(ಲೇಖನ -113) ತುಳುನಾಡು ಮತ್ತು ತುಳು ಸಂಸ್ಕೃತಿ, ತುಳುವರು ಪ್ರಪಂಚದ ಎಲ್ಲಾ ಕಡೆಯಲ್ಲೂ ಸಿಗುತ್ತಾರೆ
✍️Madhav. K. Anjar
(ಲೇಖನ -113) ತುಳುನಾಡು ಮತ್ತು ತುಳು ಸಂಸ್ಕೃತಿ, ತುಳುವರು ಪ್ರಪಂಚದ ಎಲ್ಲಾ ಕಡೆಯಲ್ಲೂ ಸಿಗುತ್ತಾರೆ, ತುಳುನಾಡಿನ ಜನರಲ್ಲಿನ ಜೀವನ ಪದ್ಧತಿ, ಧೈರ್ಯ, ಬುದ್ದಿವಂತಿಕೆ, ಸೌಂದರ್ಯ ಎ ಭಾಷಾ ಗೌರವ, ವ್ಯಕ್ತಿ ಗೌರವ, ದೇಶ ಭಕ್ತಿ ಹಾಗೂ ಅನೇಕ ತರಹದ ವಿಶೇಷತೆ ತುಳುನಾಡಿನ ಜನರಲ್ಲಿ ನೋಡಬಹುದು. ಅದು ಹೇಗೆ, ತುಳುವರು ಯಾಕೆ ಅಷ್ಟು ಬುದ್ದಿವಂತರು ಅನ್ನುವ ಪ್ರಶ್ನೆ ಮೂಡ ಬಹದು. ತುಳು ಭಾಷೆ ಪುರಾತನ ಭಾಷೆ, ಶೇಕಡಾ 99 % ಜನರು ತುಳು ಬಲ್ಲವರು, ಇತ್ತೀಚಿನ ದಿನದ ಇಂಗ್ಲಿಷ್ ಪ್ರಭಾವದ ಕಾರಣಕ್ಕೂ ತುಳು ಭಾಷೆ ತಲೆಬಾಗುತ್ತಿಲ್ಲ ಯಾಕೆಂದರೆ ತುಳು ಭಾಷೆಗೆ ಯಾವ ಭಾಷೆಯೂ ಪೈಪೋಟಿ ನೀಡಲು ಸಾಧ್ಯವಿಲ್ಲ. ತುಳು ಭಾಷೆಯನ್ನು ಬಲ್ಲವರು ಮಾತ್ರ ಭಾಷೆಯ ವಿಶೇಷತೆಯ ಬಗ್ಗೆ ತಿಳಿದಿರುತ್ತಾರೆ.
ಉದಾಹರಣೆಗೆ, " ನಮಸ್ಕಾರ ಈರ್ ಎಂಚ ಉಲ್ಲರ್ " ಇದರ ಅರ್ಥ ಕನ್ನಡದಲ್ಲಿ " ನಮಸ್ಕಾರ ನೀವು ಹೇಗಿದ್ದೀರಿ " ಇಲ್ಲಿ ಈ ವಾಕ್ಯವನ್ನು ಕನ್ನಡದಲ್ಲಿ ಕೇವಲ ಹಿರಿಯರಿಗೆ ಉಪಯೋಗಿಸುತ್ತಾರೆ, ಆದರೆ ತುಳು ಭಾಷೆಯಲ್ಲಿ ಹಿರಿಯರಿಗೂ, ಕಿರಿಯರಿಗೂ ಉಪಯೋಗಿಸುತ್ತಾರೆ ಯಾಕೆಂದರೆ ತುಳು ಭಾಷೆ ಕಿರಿಯರಿಂದ ಹಿರಿಯರವರೆಗೂ ಗೌರವವನ್ನು ಕೊಡುವ ಶಬ್ದ ಅತೀ ಹೆಚ್ಚಾಗಿ ಉಪಯೋಗಿಸುತ್ತಾರೆ. ಅದು ಕೂಡ ಒಬ್ಬರಿಗೆ ಬೈಗುಳ ಕೊಡುವ ಸಂಧರ್ಭದಲ್ಲೂ ಗೌರವ ಶಬ್ದದ ಉಪಯೋಗ ಮಾಡುತ್ತಾರೆ. ಬೇರೆ ಭಾಷೆಗಳಲ್ಲಿ ಉಪಯೋಗಿಸುವ ಅತೀ ಕೆಟ್ಟ ಶಬ್ದದ ಉಪಯೋಗ ತುಳು ಭಾಷೆಯಲ್ಲಿ ಕಡಿಮೆ ಎಂದು ಹೇಳಬಹುದು. ಕುಟುಂಬದ ಪ್ರತಿಯೊಬ್ಬ ಸದಸ್ಯ ತುಳು ಭಾಷೆಯನ್ನು ಅತೀ ಗೌರವದಿಂದ ಉಪಯೋಗ ಮಾಡುತ್ತಾರೆ. ಇಲ್ಲಿ ಏಕ ವಚನಗಳ ಶಬ್ದದ ಉಪಯೋಗ ಬಹಳಷ್ಟು ಕಡಿಮೆಯಾಗಿರುತ್ತದೆ.
