(ಲೇಖನ -109) ಗ್ರಂಥಾಲಯ, ಈ ಗ್ರಂಥಾಲಯ ಎಂಬ ಶಬ್ದವನ್ನು ಕೇಳುವಾಗಲೇ ಮೈ ನವಿರೇಳುವುದು ಗ್ರಂಥದ ಆಲಯ

 (ಲೇಖನ -109) ಗ್ರಂಥಾಲಯ, ಈ ಗ್ರಂಥಾಲಯ ಎಂಬ ಶಬ್ದವನ್ನು ಕೇಳುವಾಗಲೇ ಮೈ ನವಿರೇಳುವುದು ಗ್ರಂಥದ ಆಲಯ - ಗ್ರಂಥಾಲಯ, ಸಾವಿರಾರು ಕವಿಗಳ, ವಿಜ್ಞಾನಿಗಳ, ಇತಿಹಾಸಕಾರರ, ತಂತ್ರಜ್ಞಾನ, ಕೃಷಿ, ಸಂಸ್ಕೃತಿ , ಧರ್ಮಗಳನ್ನು ಕಲಿಯುವ ಏಕೈಕ ಸ್ಥಳ ಗ್ರಂಥಾಲಯ. ಗ್ರಂಥಾಲಯವೆಂಬುವುದು ದೇವಾಲಯಕ್ಕಿಂತಲೂ ಮಿಗಿಲು, ನಮ್ಮ ಬದುಕಿನ ಉತ್ತಮವಾದ ದಿನಗಳನ್ನು ಕಾಣಬೇಕಿದ್ದರೆ ಪುಸ್ತಕಗಳನ್ನು ಓದಬೇಕು, ಪ್ರಪಂಚವನ್ನು ತಿಳಿಯಬೇಕಿದ್ದರೆ ಪುಸ್ತಕಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಂಡರೆ ಬದುಕಿನ ಕಷ್ಟದ ಸ್ಥಿತಿಯನ್ನು ಮತ್ತು ಉತ್ತಮ ಸ್ಥಿತಿಯನ್ನು  ಒಂದೇ ರೀತಿಯಲ್ಲಿ ನೋಡಿಕೊಳ್ಳುವ ಶಕ್ತಿಯನ್ನು ಯುಕ್ತಿಯನ್ನೂ ಪಡೆಯಲು ಸಾಧ್ಯವಿದೆ. ಪುಸ್ತಕಗಳನ್ನು ಓದುವ ಹವ್ಯಾಸ ಎಲ್ಲರಲ್ಲೂ ಇರುವುದಿಲ್ಲ, ನಮ್ಮ ಶಾಲಾ ಕಾಲೇಜುಗಳಲ್ಲಿ ಓದುವ ಪುಸ್ತಕ ಮತ್ತು ಜ್ಞಾನವೃದ್ಧಿಗೊಳಿಸುವ ಪುಸ್ತಕಗಳಿಗೆ ತುಂಬಾನೇ ವ್ಯತ್ಯಾಸಗಳಿರುತ್ತವೆ. ನಮ್ಮ ತರಗತಿಯಲ್ಲಿ ಓದುವ ಪಾಠವು ಹೆಚ್ಚಾಗಿ ಉದ್ಯೋಗನಿಮಿತ್ತ ಮತ್ತು ಸಂಪಾದನೆಯ ಮಾರ್ಗದರ್ಶನ ಮತ್ತು ಅಲ್ಪ ಸ್ವಲ್ಪ ಇತಿಹಾಸ, ತಂತ್ರಜ್ಞಾನವನ್ನು ಕಲಿಸಿಕೊಡುತ್ತದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಮೇಧಾವಿ ಎಂಬ ಸ್ಥಾನಕ್ಕೆ ಹೋಗಬೇಕಾದರೆ ಅವನು ತನ್ನ ಜೀವನ ಪಾಠಕ್ಕಿಂತಲೂ ಜಾಸ್ತಿಯಾಗಿ ಅತೀ ಉತ್ತಮವಾದ ಪುಸ್ತಕಗಳನ್ನು ಓದಬೇಕು, ಉತ್ತಮವಾದ ಪುಸ್ತಕವನ್ನು ಓದಿದಾಗ ಜ್ಞಾನ ವೃದ್ಧಿಯಾದಂತೆ ಅವನ ಗುಣ ನಡತೆ ಶಕ್ತಿ ಯುಕ್ತಿ, ತೇಜಸ್ಸು ಎಲ್ಲವನ್ನೂ ಪಡೆದುಕೊಳ್ಳುತ್ತಾನೆ.




