ಲೇಖನ -116) ಇಸವಿ 2024 ರ, 24 ಕನಸುಗಳು ನನಸಾಗಲಿ ನಮ್ಮ ನಿಮ್ಮೆಲ್ಲರ ಬದುಕು ಹಸನಾಗಲಿ,

✍️Madhav K Anjar



(ಲೇಖನ -116) ಇಸವಿ 2024 ರ, 24 ಕನಸುಗಳು ನನಸಾಗಲಿ ನಮ್ಮ ನಿಮ್ಮೆಲ್ಲರ ಬದುಕು ಹಸನಾಗಲಿ,  ವರುಷದ ಕೊನೆಯ ದಿನದಲ್ಲಿ ನಾವೆಲ್ಲರೂ ಭವ್ಯ ಭಾರತದ ಕನಸಿಗೆ ಸೇತುವೆಯಾಗೋಣ, ಡಿಸೆಂಬರ್ 31, 2023. ರ ರಾತ್ರಿ 12 ಗಂಟೆಗೆ ಎಲ್ಲರೂ ಹೊಸ ವರುಷವನ್ನು ಸ್ವಾಗತಿಸಲು ತಯಾರಿಯಲ್ಲಿದ್ದೀರಾ?, ಹೆಚ್ಚಿನ ಜನರು ತಮ್ಮ ಗೆಳೆಯ ಗೆಳತಿ ಕುಟುಂಬ ಮತ್ತು ಸಂಗಡಿಗರೊಂದಿಗೆ ಸೇರಿ ವಿಭಿನ್ನ ರೀತಿಯ ಆಚರಣೆಗೆ ಅಣಿಯಗುತ್ತೀರಿ ಆದರೆ ನಮ್ಮ ಆಚರಣೆ ಕೇವಲವಾಗಿ ಮೋಜು ಮಸ್ತಿಗೆ ಸೀಮಿತವಾಗಿರದೆ ಕೆಲವೊಂದು ಕನಸುಗಳ ಜೊತೆಗೆ ಆಚರಿಸುವಂತಾಗಲಿ.  ಸಾವಿರಾರು ಕನಸುಗಳನ್ನು ಹೊತ್ತು  ಮುನ್ನುಗ್ಗುತ್ತಿರುವ ನಮ್ಮ ದೇಶಕ್ಕಾಗಿ ನಿಮ್ಮೆಲ್ಲರ ಕಿರು ಕಾಣಿಕೆ ಇರಲಿ. ಅದೇನು ಅಂತಹದು ಆಲೋಚನೆಗಳು ನಿಮ್ಮ ಮನಸಲ್ಲಿ ಮೂಡಿಲ್ಲವೇ, ಇಂದು ಹೊಸ ಚಿಂತನೆಗಳೊಂದಿಗೆ ಹೊಸ ವರುಷವನ್ನು ಸ್ವಾಗತಿಸಲು ನಾವೆಲ್ಲರೂ ತಯಾರಾಗೋಣ.


          ಭಾರತವೆಂಬುವುದು ಸೌಭಾಗ್ಯವಂತರ ದೇಶ, ಪ್ರಪಂಚದಲ್ಲಿ ಇನ್ನೆಲ್ಲೂ ಇಲ್ಲದ ಸ್ವಾತಂತ್ರ್ಯ, ನಮ್ಮ ದೇಶದ ಮಣ್ಣಲ್ಲಿ, ಪ್ರತೀ ಪ್ರಜೆಗೂ ಇಲ್ಲಿದೆ ಹಕ್ಕು ಸಾಧಿಸಬೇಕೆಂದು ಛಲವಿದ್ದರೆ ಭಾರತ ಸೂಕ್ತ ಪ್ರದೇಶ, ಸಂಪತ್ತಿನ ಆಗರವಾಗಿದ್ದ ದೇಶವನ್ನು ಅದೆಷ್ಟು ವಿದೇಶಿಗರು ಬಂದು ಲೂಟಿ ಮಾಡಿದ್ದರೂ ಬರಿದಾಗಿಸಲು ಸಾಧ್ಯವಾಗಲಿಲ್ಲ, ಅನೇಕ ದೇಶ ಭಕ್ತರನ್ನು ಕೊಂದು ರಕ್ತ ಕುಡಿದಿದ್ದರೂ ಭಾರತವನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ. ಇಂದಿಗೂ ಅಲ್ಲಲ್ಲಿ ಕೆಲವು ದೇಶ ದ್ರೋಹಿಗಳು ತನ್ನ ಸ್ವಂತ ಲಾಭಕ್ಕಾಗಿ ದೇಶದೊಳಗೆ ನಿಂತು ಬೆಂಕಿ ಇಡುತ್ತಿದ್ದಾರೆ.ಆದರೆ ಎಂದಿಗೂ ಏನನ್ನೂ ಮಾಡಲು ಸಾಧ್ಯವಿಲ್ಲ.

