ಕನ್ನಡ ಶಾಲೆ (ಕವನ -13)


ಕನ್ನಡ ಶಾಲೆ
********
ಒಂದು ಚೀಲ
ಒಂದು ಕೊಡೆ
ಒಂದು ಜೊತೆ ಬಟ್ಟೆಯು
ಸಾಕಿತ್ತು ಕನ್ನಡ ಶಾಲೆಗೆ
ಒಂದು ಶಾಲೆಗೆ
ಒಬ್ಬ ಮೇಸ್ಟ್ರು
ಒಂದು ಊರಿಗೆ ನಾಲ್ಕು ಮೇಸ್ಟ್ರು
ಸಾಕಿತ್ತು ಕನ್ನಡ ಶಾಲೆಗೆ
ಒಂದು  ಮೈಲಿ
ನಡೆದುಕೊಂಡು
ಹಣ್ಣು ಹಂಪಲು ತಿಂದುಕೊಂಡು
ಹೋಗುತಿದ್ದೆ ಕನ್ನಡ ಶಾಲೆಗೆ
ಶಾಲೆ ಬಿಡುತ
ರಾಷ್ಟ್ರಗೀತೆ
ಆರಂಭದಲಿ ನಾಡ ಗೀತೆ
ಕಲಿಯುತಿದ್ದೆ ಕನ್ನಡ ಶಾಲೆಯಲಿ
ತಂದೆ ತಾಯಿ
ದೇವರೆನುತ
ದಿನಚರಿಯ ಬರೆದುಕೊಂಡು
ಹೋಗುತಿದ್ದೆ ಕನ್ನಡ ಶಾಲೆಗೆ
ನೂಲು ಸುತ್ತಿದ ಚೆಂಡಿನಲಿ
ಲಗೋರಿ ಆಟವಾಡುತಲಿ
ಕುಟ್ಟಿ ದೊಣ್ಣೆಯ ಆಟವು
ನಡೆಯುತಿತ್ತು ಶಾಲೆಯಲಿ
ಕೊಕ್ಕೋ ಆಟ
ಮರಕೋತಿಯಾಟವಾಡುತ
ಆಲದ ಮರದ ಜೋಕಾಲಿ
ದಾಟುತ್ತಿದ್ದೆ  ಮುಳ್ಳ ಬೇಲಿ
ತುಂಬಿ ತುಳುಕುವ ಕೆರೆಯಲಿ
ಮುಳುಗಿ ತೆಗೆದ ಹೂ ಕಮಲ
ತಂದು ಮಾಲೆ ಮಾಡುತಲಿ
ತೊಡುತ  ಕಲಿತೆ ಶಾಲೇಲಿ
ಆದರಿಂದು ಬೀಗ ಬೀಳುತಿದೆ
ಕನ್ನಡ ಶಾಲೆಯಲಿ
ಹಂಚು ಹಳೆಯಾಗುತಿದೆ
ಪ್ರತಿ ಕನ್ನಡ ಶಾಲೆಯಲಿ
ಮಕ್ಕಳಿಲ್ಲದ ಶಾಲೇಲಿ
ಕಾಯುತಿವೆ ಹಳೆ ಬೆಂಚು
ಬೀಳುತಿದೆ ಕಪ್ಪು ಗೋಡೆ
ಆವರಿಸುತಿದೆ ಬಳ್ಳಿ ಗಿಡಗಳು
✍️ಮಾಧವ ನಾಯ್ಕ್ ಅಂಜಾರು😔

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