ನಾನಿನ್ನ ನೆನೆದಾಗ!
ಯಾಕಿಷ್ಟು ನಿನ್ನ ಕನಸು
ಯಾಕಿಷ್ಟು ನಿನ್ನ ನೆನಪು
ತುಂಟಾಟ ನಿನ್ನ ಪಾಠ
ಪ್ರೀತಿಯ ನಿನ್ನ ನೋಟ
ಹಗಲಿರುಳು ಕಾಡುತಿದೆ
ಕದ್ದು ಬಿಟ್ಟೆಯಾ ನನ್ನ ಮನಸು!
ಮುಗುಳುನಗೆ ಕಂಡಾಗ
ನೀನೆದುರು ನಿಂತಾಗ
ಜಗವನ್ನೇ ಮರೆಯುವೆ
ನಿನ್ನೊಂದಿಗೆ ಬೆರೆತಾಗ
ಪ್ರೇಮದ ಪಾಠವ
ಕೇಳುತ್ತ ಕುಳಿತಾಗ!
ಸಾವಿರ ಜನ್ಮದ ಪುಣ್ಯದ ಫಲವೋ
ಬಾಳಿನ ಪುಟಗಳ
ನವವಿಧ ಅದ್ಯಾಯ
ಬರೆಯುವ ನೀನಂತೂ
ಜೊತೆಯಾಗಿರುವೆಯಾ
ನಾನಿನ್ನ ನೆನೆದಾಗ!
✍️ ಮಾಧವ. ಕೆ. ಅಂಜಾರು
Comments
Post a Comment