ಭಾರತವೆಂದರೆ ಸಂಸ್ಕೃತಿ, ಭಾರತವೆಂದರೆ ಗೌರವ, ಭಾರತವೆಂದರೆ ವೈಭವ, ಭಾರತವೆಂದರೆ ಶಕ್ತಿ, ಶಾಂತಿ ಭಾರತವೆಂದರೆ ಯುಕ್ತಿ,

✍️Madhav. K. Anjar 

(ಲೇಖನ-108) ಭಾರತವೆಂದರೆ  ಸಂಸ್ಕೃತಿ, ಭಾರತವೆಂದರೆ ಗೌರವ, ಭಾರತವೆಂದರೆ ವೈಭವ, ಭಾರತವೆಂದರೆ ಶಕ್ತಿ, ಶಾಂತಿ ಭಾರತವೆಂದರೆ ಯುಕ್ತಿ, ಭಾರತವೆಂದರೆ ಭವ್ಯ ಪರಂಪರೆ, ಕೌಶಲ್ಯ, ವಿಜ್ಞಾನ. ಭಾರತವೆಂದರೆ ಒಗ್ಗಟ್ಟು, ಎಲ್ಲವನ್ನು ಪಡೆದಿರುವ ಭಾರತೀಯರು ಜಗತ್ತಿಗೆ ಸಂಪತ್ತು, ಜಗತ್ತಿನಲ್ಲಿ ಇನ್ನೊಬ್ಬರನ್ನು ನೋಯಿಸದೆ ಬದುಕುವ ರಾಷ್ಟ್ರವೆಂದರೆ ಭಾರತವೊಂದೆ, ಇತಿಹಾಸದಲ್ಲಿ ಭಾರತೀಯರ ಮೇಲೆ ದಬ್ಬಾಳಿಕೆಗಳಾದ ಉದಾಹರಣೆ ಸಾಕಷ್ಟಿದೆ ಆದರೆ ಭಾರತೀಯರು ಆಕ್ರಮಣ ಮಾಡಿರುವ ಯಾವ ಇತಿಹಾಸದಲ್ಲೂ ಇಲ್ಲ. ಅದಕ್ಕೆ ಕಾರಣ ನಮ್ಮಲ್ಲಿರುವ ಸಂಸ್ಕೃತಿ, ಬಾಂಧವ್ಯ, ಮತ್ತು ವಿವೇಚನೆ ಎಲ್ಲವೂ ಭಾರತೀಯ ಮಣ್ಣಲ್ಲಿ ಉತ್ತಮ ರೀತಿಯಲ್ಲಿ ಬೇರೂರಿದೆ. ಸರ್ವಧರ್ಮದವರು ಕೂಡಿ ಒಗ್ಗೂಡಿ ಬಾಳುವ ಏಕೈಕ ದೇಶ ನಮ್ಮ ಭಾರತ.



       ಭಾರತೀಯರ  ಶಕ್ತಿಯನ್ನು ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ, ಭಾರತದ ವಿಜ್ಞಾನ, ಬುದ್ದಿವಂತಿಕೆಯನ್ನು ಪಡೆಯಲು ಕೂಡ ಯಾರಿಂದಲೂ ಸಾಧ್ಯವಿಲ್ಲ. ಜಗತ್ತಿನಲ್ಲಿ ವಿಜ್ಞಾನ ಎಷ್ಟು ಮುಂದುವರಿದಿದ್ದರೂ ಭಾರತೀಯರಿಲ್ಲದ ವಿಜ್ಞಾನನಕ್ಕೆ ಬೆಲೆಯಿಲ್ಲ. ಹಾಗಾಗಿ ಭಾರತ ದೇಶದ ಬಗ್ಗೆ ಅಸೂಯೆಪಡುವ ಕೆಲವರು ಆಂತರಿಕ ಮತ್ತು ಬಾಹ್ಯ ದುಷ್ಟರ ಸಹಾಯದೊಂದಿಗೆ ಭಾರತವನ್ನು ನಾಶಮಾಡಲು ಶ್ರಮಿಸುತ್ತಿದ್ದಾರೆ. ಇಲ್ಲಿ ಉದ್ದೇಶಗಳು ಬೇರೆ ಬೇರೆ. ಭಾರತದ ಉನ್ನತಿಯನ್ನು ಬಯಸುವ ಜನರ ಸಂಖ್ಯೆಯನ್ನು ಕಡಿಮೆಗೊಳಿಸಲು ಶತಮಾನದಿಂದಲೂ ಶ್ರಮಿಸಿ ಸುಸ್ತಾಗಿ ಹೋಗಿರುವ ಹಿತ ಶತ್ರುಗಳು ಮಣ್ಣು ಪಾಲಾಗಿದ್ದಾರೆ. ಹಾಗಂತ ತನ್ನಷ್ಟಕ್ಕೆ ನಮ್ಮ ದೇಶ ಉದ್ದಾರವಾಗದು. ನಮ್ಮಲ್ಲಿರುವ ಕೆಟ್ಟ ಯೋಚನೆಗಳನ್ನು ದೂರವಿಟ್ಟು ಅಳಿಲ ಸೇವೆ ಮಾಡಿದರೂ ಯಾರಿಗೂ ಉಪದ್ರವಿಸದೆ ನಮ್ಮ ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡುಹೋಗಬಹುದು.

