(ಲೇಖನ -122) ಭೂ - ಕೈಲಾಸ, ಕಲಾ ವೈಭವ - ಕುವೈತ್ ಕನ್ನಡ ಕೂಟದಿಂದ ಆಯೋಜಿಸಲ್ಪಟ್ಟ ದಾಸೋತ್ಸವ ಶೇಕಡಾ ನೂರರಷ್ಟು ಮನ ತಣಿಸಿತು, ಕಲಾ ಮಾತೆಯರು , ಕಲಾಗಾರರು ರೋಮಾಂಚನಗೊಳಿಸಿದ ದೃಶ್ಯಗಳ ಹಿಂದೆ ಸದ್ದಿಲ್ಲದೇ ಶ್ರಮವಹಿಸಿದ "ಶ್ರೀ ಸತೀಶ್ ಆಚಾರ್ಯ "ಇವರ ನಿರ್ದೇಶನ ಪ್ರೇಕ್ಷಕವರ್ಗದ ಹುಬ್ಬೆರಿಸಿತ್ತು, ಭೂ ಕೈಲಾಸದ ಪ್ರತಿಯೊಂದು ಭಾಗ ಚಪ್ಪಾಳೆಯೊಂದಿಗೆ ಮುಂದುವರಿಯುತಿತ್ತು. ಆರಂಭದಿಂದ ಕೊನೆಯವರೆಗೂ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಚಿಣ್ಣರಿಂದ ಹಿರಿಯರವರೆಗೂ ಬಹಳಷ್ಟು ಸ್ಪಷ್ಟ ಮತ್ತು ಸಂತಸದ ವಾತಾವರಣದಿಂದ ಕೂಡಿತ್ತು. ರಾಮಾಯಣ, ಮಹಾಭಾರತದ ತುಣುಕುಗಳೊಂದಿಗೆ,ಭಕ್ತಿ ಮತ್ತು ರಸದೌತಣದ ಹಬ್ಬ ಕುವೈಟ್ ಕನ್ನಡ ಕೂಟದ ಮೆರುಗನ್ನು ಇನ್ನಷ್ಟು ಹೆಚ್ಚುಗೊಳಿಸಿತ್ತು. ಬಣ್ಣ ಬಣ್ಣದ ಉಡುಗೆ ತೊಡುಗೆ, ಪರಸ್ಪರರ ನಗು ಮುಖದ ಸಂಧರ್ಭಗಳೊಂದಿಗೆ ಕಾರ್ಯಕ್ರಮ ತೆರೆಕಂಡಿತು. ಇಲ್ಲಿ ಆಡಳಿತ ಮಂಡಳಿ, ಸರ್ವ ಸದಸ್ಯರ ನಿಸ್ವಾರ್ಥ ಸೇವೆ ಕನ್ನಡ ಕೂಟದ ಗೌರವ ದ್ವಿಗುಣಗೊಳಿಸುತ್ತಲೇ ಇದೆ. ಪ್ರತಿಯೊಬ್ಬರಲ್ಲೂ ಕಲೆಎಂಬುದಿದೆ ಹಾಗಾಗಿ ಪ್ರತೀ ಸದಸ್ಯರು ಮತ್ತು ಅವರ ಮಕ್ಕಳೂ ಒಂದಲ್ಲ ಒಂದು ರೀತಿಯಲ್ಲಿ ಭಾಗವಹಿಸಿ ಕಲೆಯನ್ನು ಉಳಿಸಿ ಬೆಳೆಸಲು ಸಹಾಯವಾಗುತ್ತಿದ್ದಾರೆ. ಭಜನೆ, ನಿರೂಪಣೆ, ಸಾತ್ವಿಕ ಆಹಾರ ಎಲ್ಲವೂ ಅಚ್ಚುಕಟ್ಟಾಗಿ ನಡೆದು ಕೂಟದ ಶಿಸ್ತನ್ನು ತೋರಿಸುತಿತ್ತು. ಬಾಲ್ಯದ ಸಮಯದಲ್ಲಿ...
Comments
Post a Comment