ರೈತನೇ ಬೆನ್ನೆಲುಬು (ಕವನ -16)

ರೈತನೇ ಬೆನ್ನೆಲುಬು
*************
ಬೆಳಗಿನ ತಿಂಡಿ
ಗಂಜಿ ಊಟ
ಸೂರ್ಯ ಉದಯಿಸುತ್ತಿದ್ದಂತೆ
ಕರೆಯುತಿದ್ದ ಹಾಲು,
ಹಕ್ಕಿಗಳ ಚಿಲಿಪಿಲಿ
ಮುದ ನೀಡುತಿತ್ತು ದಿನಾಲೂ

ಹುಂಜನ  ಕೂಗು ಕೇಳಿದ ಮಾತ್ರಕೆ
ಕೋಳಿ ಮರಿಗಳ ಚಿಲಿಪಿಲಿ ಕೂಗು
ಗೂಡಲಿ ಹೊರಗೆ ಓಡುತ ಸಾಗುತ
ತೋಟದ ಕೀಟಗಳೆ ಕೋಳಿಗೆ ಊಟ

ಅಂಗಳದಿ ಕರುವು
ಅಂಬಾ ಎನುತಲೇ
ಬಿಚ್ಚಿದ ಹಗ್ಗವ ಎಳೆದಾಡುತಲೇ
ಸೇರಿತು ತಾಯಿಯ ಕೆಚ್ಚಲು ಗುದ್ದಲು
ಪ್ರೀತಿಯ ಸವರಿಕೆ ನೆತ್ತಿಯ ಮೇಲೆ
ಸಂತೋಷದಿ ಕರುವು ಕುಡಿಯಿತು ಹಾಲು

ಕತ್ತಿಯ ಹರಿತಕೆ
ಬೋರ್ಗಲ್ಲ ಹುಡಿಯು
ಮರದ ದಿಂಬಿನ ಮೇಲೆ ಉಜ್ಜುತ್ತಾ
ಮಾರುದ್ದದ ಹಗ್ಗವ ಸುತ್ತಿದ ಅಪ್ಪ
ಮೈತುಂಬ ಬೆವರೊಂದಿಗೆ ಬರುತ್ತಲೇ
ತಲೆಯಲಿ ಹುಲ್ಲಿನ ಮೇವು

ಕೋಣಗಳ ಮುದ್ದಾಡುತಾ
ಹಾಕಿದ ಮೇವು
ಗಬ ಗಬ ತಿನ್ನುತಾ ನೋಡಿದ "ಕಾಳ "
ತಂದೆಯ ಮೊಗದಲಿ
ಅದೆಷ್ಟು ಆನಂದ
ಇನ್ನಷ್ಟು ಹೊಟ್ಟೆಗೆ ತಿಂದನು "ಬೊಲ್ಲ "

ಅಮ್ಮನ ಕೂಗು
ಎಲ್ಲಿರುವಿರಿ ಮಕ್ಕಳೇ?
ತಡವಾಯ್ತು ಎನಗೆ ಗದ್ದೆಗೆ ನಡೆಯಲು
ನೇಜಿಯ ಎಳೆದು ಹಾಕಬೇಕೆನುತ
ಓಡಿ ಓಡಿ ನಡೆದು
ಬಂದಳು ಮೈಗೆ ಕೆಸರನು ಹೊತ್ತು

ಮೊಸರಿನ ಗಂಜಿ ಬಟ್ಟಲು ತುಂಬ
ತೆಗೆದರು ಭರಣಿಯ  ಉಪ್ಪಿನಕಾಯಿ
ಹಪ್ಪಳ ಸೆಂಡಿಗೆ ಚಟ ಪಟ ಅಗಿಯುತ
ಮಾವಿನ ಕಾಯಿಯ ರಸವನು ಸವಿಯುತ

ದಿನವನು ದೂಡುವ ರೈತನ ಅಳಲು
ಕೇಳಲು ಯಾರಿಲ್ಲ ಅವನ ನೋವು
ಪೇಪರು ಟಿವಿ ಯಲಿ ದಿನವೂ ಕಾವು
ರೈತರೇ ಬೆನ್ನೆಲುಬು ಅವನಿಗಿಲ್ಲವಂತೆ ನೋವು
✍️ಮಾಧವ ನಾಯ್ಕ್ ಅಂಜಾರು 🙏🌹

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