     ದೇಶ ಸೇವೆ ಮಾಡಲು ಸೇನೆಯಲ್ಲಿ ಅಥವಾ ನಮಗೆ ಅಧಿಕಾರವೆ ಬೇಕೆಂದೇನಿಲ್ಲ, ನಮ್ಮ ದೇಶದ ಉತ್ಪನ್ನಗಳನ್ನು ಖರೀದಿ ಮಾಡಿ, ಹೊಸ ಆವಿಷ್ಕಾರ, ನಮ್ಮ ದೇಶದ ಸಂಸ್ಕೃತಿಯನ್ನು ಧೈರ್ಯವಾಗಿ ಹೇಳುವ ಮನೋಭಾವನೆ ನಮ್ಮಲ್ಲಿ ಇನ್ನಷ್ಟು ಬೆಳೆಯಬೇಕು. ಭಾರತದ ಜನರು ಬಡವರಾಗಿದ್ದರೂ ಬುದ್ದಿಯಲ್ಲಿ ಮತ್ತು ಹೃದಯದಲ್ಲಿ ಶ್ರೀಮಂತರೆಂದು ಜಗತ್ತಿಗೆ ಗೊತ್ತಾಗಿದೆ. ಹಾಗಾಗಿ ಭಾರತವನ್ನು ಕೆಣಕುವ ಕೆಲಸಕ್ಕೆ ಬಾಹ್ಯ ಶಕ್ತಿಗಳು ನೂರಾರು ಬಾರಿ ಯೋಚನೆ ಮಾಡುತ್ತವೆ. ನಮಲ್ಲಿರುವ ಕೆಲವು ಅವ್ಯವಸ್ಥೆಯನ್ನು ಸರಿಪಡಿಸಲು ಆದಷ್ಟು ಶ್ರಮಿಸಬೇಕು. ಉತ್ತಮವಾದ ಚಿಂತನೆಗಳನ್ನು ಮಾಡುವ ವಿದ್ಯಾರ್ಥಿಗಳನ್ನು ಶೃಷ್ಟಿಸಬೇಕು , ಡಾಕ್ಟರ್ ಇಂಜಿನಿಯರ್, ಮತ್ತು ಜಗತ್ತಿಗೆ ಬೇಕಾಗುವ ಉತ್ತಮ ವ್ಯಕ್ತಿ ಮತ್ತು ವ್ಯಕ್ತಿತ್ವವುಳ್ಳ ಜನರನ್ನು ಜಗತ್ತಿಗೆ ಕೊಡುವ ಸಾಮರ್ಥ್ಯ ನಮ್ಮಲ್ಲಿ ಇನ್ನಷ್ಟು ಹೆಚ್ಚಿಸಬೇಕು. ಭಾರತೀಯತೆಯನ್ನು ಪ್ರೀತಿಸುವ ಜನರು ಜಗತ್ತಿನಲ್ಲಿ ಇನ್ನಷ್ಟು ಹೆಚ್ಚಬೇಕು.

