(ಲೇಖನ -115)ಸಂಗೀತವನ್ನು ಕೇಳುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಮುಂಜಾನೆಯ ಸಂಗೀತ, ಮದ್ಯಾಹ್ನದ ಸಂಗೀತ, ಸಾಯಂಕಾಲ ದ ಸಂಗೀತ ಇದರಲ್ಲಿ ವ್ಯತ್ಯಾಸ ತಿಳಿದುಕೊಂಡು ಮನಸ್ಸನ್ನು ಹಗುರಗೊಳಿಸಿ.

✍️Madhav. K. Anjar.

(ಲೇಖನ -115) ಮನ  ತಣಿಸುವ ಸಂಗೀತ - Music,  ಸಂಗೀತಕ್ಕೆ ಸೋಲದೆ ಇರುವ ಜೀವಿಗಳಿಲ್ಲ, ಸಂಗೀತ ಲೋಕದಲ್ಲಿ ಮುಳುಗಿದಾಕ್ಷಣ ಎಲ್ಲವನ್ನೂ ಮರೆಯುವ ಅನೇಕ ಸಂಧರ್ಭಗಳನ್ನು ನಾವೆಲ್ಲರೂ ಅನುಭವಿಸಿರುತ್ತೇವೆ. ಸಂಗೀತಕ್ಕೆ ಅದೇನು ಶಕ್ತಿ ಅಲ್ಲವೇ? ರಾಗ, ಲಯ, ತಾಳ ಎಲ್ಲವನ್ನೂ ಸರಿಯಾಗಿಸಿ ಹೊರ ಹೊಮ್ಮವ ಸ್ವರ ಅದೆಷ್ಟು ಮನಸುಗಳನ್ನು ಶಾಂತಿಯಾಗಿಸುತ್ತದೆ, ಸ್ವರದೊಂದಿಗೆ ಜೊತೆಯಾಗುವ ಸಂಗೀತ ಸಾಧನಗಳು ಸಂಗೀತಗಾರರ ಕಂಠಕ್ಕೆ ಮತ್ತಷ್ಟು ಮೆರುಗು ಕೊಡುತ್ತವೆ. ಸಂಗೀತ ಕಲೆ ಕೆಲವೇ ಕೆಲವರಲ್ಲಿ ಇರುತ್ತದೆ, ಹಾಡುವುದು ಅಷ್ಟು ಸುಲಭವೂ ಅಲ್ಲ, ಕೇಳುಗರಿಗೆ ಹಾಡುವುದು ಸುಲಭವಾಗಿ ಕಂಡರೂ, ಹಾಡನ್ನು ಹಾಡಿದಾಗಲೇ ಅದರ ಮರ್ಮ ಗೊತ್ತಾಗುವುದು. ಹಾಡು ಉತ್ತಮವಾದ ಸ್ವರದಿಂದ ಕೂಡಿದ್ದರೆ ಮಾತ್ರ ಕೇಳಲು ಇಂಪಾಗಿರುತ್ತದೆ,ನಮ್ಮ ಸಂತೋಷವನ್ನು ಹಂಚಿಕೊಳ್ಳುವ ಸಂಧರ್ಭಗಳಲ್ಲಿ, ಮನಸ್ಸಿಗೆ ಬೇಸರವಾದಾಗ, ಅಥವಾ ಒಬ್ಬಂಟಿತನದ ಸಮಯದಲ್ಲಿ ಹಾಡನ್ನು ಕೇಳುತ್ತ ಮೈ ಮರೆಯುತ್ತೇವೆ ನಮಗೆ ಅರಿವಿಲ್ಲದೆ,  ಪ್ರತಿಯೊಂದು ಸಂಗೀತ ಸಾಧನಗಳಲ್ಲಿ ಹೊರ ಹೊಮ್ಮವ ಸ್ವರಕ್ಕೆ ವಿಶಿಷ್ಟ ಶಕ್ತಿ ಇರುತ್ತದೆ.  ಕೊಳಲು ಊದುವ ಸಂಧರ್ಭದಲ್ಲಿ ದನ ಕರುಗಳು ತನ್ನ ಕಿವಿಯನ್ನು ನೇರ ಮಾಡಿಕೊಂಡು ಕೊಳಲಿನ ದನಿಯನ್ನು ಆಲಿಸುವ, ಮತ್ತು ಅದರಲ್ಲಿ ಹೊಮ್ಮವ ಸಂಗೀತಕ್ಕೆ ಕುಣಿಯುವ ಪ್ರಸಂಗವನ್ನು ನಾವು ನೋಡುತ್ತೇವೆ, ಹಾಗೆಯೇ ಭಜನೆ ಸಂಕೀರ್ತನೆ, ರಸ ಮಂಜರಿ ಇಂತಹ ಅನೇಕ ಸಂಗೀತ ಪ್ರಸಾರದ ಸಂಧರ್ಭದಲ್ಲಿ ಹೊರ ಹೊಮ್ಮವ ತರಂಗಗಳು ನಮ್ಮ ಸುತ್ತ ಮುತ್ತಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ.