ಬಾರ್ಕುರು ತುಳು ನಾಡಿನ ರಾಜಧಾನಿ, ಇಂದಿಗೂ ಬಾರ್ಕುರು ಮತ್ತು ಅದರ ಇತಿಹಾಸವನ್ನು ತಿಳಿದಾಗ ತುಳು ನಾಡಿನ ಆಳವನ್ನು ನೋಡಬಹುದು. ತುಳುವರು ಹೋಟೆಲು ಉದ್ಯಮ, ಚಲನಚಿತ್ರ ನಟನೆ, ವಿಶ್ವ ಸುಂದರಿಯರ ಸ್ಪರ್ಧೆ, ಓದು, ಬರಹ, ಆಟೋಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಮತ್ತು ಮೀನು, ತರಕಾರಿ ತಿಂಡಿ ತಿನಸು, ಮತ್ತು ಮಾಂಸಹಾರ ಅಡುಗೆಯನ್ನು ಬಹಳಷ್ಟು ಘಮ ಘಮಿಸುವಂತೆ ಮಾಡುತ್ತಾರೆ. ಉಡುಪಿ ಹೋಟೆಲು ಪ್ರಪಂಚದ ಎಲ್ಲಾ ಕಡೆಗೂ ವಿಸ್ತರಿಸಿದೆ, ಕೋರಿ ರೊಟ್ಟಿ, ಮೀನು ಊಟ, ಮತ್ತು ಉತ್ತಮವಾದ ಚಲನಚಿತ್ರ ನಟ ನಟಿಯರು, ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತುಳುವ ಜನರು ಯಾವ ಧರ್ಮದವರೇ ಆಗಲಿ "ಈರೆನ ಊರು ಒಲ್ಪ " ನಿಮ್ಮ ಊರು ಯಾವುದು ಎಂಬ ಶಬ್ದದ ಉಪಯೋಗ ಆರಂಭವಾದಂತೆ ನೇರವಾಗಿ ತುಳು ಭಾಷೆಯಲ್ಲಿಯೇ ಸಂಭಾಷಣೆ ತೊಡಗಿಸಿಕೊಳ್ಳುತ್ತಾರೆ. ತುಳು ಭಾಷೆ ಪ್ರೀತಿಯ ಭಾಷೆ, ಕಲಿಯಲು ಸುಲಭ, ಮಾತನಾಡಲು ಇನ್ನಷ್ಟು ಖುಷಿ.
ತುಳು ಭಾಷೆ ಬಲ್ಲವರು, ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ಮಲಯಾಳಂ ಮತ್ತು ಕೊಂಕಣಿ ಭಾಷೆಯನ್ನು ಕಲಿಯಬಲ್ಲ ಸಾಮರ್ಥ್ಯ ಹೊಂದಿರುತ್ತಾರೆ. ತುಳು ಭಾಷೆಯಲ್ಲಿ ಬ್ಯಾರಿ ಭಾಷೆ, ಕನ್ನಡ ಭಾಷೆ, ತಮಿಳು, ಮಲಯಾಳಂ ಭಾಷೆಯ ಹೆಚ್ಚಿನ ಶಬ್ದ ಹೊಂದಾಣಿಕೆಯಾಗುತ್ತದೆ. ತುಳು ಭಾಷೆ ಜನರನ್ನು ಒಗ್ಗೂಡಿಸುವ ಭಾಷೆ ಎಂದು ಹೇಳಿದರೂ ತಪ್ಪಾಗದು. ತುಳುನಾಡಿನ ಹೆಚ್ಚಿನ ಜನರು ದೇಶದ ನಾನಾ ಭಾಗಗಳಲ್ಲಿ ಇದ್ದಾರೆ, ಮುಂಬೈನಂತಹ ದೊಡ್ಡ ಪಟ್ಟಣದಲ್ಲಿ ತುಳುವರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಭಾಷೆಯ ಅಭಿಮಾನ ತುಂಬಾ ಆಳವಾಗಿ ಬೆರೂರಿದೆ.
