುದು, ಅಥವಾ ಯಾವಾಗಲೂ ಧನಾತ್ಮಕ ಚಿಂತನೆಯುಳ್ಳ, ನಕಾರಾತ್ಮಕ ಚಿಂತನೆಯ ಜನರೂ ಸಿಗಬಹುದು. ಇವೆಲ್ಲವೂ ಅವರ ಜೀವನ ಪದ್ಧತಿ, ಮನೆಯ ಆಚಾರ ವಿಚಾರ ಮತ್ತು ನಿಜವಾದ ಮನಸ್ಸನ್ನು ಎತ್ತಿ ತೋರಿಸುತ್ತದೆ ಹೊರತು ಅದರಿಂದ ಕೇಳುವವನಿಗೆ ಯಾವುದೇ ಘನತೆಗೆ ತೊಂದರೆಗಳು ಬರದು. ಅತಿಯಾದ ಅಸೂಯೆ, ಸಂಶಯಗಳು, ತಾವು ಬೆಳೆದುಬಂದ ರೀತಿಯನ್ನು ತೋರಿಸುತ್ತದೆ ಮತ್ತು ಜೀವನದ ಕೊನೆಯವರೆಗೂ ನಿಮ್ಮಲ್ಲಿಯೆ ಉಳಿದಿರುತ್ತದೆ.

          ಒಂದು ಜೀವಿಗೆ, ಅಥವಾ ಮನುಷ್ಯನಿಗೆ ಜೀರ್ಣಸಿಕೊಳ್ಳುವಷ್ಟು ವಿಷವನ್ನು ಕೊಡುತ್ತ ಬಂದರೆ ಬೆಳೆದಮೇಲೆ ವಿಷ ಹಾವು ಕಚ್ಚಿದರೂ ಏನೂ ಆಗದು, ಒಂದು ವ್ಯಕ್ತಿ ಚಿಕ್ಕಂದಿನಿಂದಲೂ ವೀರ ಶೂರರ ಕಥೆ, ಕಾದಂಬರಿ ಅಥವಾ ಓದುತ್ತಾ ಬಂದಿರುವವನು ಜೀವನದಲ್ಲಿ ಧೈರ್ಯವಾಗಿ ಬದುಕುತ್ತಾನೆ ಹೊರತು ಹೇಡಿಯಾಗಿ ಬದುಕುವುದಿಲ್ಲ. ಒಂದು ವ್ಯಕ್ತಿ ಸದಾ ಹುಚ್ಚರ ಸಂತೆಯಲಿ ಸೇರುತಲಿದ್ದರೆ ಹೋದವನೂ ಹುಚ್ಚನಾಗುತ್ತಾನೆ ಹೊರತು ಸರಿಯಾಗಿರೋಕೆ ಸಾಧ್ಯವಿಲ್ಲ, ಉದಾಹರೆಣೆಗೆ, ನೀವು ದಿನಬಿಡದೆ ಪತ್ತೇದಾರಿ ಅಥವಾ ನಿಘುಡ ಕಥೆಯುಳ್ಳ ಚಲನಚಿತ್ರವನ್ನು ನೋಡುತ್ತಲೇ ಬನ್ನಿ, ನಿಮ್ಮ ಮನಸು ಬುದ್ದಿ ಎರಡೂ ಅದರಂತೆಯೇ ಇರಲಿಚ್ಚಿಸುತ್ತದೆ, ವ್ಯಕ್ತಿತ್ವ ಅರಿವಿಲ್ಲದೆ ಬದಲಾವಣೆಯಾಗುತ್ತದೆ. ಯೋಚನೆಗಳು ನಿಘುಡವಾಗುತ್ತದೆ, ಕೊನೆಗೆ ಬದುಕು ಕೂಡ ನಿಘುಡವಾಗಿಬಿಡುತ್ತದೆ. ಎಲ್ಲಾ ವಿಷಯಗಳು ಹಾಗೆಯೇ, ತಾನು ಮಾಡುವ ಪ್ರತಿಯೊಂದು ಪ್ರತಿಕ್ರಿಯೆಗಳು ಮಾನಸಿಕತೆಯನ್ನು ತೋರಿಸುತ್ತದೆ. ಮಾನವನಾಗಿ ಎಲ್ಲವನ್ನೂ ಸರಿಯಾಗಿ ಪಾಲಿಸಲು ಸಾಧ್ಯವಿಲ್ಲ ಆದರೆ ಸಾಧ್ಯವಿರುವುದನ್ನು ಪಾಲಿಸಿ, ತಿದ್ದಿಕೊಳ್ಳದಿದ್ದರೆ ಅವರೊಂದಿಗೆ ಯಾವ ಸಂಬಂಧವೂ ಸರಿಯಾಗಿ ಉಳಿಯುವುದಿಲ್ಲ.

