(ಲೇಖನ -110)ಹೊಸ ಕನಸುಗಳ ಸುರಿಮಳೆ ದಿನ ಬಿಡದೆ ಕಾಡುತ್ತಿರಲು ನಿನ್ನ ಆಕರ್ಷಣೆ ಕಾರಣವಾಯಿತೇ?

( ಲೇಖನ- 110 ) ಪೂರ್ಣ ಚಂದಿರನ ಬೆಳಕಿನೊಳು ನಿನ್ನ ಸುಂದರ ಮೊಗವ ಕಾಣುವ ತವಕ ಚಂದಿರನ ಆಯುಷ್ಯದಷ್ಟು ನನ್ನ ಪ್ರೀತಿ ನಿನ್ನ ಜೊತೆಯಲಿರಲಿ, ದಿನದ 24 ಗಂಟೆಯ ಪ್ರತೀ ನಿಮಿಷ ನಿನ್ನ ಪ್ರೀತಿಯ ನಗು ಮೊಗವ ಕಾಣಲು  ಆಸೆಎನಗೆ , ನಿನ್ನಲಿರುವ ಆಕರ್ಷಣೆಯು ನಿದ್ದೆಗೆಡಿಸುತ್ತಿದೆ, ಆ ನಗು, ಮಾತುಗಳು ಕಿವಿಯೊಳಗೆ ಗುನುಗುತ್ತಿವೆ, ನಿನ್ನ ಕಾಲ್ಗೆಜ್ಜೆ ಶಬ್ದದೊಳು ಸುಂದರ ನಡಿಗೆ ಭೂಮಿಯೇ ನಾಚುತ್ತಿರುವಾಗ ನನ್ನ ಹೃದಯದ ವೇಗ ಹೆಚ್ಚುತ್ತಿರಲು ಕಾರಣ ನಿನ್ನ ಆಕರ್ಷಣೆಯೇ ಸರಿ. ಬದುಕು ನಾಲ್ಕು ದಿನ ಜೀವನದ ಏರಿಳಿತ ಅಲ್ಲಿ ಕುಳಿತುಕೊಳ್ಳಬೇಕೋ ಇಲ್ಲಿ ಸಮಯ ವೆಂಬ ವೇಗ ಬಹಳಷ್ಟು ಬೇಗ ಓಡುತ್ತಿದೆ ನಿನ್ನ ಕನಸು ಕಾಣುತ್ತಲೇ...! ಬೇಲೂರ ಶೀಲಾಬಾಲೆಯು ನಿನ್ನ ನೋಡಿ ಕೆತ್ತಲಾಗಿದೆಯೋ, ರಂಬೆ ಊರ್ವಶಿಯ ಸೌಂದರ್ಯಕೆ ನಿನ್ನ ಸೌಂದರ್ಯ, ಸಮನಾಗಿ ಕಾಡುತ್ತಿರುವ ಹೊಸ ಕನಸುಗಳ ಸುರಿಮಳೆ ದಿನ ಬಿಡದೆ ಕಾಡುತ್ತಿರಲು ನಿನ್ನ ಆಕರ್ಷಣೆ ಕಾರಣವಾಯಿತೇ?

