ನಿನ್ನ ಬಳಿ ಇರುವಾಗ (ಕವನ 19)
ನಿನ್ನ ಬಳಿ ಬರುವಾಗ
***************
ನೀನೆನ್ನ ಹೊಗಳಬೇಡ
ನಾ ನಿನ್ನ ಬಳಿಯಿದ್ದಾಗ
ನೀನೆನ್ನ ತೆಗಳಬೇಡ
ನಾನಿನಿತು ದೂರವಿದ್ದಾಗ
ನೀನೆನ್ನ ಶಪಿಸಬೇಡ
ಎಂದಾದರು ಕೋಪಗೊಂಡಾಗ,
ನೀ ಎನ್ನ ಕೇಳಬೇಡ
ಅಪ್ಪ ಅಮ್ಮನ ಜೊತೆಯಲಿರುವಾಗ
ನೀ ಎನ್ನ ನೋಡಬೇಡ
ಎನ್ನ ಕಣ್ಣು ತುಂಬಿಬಂದಾಗ
ನೀ ಎನ್ನ ನೋಯಿಸಬೇಡ
ಎನ್ನ ಜೀವನ ಸರಿಯಿಲ್ಲದಾಗ,
ನೀ ಎನ್ನ ಕೈ ಬಿಡಬೇಡ
ನಾ ನಿನ್ನ ಹಿಡಿಯುವಾಗ
ನೀನಂತು ದೂರಸರಿಯಬೇಡ
ನಾ ನಿನ್ನ ಬಳಿ ಬರುವಾಗ
ನೀನೆನ್ನ ನೆನಪಿಸಬೇಡ
ನಾನೆಲ್ಲವ ಬಿಟ್ಟು ಹೋದಾಗ,
✍️ಮಾಧವ ನಾಯ್ಕ್ ಅಂಜಾರು 🌹🙏
***************
ನೀನೆನ್ನ ಹೊಗಳಬೇಡ
ನಾ ನಿನ್ನ ಬಳಿಯಿದ್ದಾಗ
ನೀನೆನ್ನ ತೆಗಳಬೇಡ
ನಾನಿನಿತು ದೂರವಿದ್ದಾಗ
ನೀನೆನ್ನ ಶಪಿಸಬೇಡ
ಎಂದಾದರು ಕೋಪಗೊಂಡಾಗ,
ನೀ ಎನ್ನ ಕೇಳಬೇಡ
ಅಪ್ಪ ಅಮ್ಮನ ಜೊತೆಯಲಿರುವಾಗ
ನೀ ಎನ್ನ ನೋಡಬೇಡ
ಎನ್ನ ಕಣ್ಣು ತುಂಬಿಬಂದಾಗ
ನೀ ಎನ್ನ ನೋಯಿಸಬೇಡ
ಎನ್ನ ಜೀವನ ಸರಿಯಿಲ್ಲದಾಗ,
ನೀ ಎನ್ನ ಕೈ ಬಿಡಬೇಡ
ನಾ ನಿನ್ನ ಹಿಡಿಯುವಾಗ
ನೀನಂತು ದೂರಸರಿಯಬೇಡ
ನಾ ನಿನ್ನ ಬಳಿ ಬರುವಾಗ
ನೀನೆನ್ನ ನೆನಪಿಸಬೇಡ
ನಾನೆಲ್ಲವ ಬಿಟ್ಟು ಹೋದಾಗ,
✍️ಮಾಧವ ನಾಯ್ಕ್ ಅಂಜಾರು 🌹🙏
Comments
Post a Comment