ಬೆಳಕಾಗಿ ನಾನಿರುವೆ (ಕವನ -20)

ಹೂವಾಗಿ ಬಂದಿರುವೆ
ಎನ ಹೃದಯ ಸೇರಿರುವೆ
ಜೋಗುಳವ ಹಾಡುತಲೇ
ತಬ್ಬಿನಿನ್ನ ಮುದ್ದಾಡುವೆ
ಹೆಜ್ಜೇನ ಸವಿದಂತೆ
ತುಟಿಗೊಂದು  ಮುತ್ತಕೊಡುವೆ
ಉಸಿರಲ್ಲಿ ಉಸಿರಾಗಿ
ಕೊನೆತನಕ ಜೊತೆಗಿರುವೆ

ಸಿಹಿಯಾದ ಮಾತೊಂದಿಗೆ 
ನಿನಜೊತೆ ಹೆಜ್ಜೆಹಾಕುವೆ
ರವಿಯಾಗಿ ನಿನಗಾಗಿ
ಬೆಳಕಾಗಿ ನಾನಿರುವೆ
ಸವಿಯಾದ ಬದುಕಲಿ
ನೀ ನನ್ನ ಚಂದಿರ
ನಿನ್ನ ನಗುವ ನೆನೆಯುತ
ಬಾಳೆಲ್ಲ ಸುಮಧುರ
     ✍️ಮಾಧವ ಅಂಜಾರು 🌷


























Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