ಸ್ಪಂದನ (ಕವನ -18)
ಸ್ಪಂದನ
*******
ಇನ್ನೊಬ್ಬರ ನೋವಿಗೆ
ಸ್ಪಂದಿಸುವ ಹೃದಯ ನಿಮ್ಮಲ್ಲಿದ್ದರೆ
ನೋವನ್ನು ಸಹಿಸಿಕೊಳ್ಳಲು ಕೂಡ
ನಿಮ್ಮ ಹೃದಯ ತಯಾರಿಯಲ್ಲಿರುತ್ತದೆ,
ಇನ್ನೊಬ್ಬರ ಪ್ರೀತಿಗೆ
ಸ್ಪಂದಿಸುವ ಮನಸ್ಸು ನಿಮ್ಮಲ್ಲಿದ್ದರೆ
ಪ್ರೀತಿಯ ಅರ್ಥವೇನೆಂದು
ತಿಳಿಸುವ ಶಕ್ತಿ ನಿಮ್ಮಲ್ಲಿರುತ್ತದೆ
ಇನ್ನೊಬ್ಬರ ಅವನತಿಗೆ
ಕಾಯುವ ಮನಸ್ಥಿತಿ ನಿಮ್ಮಲ್ಲಿದ್ದರೆ
ಅವನತಿ ನಿಮ್ಮದೇ ಬಾಗಿಲಲ್ಲಿ ಕಾಯುತ್ತಿರುತ್ತದೆ
ಒಂದಲ್ಲ ಒಂದು ದಿನ ಸತ್ಯ ಗೆಲ್ಲುತ್ತದೆ
✍️ಮಾಧವ ಅಂಜಾರು 🌷
.
Comments
Post a Comment