        ಸಮ್ಮಿಲನದ ಆಕರ್ಷಣೆ, ನಿನ್ನ ಸೇರಲು ಬಯಕೆ, ಎತ್ತಿ ಮುತ್ತನೀಯಲು, ಸುತ್ತಿ ಬಿಗಿದಪ್ಪಿಕೊಳ್ಳಲು ಆ ಕೆಟ್ಟ ದೃಷ್ಟಿ ಬೀಳದಿರಲಿ, ಮಗುವಿನ ನಗುವಿಗೆ, ಪ್ರಣಯದ ಆಸೆಗೆ, ಎದುರಾಗದಿರಲಿ ಕರಿ ಮೋಡ, ಕಾಮನಬಿಲ್ಲಿನ ಬಣ್ಣಕ್ಕೆ ಮರುಳಾಗಿ ಕುಣಿಯುವ ನವಿಲಿನಂತೆ, ವಸಂತ ಋತುವಿನ ಕೋಗಿಲೆಯ ಸ್ವರ ಮಾಧುರ್ಯ ನಿನ್ನ ಕಂಠದೊಳು ಹೊರ ಹೊಮ್ಮತ್ತಲೇ ಹಾಯಾಗಿ ಜೋಗುಳವ ಹಾಡಿ ಮಲಗಿಬಿಡುವೆ ಮಗುವಂತೆ. ಪ್ರಪಂಚದ ಅತೀ ಹೆಚ್ಚು ಬೆಳೆಯುಳ್ಳ ವಸ್ತುವಿನೊಳಗೆ ಆ ನಿನ್ನ ಹೆಸರು ಮುದ್ರಣವಾಗಲಿ. ರಾಣಿಯ ಆಸ್ಥಾನ ನಿನ್ನ ಜೀವನದಲಿ ಲಭಿಸಲಿ, ಏಳು ಜನ್ಮದ ಅನುಬಂಧ ನಿನ್ನ ನನ್ನಲಿರಲಿ. ಮುದ್ದು ಮಾಡುತ್ತ ಸದ್ದು ಮಾಡದೇ ಬದುಕು ನಡೆಸುವ ಜೀವನ ನಿನ್ನದಾಗಲಿ. ಆಕರ್ಷಣೆ ನಿನ್ನಲಿ ಕಂಪನ ಎನ್ನಲಿ.

      ಚಿಗುರು ಬಳ್ಳಿಯು ಮರವನ್ನು ಸುತ್ತಿದಂತೆ, ಹೂ ಮೊಗ್ಗು ಪರಿಮಳವ ಸೂಸಿದಂತೆ, ಮುಂಜಾನೆಯ ಕಿರಣಕೆ ಹಕ್ಕಿಗಳು ಚಿಲಿಪಿಲಿಗುಟ್ಟಿದಂತೆ, ಬೆಟ್ಟದ ಅಂಚಿನಲಿ ಮೋಡಗಳು ಓಡಾಡಿದಂತೆ, ಕತ್ತಲೆಯ ಸಮಯದೋಳು ಹಣತೆಯೊಂದು ಬೆಳಗುತ್ತಾ ನಿನ್ನ ಮೊಗದ ಸೌಂದರ್ಯದ ತಿರುಳನ್ನು ಅನುಭವಿಸುವ ಸಮಯವನ್ನು ಕಾಯುತ್ತಿರುವೆ, ನಿನ್ನಲೆನೋ ಆಕರ್ಷಣೆ ಆ ದಿನಕ್ಕಾಗಿ ಕಾಯುತ್ತಿರುವೆ. ವೇಗದ ದಿನದೊಳಗೆ ಆಯುಷ್ಯವು ಓಡುತ್ತಿದೆ, ನಿಲ್ಲದ ಸಮಯದೊಳು ಶಕ್ತಿಯು ಕಳೆಯುತ್ತಿದೆ ತಡ ಮಾಡದೇ ಸೆರೆನ್ನ ಭಯ ಬೇಡ, ಸನ್ನೆಗಾಗಿ ನೋಡುತ್ತಿರುವೆ ಅದೇನೋ ಆಕರ್ಷಣೆ ನಿನ್ನಲಿ.

    ಹಾಲಿನ ಬಿಳುಪು, ವಜ್ರದ ಹೊಳಪು, ಸೂರ್ಯನೇ ನಾಚುವ ನಿನ್ನ ಕಿರಣದ ಶಕ್ತಿಗೆ ಮುಸ್ಸಂಜೆಯ ಆಕಾಶದ ಹಕ್ಕಿಗಳ ಆಟೋಟ, ಗಿಡ ಮರ ಬಳ್ಳಿಯ ಬೇಸರದ ನೋಟ, ಹೊಸ ದಿನದ ಆರಂಭ ಜೀವ ಸಂಕುಲದ ಕಾಯುವಿಕೆ ಸೂರ್ಯ ಮೇಲೇಳುತ್ತಲೇ ಭರವಸೆಗಳ ಚಿಗುರುವಿಕೆ, ಅದೇನೋ ಆಕರ್ಷಣೆ ಮುನುಗ್ಗಲಿ ಬದುಕ ಬಂಡಿ. 

