ಬದುಕೆಂಬ ನೌಕೆ (ಕವನ -22)
ನೀನಾಡಿದ ಮಾತು
ಕೊನೆಯದ್ದಾಗಿರಬಹುದು
ನೀ ನೋಡಿದ ಜೀವ
ಇನ್ನಿಲ್ಲವಾಗಬಹುದು
ನೀ ತಿನ್ನಿರೋ ತಿನಸು
ಸಿಗದಿರಲೂಬಹುದು,
ನಿನ್ನಲಿರೋ ಶಕ್ತಿ
ಕ್ಷೀಣವಾಗಬಹುದು
ನಿನ್ನಲಿರೋ ಯುಕ್ತಿ
ಉಪಯೋಗಕ್ಕಿರದು
ನಿನ್ನಾಸ್ತಿಗಳೆಲ್ಲವೂ
ಮಣ್ಣಾಗಲೂಬಹುದು,
ಸಿಹಿಮಾತು ಉಳಿಯಬಹುದು
ಕಹಿಮಾತುಗಳೂ ಉಳಿಯಬಹುದು
ಬದುಕೆಂಬ ನೌಕೆಯು
ಬಿರುಗಾಳಿಗೆ ಸಿಕ್ಕಿಬೀಳಬಹುದು
ದೇವನೊಬ್ಬನ ಸಹಾಯವಿದ್ದರೆ
ಎಲ್ಲಾದರೂ ಬದುಕಬಹುದು
✍️ಮಾಧವ ನಾಯ್ಕ್ ಅಂಜಾರು 🌷
Comments
Post a Comment