     ಭಾರತದ ನಿಜವಾದ ಬೆಲೆ ತಿಳಿಯಬೇಕಾದರೆ ಮತ್ತೊಂದು ದೇಶಕ್ಕೆ ಕಾಲಿಟ್ಟಾಗ ಮಾತ್ರ ತಿಳಿಯುತ್ತದೆ. ನಮ್ಮ ದೇಶದಲ್ಲಿರುವ ಸ್ವಾತಂತ್ಯ್ರ್ಯ ಬೇರೆ ಯಾವ ದೇಶದಲ್ಲು ಸಿಗಲ್ಲ, ನಮ್ಮ ದೇಶದಲ್ಲಿರುವ ಸಂಸ್ಕೃತಿ ಬೇರೆ ದೇಶದಲ್ಲಿ ಸಿಗಲ್ಲ. ಅತೀ ಹೆಚ್ಚಿನ ವಾಕ್ ಸ್ವಾತಂತ್ರ್ಯ ನಮ್ಮ ದೇಶದಲ್ಲಿದೆ, ಅದೇ ಸ್ವಾತಂತ್ರ್ಯ ತನ್ನದೇ ದೇಶವನ್ನು ಹಿಮ್ಮೆಟ್ಟಿಸಲು ಉಪಯೋಗಿಸುವ ಕೆಲವು ದೇಶ ದ್ರೋಹಿಗಳು ಭಾರತದ ಭವಿಷ್ಯಕ್ಕೆ ಮಾರಕವಾಗಿ ಬದುಕುತ್ತಾ ದಿನ ದೂಡುತ್ತಾರೆ . ಕೆಟ್ಟ ರಾಜಕೀಯ, ಸ್ವಂತ ಲಾಭಕ್ಕಾಗಿ ಭಾರತವನ್ನು ದೂರುವ ಜನರು ಕೂಡ ಇರಬಹುದು. ಒಟ್ಟಾರೆ ಅವರಿಂದ ಒಳಿತಿಗಿಂತ ಕೆಟ್ಟದೆ ಜಾಸ್ತಿ ಇರುತ್ತದೆ. ಮನೆ ಅಥವಾ ದೇಶವೆಂದರೆ ಒಂದಲ್ಲ ಒಂದು ರೀತಿಯ ಏರು ಪೇರುಗಳು ಇರುತ್ತವೆ ಹಾಗಾಗಿ ಅದನ್ನು ಮತ್ತೊಂದು ದೇಶದಲ್ಲಿ ಹೋಗಿ ಸರಿಪಡಿಸಲು ಸಾಧ್ಯವಿಲ್ಲ, ನಮ್ಮಲ್ಲಿರುವ ನ್ಯೂನ್ಯತೆಯನ್ನು ಬೇರೆ ಕಡೆ ಹೋಗಿ ಹರಾಜು ಹಾಕುವುದರ ಬದಲು ನಮ್ಮಲ್ಲಿಯೇ ಅದಕ್ಕೆ ಬೇಕಾಗುವ ಪರಿಹಾರವನ್ನು ಹುಡುಕಿದಲ್ಲಿ ಭಾರತದ ಗೌರವ ಇನ್ನಷ್ಟು ಹೆಚ್ಚಾಗಬಹುದು.

   ಭಾರತೀಯರು ಎಲ್ಲಾ ದೇಶದಲ್ಲಿ ಉತ್ತಮವಾದ ಸಂಬಂಧವನ್ನು ಬಯಸುತ್ತದೆ ಮತ್ತು ಅದಕ್ಕೆ ಬೇಕಾಗುವ ರೀತಿಯಲ್ಲಿಯೇ ನಡೆಯುತ್ತದೆ. ಭಾರತದ ನಿರ್ಧಾರಕ್ಕೆ ಧಕ್ಕೆ ತರುವಂತೆ ಮಾತಾನ್ನಾಡುವ ಜನರು ಭಾರತೀಯತೆಯನ್ನು ತಿಳಿದುಕೊಳ್ಳಬೇಕು. ಮತ್ತು ಭಾರತವನ್ನು ಸದೃಢಗೊಳಿಸಲು ಪ್ರಯತ್ನ ಮಾಡಬೇಕು. ಪಕ್ಷ, ಧರ್ಮ, ಜಾತಿ ಬೇದವನ್ನು ಮರೆತು ನಾನು ಭಾರತೀಯನೆಂಬ ಹೆಗ್ಗಳಿಕೆ ನಮ್ಮೊಳಗೇ ಇರಬೇಕು. ನಮ್ಮ ಗೌರವವನ್ನು ನಾವೇ ಬೆಳೆಸಿ ಉಳಿಸಬೇಕು.

  ಉಂಡ ಮನೆಗೆ ಕನ್ನ ಬಗೆಯುವ ಜನರ ಬಗ್ಗೆ ಕಡಿವಾಣ ಬೀಳಬೇಕು, ನಿಜವಾದ ಭಾರತೀಯರ ಸಂಖ್ಯೆ ಇನ್ನಷ್ಟು ಹೆಚ್ಚಾಗಿ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಅಳಿಲ ಸೇವೆ ಮಾಡಿದಾಗ ಉರಿಯುವ ಬೆಂಕಿ ಆರಬಹುದು. ಇಲ್ಲವಾದಲ್ಲಿ ಉರಿಯುವ ಬೆಂಕಿಗೆ ತುಪ್ಪವಾದರೆ ಮಾಡದ ತಪ್ಪಿಗೆ ಬಲಿಯಾಗಿ ಸರ್ವ ನಾಶವಾಗುವ ಕಾಲ ಬರಲುಬಹುದು.

ಪ್ರಪಂಚದ ಎಲ್ಲರಿಗೂ ಒಳಿತಾಗಲಿ, ಸುಖ ಶಾಂತಿ ಈ ಜಗತ್ತಿನಲ್ಲಿ ನೆಲೆಯೂರಲಿ.

✍️ ಮಾಧವ. ಕೆ. ಅಂಜಾರು.

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