       ಆ ಒಂದು ಶಬ್ದಕೆ ಅದೆಷ್ಟು ಶಕ್ತಿ, ಆ ಒಂದು ಮಾತಿಗೆ ಅದೆಷ್ಟು ಶಕ್ತಿ, ಕಥೆಯನ್ನು ಬರೆಯಬಹುದು, ಕವನವನೂ ಬರೆಯಬಹುದು, ಕಾದಂಬರಿಯನ್ನೂ ಬರೆಯಲು ಬಹುದು, ಇತಿಹಾಸವನ್ನೇ ಬರೆಯಬಹದು, ಆಕರ್ಷಣೆ ಕಾರಣ ನಡೆಯುತ್ತಿರಲಿ ಸುಖ ಜೀವನ. ಹೆಜ್ಜೆಯ ಗುರುತು ನಮಗೆ ಕಾಣದಿದ್ದರೂ ನಮ್ಮನು ಅನುಸರಿವ ಜೀವಕೆ ಕಾಣ ಸಿಗುತ್ತದೆ, ಬೇಸರವಾದಾಗ ಹಾಡಿಬಿಡು ಕಣ್ಣೀರು ಬಂದಾಗ ಹೇಳಿಬಿಡು, ಜೀವನ ಸೊನ್ನೆಎಂದಾಗ ಮತ್ತೆ ಮೇಲೆದ್ದುಬಿಡು, ನಿನ್ನ ಆಕರ್ಷಣೆ ಮತ್ತೆ ಬಡಿದೆಬ್ಬಿಸಿದಾಗ.

      ಬದುಕು ಸಾಗಲಿ ಮುಂದೆ ಹೋಗಲಿ, ಕನಸು ಸೇರಲಿ ನನಸಾಗಲಿ, ನಗುವಿನ ಜೀವನ ನಿನ್ನದಾಗಿರಲಿ ಹೊಸ ಆಕರ್ಷಣೆ ಸೌಂದರ್ಯವ ಹೆಚ್ಚಿಸಲಿ ದೇಹ ಹಳೆಯದಾದರೂ ಹೊಸ ಕನಸುಗಳು ಚಿಗುರಲಿ ನಮ್ಮ ಗೆಳೆತನ ಅಮರವಾಗಿರಲಿ.

      ಸವಿನೆನಪಿಗಾಗಿ ಈ ಪದಗುಂಚ, ಸವಿ ಮಾತಿಗಾಗಿ ಈ ಪದಗಳ ಸರಮಾಲೆ, ನಾಳೆಎಂಬ ಅರಿಯದ ನಾನು ನಿಮಗಾಗಿ ಕೊಡುವ ಮನದ ಕಾಣಿಕೆ, ಹೂವಂತೆ ಸ್ವೀಕರಿಸಿ, ಜೇನಂತೆ ಝೆಕರಿಸಿ ಬಾಳಿನ ಉಯ್ಯಾಲೆಯ ಹಾಡುತ ಅನುಭವಿಸಿ.

     ನಿಮ್ಮ ಪ್ರತೀ ಕನಸು ನನಸಾಗಲಿ ನಿಮ್ಮ ಪ್ರಯತ್ನಕ್ಕೆ ಫಲ ಸಿಗಲಿ, 

ಬರಹ ಕೇವಲ - ವಿಭಿನ್ನವಾಗಿ - ನಿಮ್ಮೆರಡು ಪ್ರೀತಿಯ ಮಾತಿಗಾಗಿ 🌹





Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