ತುಳುನಾಡಿನ ಸಂಸ್ಕೃತಿ ಬೇರೆ ರಾಜ್ಯಗಳಿಗಿಂತ ತುಂಬಾನೇ ಚೆನ್ನಾಗಿದೆ ಎಂದು ಹೇಳಬಹುದು, ಇಲ್ಲಿ ಬಡವರಿಂದ ಸಿರಿವಂತ ಜನರವರೆಗೂ ಭೂತ, ಕೋಲ, ಯಕ್ಷಗಾನ, ಜಾತ್ರೆ, ಆಟಿ ಕಳಂಜಾ, ಗುಡ್ಡದ ಬೂತ, ದೈವ ದೇವಸ್ಥಾನ ಮತ್ತು ನಾಗರಾಧನೆ, ಕಂಬೆರ್ಲೆ ಕಳ, ಗರೋಡಿ, ಮರಾಠಿ ಜನರ ದೇವಸ್ಥಾನ ಮತ್ತು ಅನೇಕ ಹಬ್ಬಗಳನ್ನು ಬಹಳಷ್ಟು ಶೃದ್ದೆ ಯಿಂದ ಆಚರಿಸುತ್ತಾರೆ. ತುಳುವ ಸಂಸ್ಕೃತಿ ಯನ್ನು ಹೋದಲೆಲ್ಲಾ ಕೊಂಡು ಹೋಗುತ್ತಾರೆ. ತುಳುನಾಡಿನಲ್ಲಿ, ಕೊಂಕಣಿಗರು , ಬ್ಯಾರಿ ಭಾಷಿಗರು, ಮರಾಠಿ ಗರು, ಕುಡುಬಿ, ಮಹಾರಾಷ್ಟ್ರ ಕೇರಳ, ತಮಿಳು, ಮತ್ತು ಹೆಚ್ಚಿನ ವಿದೇಶಿಗರು ವಾಸಮಾಡುತ್ತಿದ್ದಾರೆ, ಒಮ್ಮೆ ತುಳುನಾಡಿಗೆ ಬಂದವರು ಬಿಟ್ಟು ಹೋಗುವ ಮನಸ್ಸನ್ನು ಮಾಡುವುದಿಲ್ಲ ಯಾಕೆಂದರೆ ತುಳುವರು ಎಲ್ಲರನ್ನು ಗೌರವಿಸುತ್ತಾರೆ. ಮತ್ತು ದೇಶ ವಿದೇಶದ ಜನರಲ್ಲಿ ಬೆರೆಯುತ್ತಾರೆ.
ಸುಂದರ ನದಿಗಳು, ಪ್ರಕೃತಿ ಸೌಂದರ್ಯ, ಮೆಡಿಕಲ್ ಕಾಲೇಜು, ತಾಂತ್ರಿಕ ಕಾಲೇಜು, ದೊಡ್ಡ ಮಟ್ಟದ ಮತ್ತು ಸಣ್ಣಮಟ್ಟದ ಬಂದರು, ಮೀನುಗಾರಿಕೆ, ಕೃಷಿ, ಉದ್ಯಮ, ರೈಲ್ವೆ, ವಿಮಾನ ನಿಲ್ದಾಣ, ಕೈಗಾರಿಕೆ, ಉತ್ಪನ್ನ ಘಟಕ, ಕ್ರೀಡಾ ಚಟುವಟಿಕೆ, ಹೀಗೆ ಅನೇಕ ವ್ಯವಸ್ಥೆ ಹೊಂದಿರುವ ಪ್ರದೇಶ. ಹಾಗಾಗಿ ಉದ್ಯಮಿಗಳು ತುಳುನಾಡನ್ನು ಅತೀ ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ತುಳುವರು ಸ್ವ ಉದ್ಯೋಗಕ್ಕೆ ಅಥವಾ ಹೋಟೆಲು ಉದ್ಯಮಕ್ಕೆ ಹೆಚ್ಚು ಆಕರ್ಷಿತರಾಗುತ್ತಾರೆ. ಪ್ರಾಮಾಣಿಕ ಜನರ ಸಂಖ್ಯೆ ತುಳುವರಲ್ಲಿ ಹೆಚ್ಚಾಗಿದೆ. ಮತ್ತು ಧೈರ್ಯವಂತ ಜನರನ್ನು ಕೂಡ ನೋಡಬಹುದು.