             ಪ್ರಪಂಚಕ್ಕೆ ಗೊತ್ತಿರುವಂತೆ ಭಾರತೀಯರು ಬುದ್ದಿವಂತರು, ವಿವೇಕವುಳ್ಳವರು, ಮತ್ತು ತಾಳ್ಮೆ ಸಹನೆಯಿಂದ ವರ್ತಿಸುವವರು ಎಂಬುವುದನ್ನು ಸಾಬೀತುಪಡಿಸಿದ್ದಾರೆ. ವಿವಿಧ ಸಂಸ್ಕೃತಿ, ಜಾತಿ ಪಂಗಡಗಳು  ಚೆನ್ನಾಗಿ ಬದುಕುತ್ತಿರುವ ದೇಶವೇ ನಮ್ಮ ಭಾರತ ದೇಶ. ನಮ್ಮ ದೇಶಕ್ಕೆ ನಾವೇನು ಕೊಡುಗೆಯನ್ನು ಕೊಡಬಹುದು? ನಿಮ್ಮ ಪ್ರಶ್ನೆಗೆ ನನ್ನ ಕೆಲವು ಸಲಹೆಗಳು, ನಮ್ಮ ದೇಶ ಇತರ ದೇಶಗಳಿಗಿಂತ ಆರ್ಥಿಕವಾಗಿ ಇನ್ನಷ್ಟು ಮುಂದುವರೆಯಬೇಕಾದರೆ ನಾವು ಭಾರತೀಯರು  ಎಲ್ಲರೂ ಒಂದಾಗಿ ಕೈ ಜೋಡಿಸಿದರೆ ಅಭಿವೃದ್ಧಿ ಅನ್ನುವುದು ಬಹಳಷ್ಟು ಬೇಗನೆ ಆಗುತ್ತದೆ. ನಿಮ್ಮ ಸುತ್ತಮುತ್ತಲಿನ ಕಡೆಗಳಲ್ಲಿನ ನಡೆಯುವ ಅವ್ಯವಹಾರ,ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದಲ್ಲಿ ಅಂದರೆ ಪ್ರಾಮಾಣಿಕವಾಗಿ ಕೆಲಸವನ್ನು ಮಾಡದೇ ಇರುವ ಜನರನ್ನು ಹಿಡಿದು ಸರಿದಾರಿಗೆ ತರುವಲ್ಲಿ ಚಿಕ್ಕಪುಟ್ಟ ಪ್ರಯತ್ನವನ್ನು ಮಾಡಬೇಕು, ಭ್ರಷ್ಟಾಚಾರ ನಿಲ್ಲಿಸುವಲ್ಲಿ ಎಲ್ಲಾ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸವನ್ನು ಮಾಡಬೇಕು, ಹಣವನ್ನು ಸಂಪಾದಿಸುವ ಭರದಿಂದ ನಿಮ್ಮ ನಿಜವಾದ ಜವಾಬ್ದಾರಿಯನ್ನು ಮರೆಯುತ್ತ ದೇಶದ ಸಂಪತ್ತನ್ನು ಒಂದು ಕಡೆ ಕೂಡಿಸಿ ದೇಶದ ಆರ್ಥಿಕತೆಗೆ ತೊಂದರೆಯಾಗುವಂತೆ ಬದುಕಬೇಡಿ.

