ಇನ್ನೇನು ಬೇಕು (ಕವನ -25)

ಇನ್ನೇನು ಬೇಕು ಜಗದಲಿ
ರಕ್ಷಕರು ಭಕ್ಷಕರಾಗಿಹರು
ಜನಸೇವಕರು ಕುರುಡರಾದರು 
ಸತ್ಯವಾದ ತ್ಯಜಿಸಿರುವರು
ನ್ಯಾಯ ಸತ್ತುಹೋಯಿತು 

ಇನ್ನೇನು ಬೇಕು ಜಗದಲಿ
ಅಧಿಕಾರ ಅಸ್ತ್ರವಾಯಿತು
ಬಡವನ  ತುಳಿದಾಯಿತು
ಸತ್ಯವನ್ನು ತಿರುಹಿಬಿಟ್ಟರು
ಅತ್ಯಾಚಾರ ಮಿತಿಮೀರಿತು

ಇನ್ನೇನು ಬೇಕು ಜಗದಲಿ
ಅಣ್ಣ ತಮ್ಮನ ಕೊಲ್ಲುತಿಹರು 
ಅಪ್ಪ ಮಗಳನ್ನು ಭೋಗಿಸಿದನು
ತಮ್ಮ ಅಣ್ಣನ ಕೊಂದನು
ಮಕ್ಕಳು ಪೋಷಕರ ತುಳಿದರು

ಇನ್ನೇನು ಬೇಕು ಜಗದಲಿ
ಮಾಂಗಲ್ಯದ ಅರ್ಥ ಹೋಯಿತು
ವಿವಾಹಿತ ವಿಕೃತ ಸುಖ ಬಯಸಿದ
ವಯಸ್ಸಿಗೆ ಮೊದಲೇ ಕಾಮ
ಕಿರಿಯರನ್ನು ವಿವಾಹವಾದರು 

ಇನ್ನೇನು ಬೇಕು ಜಗದಲಿ
ಸಂಬಂಧಗಳು  ಬಿರುಕಾದವು 
ಪ್ರೀತಿ ನಾಟಕವಾಯಿತು
ಉಪಕರಿಸಿದವಗೆ ಉಪದ್ರವಿಸಿದರು
ಸ್ನೇಹ ಸುಳ್ಳಾಯಿತು

ಇನ್ನೇನು ಬೇಕು ಜಗದಲಿ
ಆನೆಗೆ ಬೆಂಕಿಯಿಟ್ಟರು
ನಾಯಿಯನ್ನು ಜಿವಂತ ಸುಟ್ಟರು
ಮನುಷ್ಯನ ಜೀವಂತ ಸುಟ್ಟರು
ಎಲ್ಲಾ ಪ್ರಾಣಿಗಳ ತಿಂದು ಬಿಟ್ಟರು

ಇನ್ನೇನು ಬೇಕು ಜಗದಲಿ
ಕಾಡುಗಳ ಅಳಿಸಿದರು 
ನದಿಗಳ ನಾಶಗೈದರು
ನಗು, ಅಳು  ಕಪಟವಾಯಿತು
ದೇವರನ್ನೂ ಹೀಯಾಳಿಸಿದರು

ಇನ್ನೇನು ಬೇಕು  ಜಗದಲಿ
ಧರ್ಮಗಳು ಹೊಡೆದಾಡಿತು 
ಜಾತಿಗಳು ಮತಿಗೆಟ್ಟಿತು
ಮನುಷ್ಯತ್ವ ಇಲ್ಲವಾಯಿತು
   ✍️ಮಾಧವ ನಾಯ್ಕ್ ಅಂಜಾರು 🌷













































Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