ಈಗಲೇ (ಕವನ 24)
ಇಷ್ಟಪಟ್ಟಿದ್ದರೆ ಈಗಲೇ ವ್ಯಕ್ತಪಡಿಸು
ನಾ ಸತ್ತು ಹೋದ ಮೇಲಲ್ಲ
ಇಷ್ಟವಿದ್ದರೆ ನೀನೀಗಲೇ ಮಾತಾಡು
ನಾ ಬೆಸ್ತು ಬಿದ್ದಾಗವಲ್ಲ
ಇಷ್ಟವಿದ್ದರೆ ನೀನೀಗಲೇ ಗೆಳೆತನ ಬೆಳೆಸು
ನಾ ದೂರ ಹೋದಾಗ ಅಲ್ಲ
ಇಷ್ಟವಿದ್ದರೆ ನೀನೀಗಲೇ ಮಾತಾಡು
ನಾ ಮಾತು ನಿಲಿಸಿದಾಗಲ್ಲ
ಇಷ್ಟವಿದ್ದರೆ ನೀ ಈಗಲೇ ನಕ್ಕುಬಿಡು
ನಾ ಬೇಸರ ಹೊಂದಿದಾಗಲ್ಲ
ಇಷ್ಟವಿದ್ದರೆ ನೀ ಜೊತೆಯಲಿರು
ನಾ ದೂರ ಹೋದಗಲಲ್ಲ
✍️ಮಾಧವ ನಾಯ್ಕ್ ಅಂಜಾರು,,🙏
Comments
Post a Comment