            ಕಷ್ಟಬಂದಾಗ ಮಾತ್ರ ಗಂಡನ ನೆನಪಿಸುವ ಮಹಿಳೆ, ತನ್ನ ತೀಟೆ ತೀರಿಸಲು ಅನ್ಯರ ಬಯಸುವ ಹೆಣ್ಣು ಅಥವಾ ಗಂಡು ಎಷ್ಟು ಸುಂದರ ಮಾತಾನ್ನಾಡಿದರು ವ್ಯರ್ಥ, ಸುಂದರವಾದ ಉಡುಗೆ ತೊಟ್ಟರೂ ವ್ಯರ್ಥ, ಉದ್ದುದ್ದ ಭಾಷಣ, ಭೋದನೆ ಮಾಡಿದರೂ ವ್ಯರ್ಥ, ಒಬ್ಬ ಮನುಷ್ಯ ಪ್ರಾಮಾಣಿಕಗಿರಬೇಕಾದರೂ ಅವನಲ್ಲಿ ಅಂತಹ ಉತ್ಕೃಷ್ಟ ಮನಸ್ಸುಗಳು ಇರಬೇಕು, ಅವನಲ್ಲಿ ಉತ್ತಮವಾದ ಸಂಸ್ಕಾರಗಳು ಇರಬೇಕು, ಇಲ್ಲವಾದಲ್ಲಿ ಹೆಣ್ಣು ಸಂಸಾರದ ಪಾಲಿನ ವಿಷ ಹಾವು, ಗಂಡು ಸಂಸಾರದ ಪಾಲಿನ ಹುಚ್ಚು ಅರಸ.

        ಜೀವನ, ಅಳೆದಷ್ಟು, ಅನುಭವಿಸಿದಷ್ಟು  ಹೊಸ ಹೊಸ ಪಾಠ ಕಲಿಯುತ್ತಾ ಇರುತ್ತೇವೆ, ಆದರೆ ನಿನ್ನಲಿರುವ ಜವಾಬ್ದಾರಿಯನ್ನು ಬದಿಗೊತ್ತಿ ಅತಿ ಸ್ವಾರ್ಥದಿಂದ ಬದುಕಿ ಬಾಳಿ ಮಾಡುವ ಎಲ್ಲಾ ಸಾಧನೆಗಳು ಯಶಸ್ವಿಯಾಗುವುದಿಲ್ಲ. ಬರೇ ತನ್ನ ಬೆನ್ನು ತಟ್ಟಿಕೊಂಡು ತನ್ನ ಕಿರೀಟವನ್ನು ತಾನೇ ಹಾಕಿಕೊಂಡು ಊರಿಗೆ ಅರಸನಾಗಲು ಹೋಗಬೇಡ ಅಥವಾ ರಾಣಿಯಾಗಲು ಇಳಿಯಬೇಡ. ಸೌಜನ್ಯ, ಸಂಸ್ಕಾರ, ನಯ ವಿನಯತೆ ಎಲ್ಲವನ್ನೂ ರೂಡಿಸಿ ಬದುಕಲು ಶ್ರಮಿಸು, ಜೀವನ ಪಾವನವಾಗಿ ಮನುಷ್ಯ ಜನ್ಮ ಸಾರ್ಥಕವಾಗಬಹುದು ಇಲ್ಲವಾದಲ್ಲಿ ಕಿಂಚಿತ್ತೂ ಬೆಲೆ ಇರದು!

                ಏನಾದರೂ ಆಗು ಮೊದಲು ಮಾನವನಾಗು, ನಗುವ ಹೂವಾಗು, ನೋವ ಮರೆಸುವ ಸ್ನೇಹಜೀವಿಯಾಗು.

                             ✍️ಮಾಧವ ಅಂಜಾರು 


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