ತನ್ನುಸಿರ ಅರ್ಥ (ಕವನ -21)
ಬುದ್ದಿ ಹೇಳೋಕೆ ನೀನ್ಯಾರು?
ಅನ್ನುವವಗೆ ತಿದ್ದುವುದು ವ್ಯರ್ಥ
ತಪ್ಪನ್ನು ಸಮರ್ಥಿಸಿಕೊಳ್ಳುವವಗೆ
ನ್ಯಾಯಮಾತು ವ್ಯರ್ಥ
ನಾನಿಲ್ಲದೆ ನೀನಿಲ್ಲ ಹೇಳುವವಗೆ
ತಿಳಿದಿಲ್ಲ ಜಗದ ಅರ್ಥ
ನಿನ್ನಿಂದ ನನಗೇನಾಗಬೇಕು
ಅನ್ನುವವಗೆ ಸಹಾಯವೆಲ್ಲ ವ್ಯರ್ಥ
ಹಸಿದವಗೆ ಆಹಾರದ ಬದಲು
ಇನ್ನುಳಿದೆಲ್ಲವೂ ವ್ಯರ್ಥ
ಉಸಿರೆಲ್ಲಾ ನೀನೇ ಹೇಳುವವಗೆ
ತಿಳಿದಿಲ್ಲ ತನ್ನುಸಿರ ಅರ್ಥ
✍️ಮಾಧವ ಅಂಜಾರು 🌷
Comments
Post a Comment