          ಬುದ್ದಿವಂತಿಕೆ, ಜ್ಞಾನ ಕೆಲವೇ ಕೆಲವು ಜನರಲ್ಲಿ ಇರುತ್ತದೆ, ಇನ್ನೊಬ್ಬರ ಜ್ಞಾನ ವನ್ನು ಪಡೆದುಕೊಳ್ಳುತ್ತ ಅದರೊಂದಿಗೆ ಒಂದು ನಿರ್ದಿಷ್ಟ ವಿಷಯದಲ್ಲಿ ಆಳವಾಗಿ ಜ್ಞಾನವನ್ನು ಪಡೆದುಕೊಂಡಾಗ ನಿಮ್ಮೆದುರಿಗೆ ನಿಲ್ಲುವ ಶಕ್ತಿ ಯಾರಿಗೂ ಇರುವುದಿಲ್ಲ ಯಾಕೆಂದರೆ ನಿಮ್ಮಲ್ಲಿರುವ ಜ್ಞಾನ ಎದುರಿನ ಎಷ್ಟೇ ದೊಡ್ಡ ಶಕ್ತಿಯನ್ನು ನಿಮ್ಮ ಕಾಲು ಹಿಡಿಯುವಂತೆ ಮಾಡುತ್ತದೆ. "Knowledge is Power "ಈ  ವಾಕ್ಯ ಎಷ್ಟು ಶಕ್ತಿಯನ್ನು ಹೊಂದಿದೆ ಅಲ್ಲವೇ? ಅಜ್ಞಾನಿ ಅಥವಾ ಓದದೇ ಇರುವ, ವಿದ್ಯೆಗೆ ಬೆಲೆ ಕೊಡದೇ ಇರುವ ಯಾರೇ ಆಗಲಿ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯವಿಲ್ಲ, ಯಶಸ್ಸು ಗಳಿಸಿದರೂ ನಿಯಮಿತ ಮತ್ತು ಚಿಕ್ಕಮಟ್ಟದ್ದಾಗಿರುತ್ತದೆ. ನಾವುಗಳು ಓದುವ ಪುಸ್ತಕಗಳು ನಮ್ಮನ್ನು ಯಾವ ದಿಕ್ಕಿಗೂ ಕೊಂಡುಹೋಗಬಹುದು, ಕಥೆ, ಕಾದಂಬರಿ, ಕವನಗಳು, ಇತಿಹಾಸ ನಮ್ಮ ಮನಸ್ಸಿನ ಹೆಚ್ಚಿಸಲು ಸಾಧ್ಯವಿದೆ, ಒಂದೊಂದು ವಿಷಯಗಳು ನಮ್ಮ ಜೀವನಕ್ಕೆ ದಾರಿಯಾಗಬಹುದು, ನಮಗೆ ರಕ್ಷಣೆ ಉತ್ತಮ ಬುದ್ದಿ ಕೊಡಲೂ ಸಾಧ್ಯವಿದೆ.

         ನಾವು ಪುಸ್ತಕದ ಮೂಲಕ ಪಡೆಯುವ ಜ್ಞಾನ ನಮ್ಮ ಬದುಕಿಗೆ ಅಡಿಪಾಯವಾಗುತ್ತದೆ, ಪುಸ್ತಕ ಓದುವ ಹವ್ಯಾಸವನ್ನು ಚಿಕ್ಕಂದಿನಿಂದಲೇ ಬೆಳೆಸಿಕೊಳ್ಳಬೇಕು, ಪುಸ್ತಕ ಓದಿ ನಿದ್ದೆ ಬರುವಂತೆ ಇದ್ದರೆ ಜೀವನದಲ್ಲೂ ನಿದ್ದೆ ಮಾಡಿದಂತೆ. ಒಂದು ಸಲ ಓದುವ ಹವ್ಯಾಸವನ್ನು ಮಾಡಿಕೊಂಡಾಗ ಮುಂದಿನ ದಿನಗಳಲ್ಲಿ ನಮ್ಮನ್ನು ಪುಸ್ತಕಗಳೇ ಸ್ವಾಗತಿಸುತ್ತವೆ. ಓದು ಪ್ರಾರಂಬಿಸಲು ವಯಸ್ಸಿನ ಅಂತರವನ್ನು ನೋಡಬಾರದು, ಮಕ್ಕಳಿಗೆ ಈವಾಗಲೇ ಸಾಮಾಜಿಕ ಜಾಲ ತಾಣದ ದಾಸತ್ವದಿಂದ ಹೊರದಬ್ಬುವ ಕೆಲಸವನ್ನು ಮಾಡಬೇಕು. ಮೊಬೈಲ್ ಸಾಧನದಿಂದ ಪುಸ್ತಕದ ಬಗ್ಗೆ ಒಲವು ಮೂಡುವಂತೆ ಮಾಡಬೇಕು.

      ನಮ್ಮ ಗ್ರಾಮಗಳಲ್ಲಿ ಗ್ರಂಥಾಲಯದ ಸಂಖ್ಯೆಯನ್ನು ಹೆಚ್ಚಿಸಿ ಮಕ್ಕಳನ್ನು ಗ್ರಂಥಾಲಯಕ್ಕೆ ಆಕರ್ಷಸಬೇಕು. ಉತ್ತಮ ಪುಸ್ತಕ ಭಂಡಾರವನ್ನು ಹೊಂದಿರುವ ಜಾಗಗಳಲ್ಲಿ ನಮ್ಮನ್ನು ತೊಡಗಿಸಿಕೊಂಡು ಜ್ಞಾನವನ್ನು ವೃದ್ಧಿಸಿಕೊಂಡಾಗ ಜ್ಞಾನವೆಂಬುವುದು ನಮಗೆ ಶಕ್ತಿಯಾಗುತ್ತದೆ.

✍️ಮಾಧವ. ಕೆ. ಅಂಜಾರು 







Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