ಆಕರ್ಷಣೆ
ನಿನ್ನ ತುಟಿಗಳು
ನನ್ನ ತ್ವಚೆಗೆ.... ಆಯಸ್ಕಾಂತವಾಗಿದೆ
ಈ ರೀತಿ ಪ್ರೀತಿಸುವುದು
ಅಪರೂಪವೇ ಅನಿಸುತ್ತಿದೆ
ನನ್ನ ತ್ವಚೆಗೆ.... ಆಯಸ್ಕಾಂತವಾಗಿದೆ
ಈ ರೀತಿ ಪ್ರೀತಿಸುವುದು
ಅಪರೂಪವೇ ಅನಿಸುತ್ತಿದೆ
ಅದಕ್ಕಾಗಿಯೇ ನಾನು "
ನಿನಗಾಗಿ ಹಂಬಲಿಸಿದೆ,
ನಿನಗಾಗಿ ಹಂಬಲಿಸಿದೆ,
ಗುರುತಿಸಲಾಗದ ಆನಂದವ
ಕಳೆದುಕೊಳ್ಳುವ ಭಯ
ನಿನ್ನ ಪ್ರೀತಿಯ ಪ್ರತಿಕ್ರಿಯೆ
ನನಗೆ ಸಿಗುವ ಜಯ
ರಥ ಚಕ್ರ ಮುಂದುವರಿದಂತೆ
ಹೃದಯದಲಿ ನೀ ನಡೆವೆ!
ಬಹುಶಃ ಈ ಸಮಯವು
ಹೊಸ ಆರಂಭವಾಗಿದೆ
ಆಕರ್ಷಣೆ ನಿನ್ನಲಿ
ನಿನಗಾಗಿ ನಾ ಕಾಯುವೆ
ನಿನಗಾಗಿ ನಾ ಕಾಯುವೆ
ಮುದ್ದಾಡುವೆ.... ಹಗಲಿರುಳು ಕಾಯುವೆ.
✍️ಮಾಧವ. ಕೆ. ಅಂಜಾರು
Comments
Post a Comment