                    ತಂಬೂರಿ, ತಾಳ, ವಾದ್ಯ, ಡೋಲು, ವೀಣೆ, ಮೃದಂಗ, ಕೊಳಲು, ತಬಲ, ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ನಡೆಯುವ ಎಲ್ಲಾ ಸಂಗೀತ ಕಾರ್ಯಕ್ರಮಗಳಲ್ಲಿ ಪ್ರತಿಯೊಂದು ಸಂಗೀತ ಸಾಧನ ಅದರದ್ದೇ ಆದ ವಿಶೇಷತೆಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಎಲ್ಲಾ ಸಾಧನದೊಂದಿಗೆ ಹೊರಹೊಮ್ಮವ ಸುಮಧುರವಾದ ಸಂಗೀತ ಗಾಯನ ನಾವೆಲ್ಲರೂ ಕೇಳುತ್ತೇವೆ. ಬೆಳಗ್ಗಿನ ಜಾವದಿಂದ ಹಿಡಿದು ರಾತ್ರಿಯವರೆಗೂ ಕೇಳುವ ಅನೇಕ ಹಾಡುಗಳು ನಮ್ಮನ್ನು ತುಂಬಾನೇ ಖುಷಿಪಡಿಸುತ್ತದೆ.

          ಮದುವೆ, ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಗೀತಕ್ಕೆ ಬಹಳಷ್ಟು ಪ್ರಾಮುಖ್ಯತೆಯನ್ನು ಕೊಡುತ್ತೇವೆ. ಇಲ್ಲಿ ಸಂಗೀತಗಾರರ ಪಾತ್ರ ಮತ್ತು ಇನ್ನಿತರ ಸಂಗೀತ ಸಾಧನವನ್ನು ಸರಿಯಾಗಿ ಉಪಯೋಗಿಸುವ ಕಲಾಗಾರರು ಸಮಾಜಕ್ಕೆ ಶಕ್ತಿಯನ್ನು ನಿಡುತ್ತಲೇ ಇರುತ್ತಾರೆ. ಜಗತ್ತಿನಾದ್ಯಂತ ಸಂಗೀತಗಾರರು ವಿಶೇಷ ರೀತಿಯಲ್ಲಿ ಜಗತ್ತನ್ನೇ ಮೆಚ್ಚಿಸುತ್ತಾರೆ. ಜನರು ಸಂಗೀತಗಾರರಿಗೆ ತಲೆಬಾಗುತ್ತಾರೆ. ಪ್ರೋತ್ಸಾಹ ಕೊಡುತ್ತಾರೆ.

        ಸಂಗೀತವನ್ನು ಕೇಳುವ ಹವ್ಯಾಸ ಇರುವವರು ಮನಸ್ಸನ್ನು ಹತೋಟಿಯಲ್ಲಿಡಲು ಶ್ರಮಿಸುತ್ತಾರೆ. ಸಾಹಿತಿಗಳ ಸಾಹಿತ್ಯ, ಕವನ, ಭಾವಗೀತೆ, ಭಕ್ತಿ ಗೀತೆ, ದುಃಖ ಗೀತೆ, ಸಂತೋಷವನ್ನು ವ್ಯಕ್ತಪಡಿಸುವ ಅನೇಕ ಹಾಡುಗಳನ್ನು ನಮ್ಮ ಜೀವನದಲ್ಲಿ ಮರೆಯುವಂತಿಲ್ಲ. ಸಾಹಿತಿಗಳು ಮತ್ತು ಹಾಡುಗಾರರು ಒಂದು ನಾಣ್ಯದ ಎರಡು ಮುಖವೆಂದು ಹೇಳಬಹುದು. ಒಂದೊಂದು ಪದವನ್ನು ತನ್ನ ಭಾವನೆ, ಪ್ರೀತಿ, ಪ್ರೇಮ, ಪ್ರಪಂಚ, ಪ್ರಕೃತಿ ಮತ್ತು ಸನ್ನಿವೇಶಗಳನ್ನು ಆಧರಿಸಿ ಬರೆಯುವ ಪದ್ಯ ಹಾಡಿನ ಮೂಲಕ ಹೊರ ಹೊಮ್ಮಿದಾಗ ನಾವುಗಳು ಸಂತೋಷಗೊಳ್ಳುತ್ತೇವೆ.

       ಸಂಗೀತವನ್ನು ಕೇಳುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಮುಂಜಾನೆಯ ಸಂಗೀತ, ಮದ್ಯಾಹ್ನದ ಸಂಗೀತ, ಸಾಯಂಕಾಲ ದ ಸಂಗೀತ ಇದರಲ್ಲಿ ವ್ಯತ್ಯಾಸ ತಿಳಿದುಕೊಂಡು ಮನಸ್ಸನ್ನು ಹಗುರಗೊಳಿಸಿ. ನಿಮ್ಮ ಮರಿ ಮಕ್ಕಳಿಗೂ ಸಂಗೀತದ ರುಚಿಯನ್ನು ಕೊಟ್ಟು ಬಾಳು ಬಂಗಾರವಾಗಿಸಿ.

    ಮಗೂ ಇವತ್ತು ನಾನು ಯಾವುದರ ಬಗ್ಗೆ ಬರೆಯಲಿ ನನ್ನ ಸುಪುತ್ರನಲ್ಲಿ ಕೇಳಿದಾಗ..... ಅಪ್ಪ ನೀನು Music ಬಗ್ಗೆ ಬರೆ ಎಂದು ಹೇಳಿದಾಗ ಮೂಡಿದ ಕೆಲವು ಅಂತರಾಳದ ಪದಗುಂಚ.

      ಎಲ್ಲರಿಗೂ ಒಳಿತಾಗಲಿ 🙏🏿🌹

      ✍️ ಮಾಧವ. ಕೆ. ಅಂಜಾರು 






Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