     ಯುವಕರು, ಯುವತಿಯರು ಮುಂದಿನ ದಿನಗಳಲ್ಲಿ ಭಾರತವನ್ನು ಇನ್ನಷ್ಟು ಬೆಳೆಸಲು ತಯಾರಾಗಬೇಕು, ನಮ್ಮ ದೇಶದಲ್ಲಿ ತಯಾರಾಗುವ ಉತ್ಪನ್ನಗಳನ್ನು ಹೆಚ್ಚಾಗಿ ಉಪಯೋಗಿಸಿ, ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸಿ ಇನ್ನಿತರ ದೇಶಕ್ಕೆ ರಫ್ತು ಮಾಡಿ ದೇಶದ ಉದ್ಯೋಗ ಪ್ರಮಾಣವನ್ನು ಹೆಚ್ಚಿಸಬೇಕು. ನಿಮ್ಮ ಊರಿಗೆ ಬೇಕಾಗುವ ಸಂಪತ್ತನ್ನು ನೀವುಗಳೇ ತಯಾರಿಸಿ ಭಾರತಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು. ಸಂಪಾದನೆಯ ಒಂದಷ್ಟು ಪ್ರಮಾಣವನ್ನು ಭಾರತೀಯ ಸೇನೆ ಮತ್ತು ಮುಂದಿನ ಪೀಳಿಗೆಗೆ ಕೂಡಿಡಬೇಕು.

      ನಿಮ್ಮ ಊರಿನ ರಸ್ತೆ, ದಾರಿದೀಪ, ನೀರು ಪೂರೈಕೆ, ಮತ್ತು ಮೂಲಭೂತ ಸೌಕರ್ಯ ವನ್ನು ಪಡೆಯುವಲ್ಲಿ ಧೈರ್ಯವಾಗಿ ಮುನ್ನುಗ್ಗುಬೇಕು, ಒಬ್ಬೊಬ್ಬರು ನಿಮ್ಮ ಕೆಲಸಕ್ಕೆ ಅಡ್ಡ ದಾರಿಯಾಗಿ ನಿಂತರೂ ಲೆಕ್ಕಿಸದೆ ಮುನ್ನುಗ್ಗುಬೇಕು. ಭಾರತದ ಉತ್ಪನ್ನಗಳನ್ನು ಹೆಚ್ಚಾಗಿ ಉಪಯೋಗಿಸಿ ಇನ್ನೊಬ್ಬರಿಗೂ ಮಾದರಿಯಾಗಬೇಕು. ರಾಜಕೀಯ ಕ್ಷೇತ್ರದಲ್ಲಿ ಯುವಕ ಯುವತಿಯರು ಹೆಚ್ಚಿನ ಆಸಕ್ತಿಯನ್ನು ತೋರಿಸಬೇಕು.

      ಪ್ರಕೃತಿಯನ್ನು ರಕ್ಷಿಸುವ ಮತ್ತು ಆರೈಕೆ ಮಾಡುವ ಕೆಲಸವನ್ನು ಮಾಡಬೇಕು, ಊರಿನ , ಶಾಲೆ, ಕಾಲೇಜುಗಳಲ್ಲಿ ಭಾರತದ ಕನಸಿನ  ವಿದ್ಯಾರ್ಥಿಗಳು ದಿನದಿಂದ ದಿನಕ್ಕೆ ಹೆಚ್ಚಾಗಬೇಕು. ಮುಂದಿನ ಹತ್ತು ವರುಷದ ಒಳಗೆ ಭಾರತ ಪ್ರಪಂಚದ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಬೇಕು. ಅದಕ್ಕೆ ನಮ್ಮ ನಿಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನ ಇರಬೇಕು.

    ಹೊಸ ವರುಷದ 24 ಕನಸುಗಳ ಪಟ್ಟಿಯನ್ನು ಈಗಲೇ ತಯಾರಿಸಿ 1-1-2024 ರಂದು ಕಾರ್ಯರೂಪಕ್ಕೆ ತರುವುದಕ್ಕೆ ಪ್ರಯತ್ನಿಸೋಣ.

ಜೈ ಭಾರತ

    ✍️ಮಾಧವ. ಕೆ. ಅಂಜಾರು 

        










       

        

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