ತುಳು ಅಭಿಮಾನ ನಮ್ಮ ರಕ್ತದಲ್ಲಿ ಬೇರುರಿದೆ, ಅದು ಇನ್ನಷ್ಟು ಬೆಳೆಯುತ್ತ ಹೋಗುತ್ತದೆ, ನಾವುಗಳು ಎಲ್ಲಾ ಭಾಷೆಯನ್ನು ಕಲಿಯಬೇಕು, ಎಲ್ಲಾ ಭಾಷೆಯನ್ನು ಉಪಯೋಗಿಸಲು ಪ್ರಯತ್ನಿಸಬೇಕು, ಎಲ್ಲಾ ಭಾಷೆಯನ್ನು ಗೌರವಿಸಬೇಕು ಮತ್ತು ಉಳಿಸಬೇಕು, ಬೆಳೆಸಬೇಕು. ಅತೀ ಹೆಚ್ಚು ಭಾಷೆ ಕಲಿತರೆ ನಮ್ಮ ಜೀವನ ಬಹಳಷ್ಟು ಸುಲಭವಾಗುತ್ತದೆ.
ಭಾರತೀಯರು ಬಹು ಭಾಷಿಗರು ಇಲ್ಲಿ ಯಾರೂ ಮೇಲಲ್ಲ ಕೀಳಲ್ಲ, ತಮ್ಮ ಭಾಷೆಗಳಲ್ಲಿ ಗೌರವ ಹೆಚ್ಚಿಸಿಕೊಂಡು ತಮ್ಮ ಭಾಷೆ ಇನ್ನುಳಿದ ಭಾಷೆ ನುಂಗಿ ಬಿಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿರುತ್ತದೆ.
ತಮ್ಮ ತಮ್ಮ ಭಾಷೆಯನ್ನು ಮರೆಯಬೇಡಿ, ಅದು ಯಾವುದೇ ಆಗಿರಲಿ ಆದಷ್ಟು ಉಪಯೋಗಿಸಿ ಮತ್ತು ಇನ್ನೊಬ್ಬರಿಗೆ ಕಲಿಸಿ ಆಗಲೇ ನಮ್ಮ ಪ್ರತೀ ಭಾಷೆ ಸಾಯದೆ ಚಿರಕಾಲ ಉಳಿಯಲು ಸಾಧ್ಯವಿದೆ. ನಿಮಗೆಲ್ಲರಿಗೂ ಒಳಿತಾಗಲಿ, ನಾನೊಬ್ಬ ತುಳುವ, ಮರಾಠಿಗ , ಕನ್ನಡಿಗ, ಹಾಗೆಯೇ ಕೊಂಕಣಿ, ತಮಿಳು,ಹಿಂದಿ ಮಲಯಾಳಂ, ಇಂಗ್ಲಿಷ್, ಅರೇಬಿಕ್ ಭಾಷೆಯನ್ನು ಕೂಡ ಕಲಿತು ಜೀವಿಸುವ ಬಡ ಜೀವಿ. ನಿಮ್ಮ ಆಶೀರ್ವಾದ ಸದಾ ಇರಲಿ 🙏🏿
ಸರ್ವೇರೆಗ್ಲಾ ಸೊಲ್ಮೆಲು 🙏🏿 ದೇವೆರೆಡ್ಡೆ ಮಲ್ಪಡ್. ಜೈ ತುಳುನಾಡು, ಜೈ ಕರ್ನಾಟಕ, ಜೈ ಭಾರತ 🌹
✍️ಮಾಧವ. ಕೆ. ಅಂಜಾರು
Comments
Post a Comment