ನಿನ್ನವರಿಲ್ಲ (ಕವನ 23)
ನಿನ್ನವರು ಯಾರು ಇಲ್ಲ
ಇಲ್ಲಿ ನಿನ್ನವರು ಯಾರೂ ಇಲ್ಲ
ಬೆಣ್ಣೆಯಂತೆ ಮಾತನ್ನಾಡಿ
ಕನ್ನ ಹಾಕೋ ಜನರೇ ಎಲ್ಲಾ
ನೊಂದು ನೀನು ಜೀವಿಸುತ್ತಿದ್ದರು
ಬಂದು ತುಳಿಯೋ ಜನರೇ ಎಲ್ಲಾ,
ಇಲ್ಲಿ ನಿನ್ನವರು ಯಾರೂ ಇಲ್ಲ
ಬಂಧುಬಳಗ ಸೋಗಿನಲ್ಲಿ
ಬಣ್ಣ ಬಣ್ಣದ ಚಿತ್ರಣವೆಲ್ಲ
ಸಮಯ ಕೆಟ್ಟು ಸತ್ತು ಹೋದರೂ
ನಿನ್ನನಿನಿತು ನೆನೆಯೋರಿಲ್ಲ
ಮಾಡಿದಕರ್ಮ ಜಾಸ್ತಿಯಾಗಿ
ದೇವನಶಿಕ್ಷೆ ಹೇಳುವರೆಲ್ಲ
ಇಲ್ಲಿ ನಿನ್ನವರು ಯಾರೂ ಇಲ್ಲ
ನ್ಯಾಯನೀತಿ ಪಾಲಿಸೋರಿಲ್ಲ
ಸಿರಿವಂತನ ಹಿಂಬಾಲಕರೆಲ್ಲ
ಬಡವನೆಂದು ಅರಿತಮೇಲೆ
ನಿನ್ನ ಬಳಿ ಸುಳಿಯೋರಿಲ್ಲ
ಆಡಂಬರದ ಬದುಕಿಗಾಗಿ
ಕಣ್ಣಿದ್ದೂ ಕುರುಡರೇ ಎಲ್ಲಾ
ಇಲ್ಲಿ ನಿನ್ನವರು ಯಾರೂ ಇಲ್ಲ
✍️ಮಾಧವ ನಾಯ್ಕ್ ಅಂಜಾರು🙏
Comments
Post a Comment