ಲೇಖನ -116) ಇಸವಿ 2024 ರ, 24 ಕನಸುಗಳು ನನಸಾಗಲಿ ನಮ್ಮ ನಿಮ್ಮೆಲ್ಲರ ಬದುಕು ಹಸನಾಗಲಿ,
✍️Madhav K Anjar (ಲೇಖನ -116) ಇಸವಿ 2024 ರ, 24 ಕನಸುಗಳು ನನಸಾಗಲಿ ನಮ್ಮ ನಿಮ್ಮೆಲ್ಲರ ಬದುಕು ಹಸನಾಗಲಿ, ವರುಷದ ಕೊನೆಯ ದಿನದಲ್ಲಿ ನಾವೆಲ್ಲರೂ ಭವ್ಯ ಭಾರತದ ಕನಸಿಗೆ ಸೇತುವೆಯಾಗೋಣ, ಡಿಸೆಂಬರ್ 31, 2023. ರ ರಾತ್ರಿ 12 ಗಂಟೆಗೆ ಎಲ್ಲರೂ ಹೊಸ ವರುಷವನ್ನು ಸ್ವಾಗತಿಸಲು ತಯಾರಿಯಲ್ಲಿದ್ದೀರಾ?, ಹೆಚ್ಚಿನ ಜನರು ತಮ್ಮ ಗೆಳೆಯ ಗೆಳತಿ ಕುಟುಂಬ ಮತ್ತು ಸಂಗಡಿಗರೊಂದಿಗೆ ಸೇರಿ ವಿಭಿನ್ನ ರೀತಿಯ ಆಚರಣೆಗೆ ಅಣಿಯಗುತ್ತೀರಿ ಆದರೆ ನಮ್ಮ ಆಚರಣೆ ಕೇವಲವಾಗಿ ಮೋಜು ಮಸ್ತಿಗೆ ಸೀಮಿತವಾಗಿರದೆ ಕೆಲವೊಂದು ಕನಸುಗಳ ಜೊತೆಗೆ ಆಚರಿಸುವಂತಾಗಲಿ. ಸಾವಿರಾರು ಕನಸುಗಳನ್ನು ಹೊತ್ತು ಮುನ್ನುಗ್ಗುತ್ತಿರುವ ನಮ್ಮ ದೇಶಕ್ಕಾಗಿ ನಿಮ್ಮೆಲ್ಲರ ಕಿರು ಕಾಣಿಕೆ ಇರಲಿ. ಅದೇನು ಅಂತಹದು ಆಲೋಚನೆಗಳು ನಿಮ್ಮ ಮನಸಲ್ಲಿ ಮೂಡಿಲ್ಲವೇ, ಇಂದು ಹೊಸ ಚಿಂತನೆಗಳೊಂದಿಗೆ ಹೊಸ ವರುಷವನ್ನು ಸ್ವಾಗತಿಸಲು ನಾವೆಲ್ಲರೂ ತಯಾರಾಗೋಣ. ಭಾರತವೆಂಬುವುದು ಸೌಭಾಗ್ಯವಂತರ ದೇಶ, ಪ್ರಪಂಚದಲ್ಲಿ ಇನ್ನೆಲ್ಲೂ ಇಲ್ಲದ ಸ್ವಾತಂತ್ರ್ಯ, ನಮ್ಮ ದೇಶದ ಮಣ್ಣಲ್ಲಿ, ಪ್ರತೀ ಪ್ರಜೆಗೂ ಇಲ್ಲಿದೆ ಹಕ್ಕು ಸಾಧಿಸಬೇಕೆಂದು ಛಲವಿದ್ದರೆ ಭಾರತ ಸೂಕ್ತ ಪ್ರದೇಶ, ಸಂಪತ್ತಿನ ಆಗರವಾಗಿದ್ದ ದೇಶವನ್ನು ಅದೆಷ್ಟು ವಿದೇಶಿಗರು ಬಂದು ಲೂಟಿ ಮಾಡಿದ್ದರೂ ಬರಿದಾಗಿಸಲು ಸಾಧ್ಯವಾಗಲಿಲ್ಲ, ಅನೇಕ ದೇಶ ಭಕ್ತರನ್ನು ಕೊಂದು ರಕ್ತ ಕುಡಿದಿದ್ದರೂ ಭಾರತವನ್ನು ನಾಶ ಮಾ...